Advertisement

ಇಂಡಿಯಲ್ಲಿ ಬಿಜೆಪಿ ವಿರುದ್ದ ಹರಿಹಾಯ್ದ ಎಚ್ಡಿಕೆ

11:07 AM Oct 23, 2021 | Shwetha M |

ಇಂಡಿ: ಇಂಡಿ ತಾಲೂಕನ್ನು ಸಮಗ್ರ ನೀರಾವರಿ ಮಾಡಬೇಕೆಂದು ಒತ್ತಾಯಿಸಿ ಕಳೆದ ಹಲವು ದಿನಗಳ ಹಿಂದೆ ರೈತರು ಧರಣಿ ನಡೆಸಿದರೂ ಸ್ಥಳಕ್ಕೆ ಬರದ ಜಲಸಂಪನ್ಮೂಲ ಸಚಿವರು ಈಗ ಸಿಂದಗಿ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಇದು ಬಿಜೆಪಿ ಸಂಸ್ಕೃತಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

Advertisement

ತಾಲೂಕಿನ ಹಂಜಗಿ ಗ್ರಾಮದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ತಾಂಬಾ ಗ್ರಾಮದಲ್ಲಿ ನೀರಾವರಿ ಕುರಿತು ಹೋರಾಟ ನಡೆದಾಗ ಸ್ಥಳಕ್ಕೆ ಭೇಟಿ ನೀಡಿದ್ದೆ. ಸೌಜನ್ಯಕ್ಕಾದರೂ ಸಚಿವರು ಬರಬೇಕಾಗಿತ್ತು ಎಂದರು.

ಅದಲ್ಲದೆ ಕೊರೊನಾ ಸಮಯದಲ್ಲೂ ಅವರು ವಿಜಯಪುರ ಜಿಲ್ಲೆಗೆ ಬರಲಿಲ್ಲ. ಕೊರೊನಾ ವಿಷಯಕ್ಕೆ ಜಿಲ್ಲೆಯ ಜನತೆಗೆ ಸ್ಪಂದಿಸಲಿಲ್ಲ. ಕೊರೊನಾ ಕಾಲಘಟ್ಟದಲ್ಲಿ ಅನೇಕ ಜನರು ಆಸ್ಪತ್ರೆಯಲ್ಲಿ ಬೆಡ್‌ ಸಿಗದೇ, ಆಮ್ಲಜನಕ ಸಿಗದೇ ಜೀವ ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದರು ಕಾರಜೋಳ ಸೌಜನ್ಯಕ್ಕಾದರೂ ಬರಬೇಕಾಗಿತ್ತು. ಅವರಿಗೆ ಅಧಿಕಾರ ಬೇಕು. ಅಭಿವೃದ್ಧಿ ಬೇಡ ಎಂಬ ಭಾವನೆ ಇದೆ ಎಂದರು.

ಈ ಜಿಲ್ಲೆಗೆ ನೀರಾವರಿ ಕುರಿತು ಬಿಜೆಪಿ ಕೊಡುಗೆ ಶೂನ್ಯ. ಯಡಿಯೂರಪ್ಪ, ಜಗದೀಶ ಶೆಟ್ಟರ ಮುಖ್ಯಮಂತ್ರಿಗಳಿದ್ದಾಗ ನೀಡಿದ ಅನುದಾನ ಕೇವಲ ಸಿಬ್ಬಂದಿ ಸಂಬಳ ಮತ್ತು ಕಾಲುವೆ ನಿರ್ವಹಣೆಗೆ ಮಾತ್ರ ಸಾಲುತ್ತಿತ್ತು ಎಂದು ವಿಷಾದಿಸಿದರು.

ಇದನ್ನೂಓದಿ: 2023ರಲ್ಲೂ ಬಿಜೆಪಿ ಸರ್ಕಾರ: ಶೆಟ್ಟರ್

Advertisement

ನಿಮಗೆ ಅಧಿಕಾರ ಇದೆ. ನೀವು ಆಲಮಟ್ಟಿನ ಆಣೆಕಟ್ಟಿನ ಎತ್ತರ 524 ಮೀ ಎತ್ತರಿಸಿ, ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ಮತದಾರರು ನಮಗೆ ಮತ ನೀಡಿದರೆ ನಾವು ಆಲಮಟ್ಟಿ ಆಣೆಕಟ್ಟಿನ ಎತ್ತರ 524 ಮೀ. ಮಾಡುತ್ತೇವೆ ಎಂದು ಸವಾಲು ಹಾಕಿದರು.

ದೆಹಲಿ, ಓರಿಸ್ಸಾ, ಪಶ್ಚಿಮ ಬಂಗಾಲ, ಕೇರಳ, ತಮಿಳನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷ ಆಡಳಿತವಿದೆ. ಅಲ್ಲಿ ಅಭಿವೃದ್ಧಿಯಾಗುತ್ತಿದೆ. ಬಿಜೆಪಿಯವರು ಕೇವಲ ಜನರ ಭಾವನೆ ಕೆರಳಿಸಿ ಆಯ್ಕೆಯಾಗುತ್ತಿದ್ದಾರೆ ಹೊರತು ಅಭಿವೃದ್ಧಿಯಿಂದ ಅಲ್ಲ ಎಂದರು. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನುದಾನವೇ ನೀಡುತ್ತಿಲ್ಲ. ನಮ್ಮ ಸಂಸದರು ಪ್ರಧಾನಿಗೆ ಕೇಳುವ ಧೈರ್ಯವೇ ಮಾಡುತ್ತಿಲ್ಲ. ಇವರೆಲ್ಲ ಮಾತಿನ ಶೂರರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next