ನವದೆಹಲಿ: ನೂರು ರೂಪಾಯಿಗಿಂತ ಕಡಿಮೆ ಹಣದ ಯುಪಿಐ ವಹಿವಾಟಿಗೆ ಸಂಬಂಧಿಸಿದಂತೆ ಜೂನ್ 25ರಿಂದ ಎಸ್ ಎಂಎಸ್ (SMS) ಅಲರ್ಟ್ ಕಳುಹಿಸುವುದನ್ನು ನಿಲ್ಲಿಸಲಾಗುವುದು ಎಂದು ಎಚ್ ಡಿಎಫ್ ಸಿ ಬ್ಯಾಂಕ್ ತಿಳಿಸಿದೆ.
ಇದನ್ನೂ ಓದಿ:IMDb ಟಾಪ್ 100 ಇಂಡಿಯನ್ ಸೆಲೆಬ್ರಿಟಿ ಲಿಸ್ಟ್: ದೀಪಿಕಾ ನಂ.1, ಸ್ಥಾನ ಪಡೆದ ಕನ್ನಡದ ಈ ನಟ
ಎಚ್ ಡಿಎಫ್ ಸಿ ಬ್ಯಾಂಕ್ ನ ಗ್ರಾಹಕರಿಗೆ ಎಲ್ಲಾ ಯುಪಿಐ ವಹಿವಾಟಿಗೆ ಸಂಬಂಧಿಸಿದಂತೆ ಇ-ಮೇಲ್ ಅಲರ್ಟ್ ರವಾನೆಯಾಗುತ್ತಿತ್ತು. ಆದರೆ ಜೂನ್ 25ರ ನಂತರ 100 ರೂಪಾಯಿಗಿಂತ ಅಧಿಕ ವಹಿವಾಟು ಮತ್ತು 500 ರೂಪಾಯಿಗಿಂತ ಅಧಿಕ ಹಣ ಯುಪಿಐ ಮೂಲಕ ಪಡೆದಲ್ಲಿ ಮಾತ್ರ ಗ್ರಾಹಕರಿಗೆ ಟೆಕ್ಟ್ಸ್ ನೋಟಿಫಿಕೇಶನ್ ಕಳುಹಿಸಲಾಗುವುದು ಎಂದು ಎಚ್ ಡಿಎಫ್ ಸಿ ಬ್ಯಾಂಕ್ ಪ್ರಕಟನೆ ತಿಳಿಸಿದೆ.
ಯುಪಿಐ ವಹಿವಾಟುಗಳ ಸರಾಸರಿ ಮೌಲ್ಯವು ಕಡಿಮೆಯಾಗುತ್ತಿದ್ದು, ಸಣ್ಣ ಪ್ರಮಾಣದ ಪಾವತಿ ಹೆಚ್ಚಳವಾಗುತ್ತಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಬ್ಯಾಂಕ್ ಪ್ರತಿದಿನ ಗ್ರಾಹಕರಿಗೆ ಕಳುಹಿಸುವ ಎಸ್ ಎಂಎಸ್ ಮೆಸೇಜ್ ಗಾಗಿ ಕೋಟ್ಯಂತರ ರೂಪಾಯಿ ವ್ಯಯಿಸುತ್ತಿದೆ. ಯುಪಿಐ ವಹಿವಾಟಿಗೆ ಸಂಬಂಧಿಸಿದಂತೆ ಎಚ್ ಡಿಎಫ್ ಸಿ ಬ್ಯಾಂಕ್ ಪ್ರತಿದಿನ ಅಂದಾಜು 40 ಕೋಟಿ ರೂಪಾಯಿ ವ್ಯಯಿಸುತ್ತಿದೆ ಎಂದು ತಿಳಿಸಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾದ ಮಾಹಿತಿ ಪ್ರಕಾರ, ಈಗಾಗಲೇ ಯುಪಿಐ ವಹಿವಾಟು 100 ಬಿಲಿಯನ್ ದಾಟಿದ್ದು, ವರ್ಷಾಂತ್ಯಕ್ಕೆ ಇದು 118 ಬಿಲಿಯನ್ ಡಾಲರ್ ಗೆ ತಲುಪುವ ಸಾಧ್ಯತೆ ಇದೆ ಎಂದು ಹೇಳಿದೆ.
ಗ್ರಾಹಕರ ಫೀಡ್ ಬ್ಯಾಕ್ ಆಧಾರದ ಮೇಲೆ ಕಡಿಮೆ ಪ್ರಮಾಣದ ಯುಪಿಐ ವಹಿವಾಟಿನ ಎಸ್ ಎಂಎಸ್ ಅಲರ್ಟ್ಸ್ ನಿಲ್ಲಿಸಲು ನಿರ್ಧರಿಸಲಾಗಿದೆ ಎಂದು ಎಚ್ ಡಿಎಫ್ ಸಿ ಬ್ಯಾಂಕ್ ತಿಳಿಸಿದೆ.