Advertisement

HDFCಗೆ 8ಸಾವಿರ ಕೋಟಿ ರೂ. ಲಾಭ :2020-21ನೇ ಆರ್ಥಿಕ ವರ್ಷದ ಅಂತಿಮ ತ್ತೈಮಾಸಿಕ ವರದಿ ಬಿಡುಗಡೆ

09:24 PM Apr 17, 2021 | Team Udayavani |

ನವದೆಹಲಿ: ಭಾರತದ ಅತಿ ದೊಡ್ಡ ಖಾಸಗಿ ಬ್ಯಾಂಕ್‌ ಎಂಬ ಹೆಗ್ಗಳಿಕೆ ಹೊಂದಿರುವ ಎಚ್‌ಡಿಎಫ್ಸಿ, 2020 -21ನೇ ಆರ್ಥಿಕ ವರ್ಷದ ಅಂತಿಮ ತ್ತೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. 2021ರ ಜನವರಿಯಿಂದ ಮಾರ್ಚ್‌ವರೆಗಿನ ತ್ತೈಮಾಸಿಕದಲ್ಲಿ ಬ್ಯಾಂಕ್‌ 8,186.51 ಕೋಟಿ ರೂ. ಲಾಭ ಪಡೆದಿದೆ ಎಂದು ಸಂಸ್ಥೆ ಹೇಳಿದೆ.

Advertisement

2019-20ರ ಅಂತಿಮ ತ್ತೈಮಾಸಿಕದಲ್ಲಿ ಕಂಪನಿ 6,927 ಕೋಟಿ ರೂ. ಲಾಭ ಗಳಿಸಿದ್ದು, ಅದಕ್ಕೆ ಹೋಲಿಸಿದರೆ 2020-21ರ ಅಂತಿಮ ತ್ತೈಮಾಸಿಕದಲ್ಲಿ ಕಂಪನಿಯ ಲಾಭ ಶೇ. 18.20ರಷ್ಟು ಏರಿಕೆಯಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಇದಲ್ಲದೆ, “”2020-21ರ ಕಡೆಯ ತ್ತೈಮಾಸಿಕದಲ್ಲಿ ಬಡ್ಡಿ ಆಧಾರಿತ ಒಟ್ಟಾರೆ ಆದಾಯ (ಎನ್‌ಐಐ) 17,120 ಕೋಟಿ ರೂ. ಆಗಿದ್ದು, 2019-20ರ ಅವಧಿಯಲ್ಲಿ ಇದು 15,204 ಕೋಟಿ ರೂ.ಗಳಷ್ಟಿತ್ತು. ಹಾಗಾಗಿ, ಎನ್‌ಐಐನಲ್ಲಿಯೂ ಶೇ. 12.6ರಷ್ಟು ಪ್ರಗತಿಯಾಗಿದೆ” ಎಂದು ಕಂಪನಿ ಪ್ರಕಟಿಸಿದೆ.

ಇದನ್ನೂ ಓದಿ :ಪ್ರಧಾನಿ ಮೋದಿ ಮಾತಿಗೆ ಮನ್ನಣೆ : ಕುಂಭಮೇಳ ಅಂತ್ಯ

Advertisement

Udayavani is now on Telegram. Click here to join our channel and stay updated with the latest news.

Next