ಹಾಸನ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾದ ಬೆಳೆ ಹಾನಿಗೆ ಮತ್ತು ರಸ್ತೆಗಳ ದುರಸ್ತಿಗೆ ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಮತ್ತು ಈ ವರ್ಷ ಅತಿವೃಷ್ಟಿ ಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರವನ್ನು ಸರ್ಕಾರ ಇದುವರೆಗೂ ಬಿಡುಗಡೆ ಮಾಡಿಲ್ಲ. ಸಕಲೇಶಪುರ ತಾಲೂಕು ಸೇರಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿಭಾರೀ ಮಳೆಯಿಂದಾಗಿ ರಸ್ತೆಗಳಿಗೆ ಹಾನಿಯಾಗಿದ್ದು, ರಸ್ತೆಗಳ ದುರಸ್ತಿಗೂ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ದೂರಿದರು.
ಅಸಮಾಧಾನ:ಅನೇಕರುಮನೆಕಳೆದುಕೊಂಡಿದ್ದಾರೆ.ಮನೆ ಕಳೆದುಕೊಂಡವರಿಗೆ ಮನೆಗಳ ದುರಸ್ತಿ ಹಾಗೂಪುನರ್ ನಿರ್ಮಾಣಕ್ಕೂ ಹಣ ಬಿಡುಗಡೆ ಮಾಡಿಲ್ಲ.ಮುಖ್ಯಮಂತ್ರಿಯವರು ಹಾಗೂ ವಸತಿ ಸಚಿವರಿಗೆಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2 ಕೋಟಿ ರೂ. ಅನುದಾನ ನೀಡಿ: ಮಳೆಯಿಂದ ಸಕಲೇಶಪುರ, ಆಲೂರು, ಹಾಸನ, ಹೊಳೆನರಸೀಪುರತಾಲೂಕಿನಲ್ಲಿ. ರಸ್ತೆಗಳು ಹಾಳಾಗಿವೆ, ಕೆರೆ, ಕಟ್ಟೆಗಳಿಗೆಹಾನಿಯಾಗಿದೆ. ಸರಿಯಾಗಿ ಸಮೀಕ್ಷೆ ಮಾಡದಕಾರಣ ಅರ್ಹ ಹೂವು ಬೆಳೆಗಾರರಿಗೆ ಪರಿಹಾರ ಸಿಕ್ಕಿಲ್ಲ. ಪರಿಹಾರ ಕಾರ್ಯ ಕೈಗೊಳ್ಳಲು ಪ್ರತಿ ತಾಲೂಕಿಗೆ ಕನಿಷ್ಠ ಎರಡು ಕೋಟಿ ರೂ. ಅನುದಾನ ನೀಡಬೇಕು ಎಂದು ಆಗ್ರಹಿಸಿದರು. ಜಿಲ್ಲೆಯ 48 ಸಾವಿರ ಜನರಿಗೆ ವೃದ್ಧಾಪ್ಯ ವಿಧವಾ, ಅಂಗವಿಕಲರ ಮಾಸಾಶನ ಕಳೆದ 10 ತಿಂಗಳಿಂದ ಬಂದಿಲ್ಲ. ಜಿಲ್ಲೆಯಲ್ಲಿ ಮೆಕ್ಕೆ ಜೋಳ ಬೆಳೆದವರ ಸ್ಥಿತಿಹೇಳತೀರದಾಗಿದೆ. ಕ್ವಿಂಟಲ್‌ಗೆ 800 ರೂ.ರಿಂದ 900ರೂ.ಗೆ ರೈತರು ಮಾರಾಟ ಮಾಡಿ ನಷ್ಟಅನುಭವಿಸುತ್ತಿದ್ದಾರೆ. ರೈತರಿಂದ 800 ರೂ.ಗೆ ಖರೀದಿಸಿದಮೆಕ್ಕೆಜೋಳವನ್ನುವರ್ತಕರುಕೆಎಂಎಫ್ ಗೆ1800 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿ ರೈತರಿಂದ ನೇರ ಖರೀದಿಸಬೇಕೆಂದು ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ದೂರಿದರು.
ರಿಯಲ್ ಎಸ್ಟೇಟ್‌ನವರಿಗೆ ಬೆದರಿಕೆ: ಹಾಸನ ನಗರಸುತ್ತಮುತ್ತ ರಿಯಲ್ ಎಸ್ಟೇಟ್ ಮಾಲಿಕರನ್ನು ಬೆದರಿಸಿನಿವೇಶನಗಳನ್ನು ಬಿಜೆಪಿ ಮುಖಂಡರಿಗೆ ಮಾರಾಟಮಾಡುವಂತೆ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ.ಇವರಿಂದ ಕಡಿಮೆ ಹಣಕ್ಕೆ ಪಡೆದು ಹೆಚ್ಚು ಬೆಲೆಗೆಮಾರಾಟ ಮಾಡಿ ಬಿಜೆಪಿ ಮುಖಂಡರು ಲಾಭಮಾಡಿಕೊಳ್ಳುತ್ತಿದ್ದರೆ, ಅಧಿಕಾರಿಗಳಿಗೂ ಕಮೀಷನ್‌ಪಡೆಯುತ್ತಿದ್ದಾರೆ. ಉದಾಹರಣೆಗೆ ಹಾಸನದಬುಸ್ತೇನಹಳ್ಳಿ ಬಳಿ ಹೊಸ ಬಡಾವಣೆ ನಿರ್ಮಾಣಮಾಡುತ್ತಿದ್ದವರಿಗೆ ತೊಂದರೆ ನೀಡಿದ ಬಿಜೆಪಿಮುಖಂಡರು ಬೆದರಿಕೆ ಒಡ್ಡು ಪ್ರತಿ ಅಡಿಗೆ 800 ರೂ.ಗೆ ಖರೀದಿಸಿದ ನಿವೇಶನಗಳನ್ನು 2000 ರೂ.ನಿಂದ2500 ರೂ.ಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಕಾನೂನು ಪ್ರಕಾರ ಕೈಗೊಂಡರೆ ಅಭ್ಯಂತರ ಇಲ್ಲ.ಮುಂದಿನ ದಿನಗಳಲ್ಲಿ ಅಧಿಕಾರಿಗಳೇ ತನಿಖೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.