Advertisement

ಲೂಟಿಕೋರ ಸರ್ಕಾರದಿಂದ ಅಭಿವೃದ್ಧಿ ಸ್ಥಗಿತ

12:41 PM Aug 08, 2020 | Suhan S |

ಹಾಸನ: ಲೂಟಿಕೋರ ಸರ್ಕಾರದಿಂದ ಜಿಲ್ಲೆಯಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳೂ ಸ್ಥಗಿತಗೊಂಡಿವೆ ಎಂದು ಜೆಡಿಎಸ್‌ ಮುಖಂಡ ಮಾಜಿ ಸಚಿವ ಎಚ್‌. ಡಿ. ರೇವಣ್ಣ ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಸರ್ಕಾರಕ್ಕೆ ರೈತರು, ಕಾರ್ಮಿಕರ ಬಗ್ಗೆ ಕಾಳಜಿಯೇ ಇಲ್ಲ. ಎಲ್ಲ ಯೋಜನೆಗಳಲ್ಲೂ ಕಮೀಷನ್‌ ಪಡೆಯುವ ದಂಧೆ ನಡೆಸುತ್ತಿದೆ. ಗುತ್ತಿಗೆದಾರರು ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿಕೊಳ್ಳಲು ( ಎಲ್‌ಒಸಿ) ಮುಂಗಡವಾಗಿ ಆರೂವರೆ ಪರ್ಸೆಂಟ್‌ ಕಮೀಷನ್‌ ಕೊಡುತ್ತಿದ್ದಾರೆ. ಕಮೀಷನ್‌ ಕೊಡದ ಗುತ್ತಿಗೆದಾರರ ಬಿಲ್‌ ಗಳು ವರ್ಷ ಗಳಾ ದರೂ ಪಾವತಿ ಯಾಗು ವುದಿಲ್ಲ ಎಂದು ದೂರಿದರು.

ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಜಲ ಸಂಪನ್ಮೂಲ ಇಲಾಖೆಯಲ್ಲಿ ಯಾವೊಂದು ಕೆಲಸವೂ ನಡೆದಿಲ್ಲ. ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ದ್ವೇಷದ ರಾಜಕಾರಣವನ್ನು ಸರ್ಕಾರ ಮಾಡುತ್ತಿದೆ. ಇಂಥ ದ್ವೇಷದ ರಾಜಕಾರಣಕ್ಕೆ ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತದೆ ಎಂದ ಅವರು, ನೀರಾವರಿ ಇಲಾಖೆಯಲ್ಲಿ ಹಣ ಕೊಟ್ಟ ಕಡತಗಳಿಗೆ ಸಹಿ ಹಾಕುವ ಪದ್ಧತಿ ಈ ಸರ್ಕಾರದಲ್ಲಿದೆ. ಹಣ ಕೊಡದ ಕಡತಗಳು ಮೂಲೆ ಸೇರುತ್ತಿವೆ. ವಿಧಾನಸಭಾ ಅಧಿವೇಶನ ಕರೆಯಲಿ ಅಂಕಿ ಅಂಶಗಳ ಸಹಿತ ಸರ್ಕಾರದ ಲೋಪ, ಹಾಸನ ಜಿಲ್ಲೆಯ ಅಭಿವೃದ್ಧಿ ಕಡೆಗಣಿಸಿ ರುವ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದು ಕೊಳ್ಳುವೆ ಎಂದು ರೇವಣ್ಣ ಹೇಳಿದರು.

ಯಗಚಿ , ವಾಟೆಹೊಳೆ ಜಲಾಶಯಗಳು ಭರ್ತಿ ಯಾಗಿ ಒಂದು ವಾರ ಕಳೆದಿದೆ. ಹೇಮಾ ವತಿ ಜಲಾಶಯವೂ ಇನ್ನೆರಡು ದಿನದಲ್ಲಿ ಭರ್ತಿ ಯಾಗಲಿದೆ. ಆದರೂ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಇನ್ನೂ ನೀರು ಬಿಡುವ ತೀರ್ಮಾನ ಮಾಡಿಲ್ಲ. ಹೀಗಾದರೆ ರೈತರು ಬೆಳೆಗೆ ಸಿದ್ಧತೆ ಮಾಡಿಕೊಳ್ಳುವುದು ಯಾವಾಗ ಎಂದ ಅವರು, ತಕ್ಷಣದಿಂದಲೇ ನಾಲೆಗಳಲ್ಲಿ ಬೆಳೆಗಳಿಗೆ ನೀರು ಹರಿಸಬೇಕು. ನೀರಾವರಿ ಸಲಹಾ ಸಮಿತಿ ಸಭೆಯವರೆಗೂ ಕಾಯಕೂಡದು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next