Advertisement

ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ : ಕುಮಾರಸ್ವಾಮಿ

03:35 PM Jan 30, 2023 | Team Udayavani |

ಕೊಪ್ಪಳ: ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಸಂಪೂರ್ಣ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ 1 ಲಕ್ಷ ರೂ ವರೆಗಿನ ಸಾಲ ಮನ್ನಾ ಮಾಡುವೆ ನಮಗೆ ಪೂರ್ಣ ಬಹುಮತ ಕೊಡಿ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದರು.

Advertisement

ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ ಪಂಚರತ್ನ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಾವಿರಾರು ರೈತರು ಮಹಿಳೆಯರು ತಮ್ಮ ಕಷ್ಟ ಹೇಳಿಕೊಂಡು ನಮ್ಮ ಬಳಿ ಬರುತ್ತಿದ್ದಾರೆ. ಯುವಕರು ಕೆಲಸ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಜನರುವಮನೆ ಇಲ್ಲ ಎಂದು ನೋವು ಹೇಳಿಕೊಳ್ಳುತ್ತಿದ್ದಾರೆ. ಕೋವಿಡ್ ವೇಳೆ ಮೃತ ಕುಟುಂಬಕ್ಕೆ ಇನ್ನೂ ಪರಿಹಾರ ಬಂದಿಲ್ಲಾ ಎನ್ನುತ್ತಾರೆ. ಅವರ ಕಷ್ಟಕ್ಕೆ ನಾನು ಸ್ಪಂದನೆ ಮಾಡುತ್ತಿದ್ದೇನೆ

ಫಸಲ್ ಬಿಮಾ ಯೋಜನೆ ಹೆಸರಲ್ಲಿ ವಿಮಾ ಕಂಪನಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದೆ. ಈ ಹಿಂದೆ ರೈತರ ಆತ್ಮಹತ್ಯೆ ಹೆಚ್ಚಾದವು. ಅವರ ನೋವು ಅರಿತು ರೈತರ ಸಾಲ ಮನ್ನಾ ಮಾಡುವೆ ಎಂದು ಹೇಳಿದ್ದೆ. ನನಗೆ ಪೂರ್ಣ ಬಹುಮತ ಬರಲಿಲ್ಲ. ಆದರೂ ರೈತರ ಸಾಲ ಮನ್ನಾ ಮಾಡಿದೆ. ಕಾಂಗ್ರೆಸ್ ನನಗೆ ಒತ್ತಡ ಹಾಕಿದ್ರು, ನಿಮ್ಮ ಕಾರ್ಯಕ್ರಮಕ್ಕೆ ಹಣ ಹೊಂದಿಸಿ ಕೊಡುವೆ ಎಂದಿದ್ದೆ. ಆದರೂ ಸರ್ಕಾರ ಕೆಡವಿದರು. ಆ ಮಧ್ಯೆ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ನಂತರ ಬಂದಿರುವ ಬಿಜೆಪಿ ಸರ್ಕಾರ ಇನ್ನೂ 2 ಲಕ್ಷ ಕುಟುಂಬಕ್ಕೆ ಸಾಲ ಮನ್ನಾ ಹಣ ಬಂದಿಲ್ಲ. ನಾನು ಮತ್ತೆ ಅಧಿಕಾರಕ್ಕೆ ಬಂದರೆ ಸಾಲ ಮುಟ್ಟದ ರೈತರಿಗೆ ಸಾಲ ಮನ್ನಾ ಮಾಡುವೆ ಎಂದರು.

ಪಂಚ ರತ್ನ ಯೋಜನೆಯಡಿ ಪ್ರತಿ ಗ್ರಾಪಂನಲ್ಲಿ ಆಧುನಿಕ ಶಾಲೆ ಕಟ್ಟುವೆ. ಯುವಕರಿಗೆ ಕೆಲಸ ಕೊಡುವೆ. ಪ್ರತಿ ಗ್ರಾಪಂನಲ್ಲಿ 30 ಬೆಡ್ ಆಸ್ಪತ್ರೆ, ಮೂರು ಸಿಬ್ಬಂದಿ ನೇಮಕ ಮಾಡುವೆ. ಹೆಚ್ಚಿನ ಚಿಕಿತ್ಸೆ ಪಡೆಯುವ ಕುಟುಂಬಕ್ಕೆ 30-35 ಲಕ್ಷ ಮೇಲ್ಪಟ್ಟ ಖಾಯಿಲೆಗೆ ಸರ್ಕಾರ ಭರಿಸಲಿದೆ.

Advertisement

ನನ್ನ ಸರ್ಕಾರ ಅಧಿಕಾರಕ್ಕೆ ಬಂದರೆ ಬಿತ್ತನೆ ಬೀಜಕ್ಕೆ, ಗೊಬ್ಬರ ಖರೀದಿಗೆ ಎಕರೆಗೆ 10 ಸಾವಿರ ರೂ. ಹಾಗೂ 10 ಎಕರೆ ಇದ್ದರೆ 1 ಲಕ್ಷ ರೂ. ರೈತರ ಖಾತೆಗೆ ಹಾಕಿವೆ. 24 ಗಂಟೆ ರೈತರ ಪಂಪಸೆಟ್ ಗೆ ವಿದ್ಯುತ್ ಪೂರೈಕೆ ಮಾಡುವೆ. ಯುವಕರಿಗೆ ತರಬೇತಿ, ಹಣಕಾಸಿನ ಅರಿವು ಕಲ್ಪಿಸುವೆ.

ಮನೆಯಿಲ್ಲದ ಕುಟುಂಬಕ್ಕೆ ಮನೆ ಕಟ್ಟಿ ಕೊಡುವೆ. ಹಳ್ಳಿಗಳ ಬದುಕು ಕಂಡಿರುವೆ. ಮತ್ತೆ ಸುವರ್ಣ ಗ್ರಾಮೋದಯದಡಿ ಕುಡಿಯುವ ನೀರು, ಶೌಚಾಲಯ ಅಭಿವೃದ್ಧ ಮಾಡುವೆ. ಸ್ತ್ರೀ ಶಕ್ತಿ ಗುಂಪಿನ ಸಾಲವನ್ನು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ 50 ಅಥವಾ 1 ಲಕ್ಷ ಸಾಲ  ಇರಲಿ ಮನ್ನಾ ಮಾಡುವೆ

65 ವರ್ಷ ಮೇಲ್ಪಟ್ಟವರಿಗೆ 5 ಸಾವಿರ, ವಿಧವೆಯರಿಗೆ 2500 ಮಾಸಾಶನ ಜಾರಿ ಮಾಡುವೆ.

ಪಂಚರತ್ನ ಯೋಜನೆಗಳಿಗೆ 2.50 ಲಕ್ಷ ಕೋಟಿ ಬಜೆಟ್ ಬೇಕು. ಹೊಂದಿಕೆ ಮಾಡುವೆ. ಜಲಧಾರೆ ಯೋಜನೆ ಮಾಡುವೆ. ಐದು ವರ್ಷ  ಪೂರ್ಣ ಬಹುಮತ ಕೊಡಿ ಸ್ಪಷ್ಟ ಬಹುಮತ ಕೊಡಬೇಕು. ನನ್ನ ಸ್ವಾರ್ಥಕ್ಕೆ ಹೋರಾಟ ಮಾಡುತ್ತಿಲ್ಲ

ಜಾತಿ, ಹಣದ ವ್ಯಾಮೋಹಕ್ಕೆ ನಿಮ್ಮ ಮತ ಮಾರಬೇಡಿ. ನನಗೆ ಐದು ವರ್ಷ ಅಧಿಕಾರ ಕೊಡಿ ಒಂದು ಬಾರಿ ಪರೀಕ್ಷೆ ಮಾಡಿ, ಇಲ್ಲದಿದ್ದರೆ ಪಕ್ಷ ವಿಸರ್ಜನೆ ಮಾಡುವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next