ಚಿಕ್ಕಮಗಳೂರು : ಇವರು ರಾಮನ ಹೆಸರಲ್ಲಿ ರಾವಣ ರಾಜ್ಯ ಮಾಡಲಿಕ್ಕೆ ಹೊರಟ್ಟಿದ್ದಾರೆ. ನಿಮ್ಮಂತವರಿಂದ ನಾನು ಕಲಿಯಬೇಕಿಲ್ಲ, ನನಗೆ ಜನರ ಬದುಕು ಬೇಕು
. ಕತ್ತಿ ಕಟ್ಕೊಂಡು ರಾಜಕಾರಣ ಮಾಡುವುದಲ್ಲ ಕತ್ತಿ ಹಿಡ್ಕೊಂಡು ರಾಮನ ಹೆಸರು ಉಳಿಸೋದಲ್ಲ ಎಂದು ಮಾಜಿ ಸಿಎಂ.ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಚಿಕ್ಕಮಗಳೂರು ಜಿಲ್ಲೆ ಕಳಸದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ರಾಮನ ಹೆಸರಲ್ಲಿ ರಾವಣ ರಾಜ್ಯ ಮಾಡಲು ಹೊರಟವರಿಂದ ನಾನೇನು ಕಲಿಯಬೇಕಿಲ್ಲ, ನನಗೆ ಜನರ ಬದುಕು ಬೇಕು ಮುಖ್ಯ. ರಾಮ ಏನು ಸಂದೇಶ ಕೊಟ್ಟಿದ್ದಾನೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ. ಮೊದಲು ಮಾನವೀಯತೆ ಕಲಿಯಿರಿ ಎಂದು ಹೇಳಿದರು.
ಸಿಎಂಗೆ ನಾಡಿನ ಬಗ್ಗೆ ಗೌರವ ಇದ್ದರೇ ಎಲ್ಲಾ ಧರ್ಮದ ಮುಖ್ಯಸ್ಥರನ್ನು ಕರೆಯಲಿ. ಅವರ ಸಮ್ಮುಖದಲ್ಲಿ ಭಾವೈಕ್ಯತೆ ಸರಿಪಡಿಸಿ ಜನತೆಗೆ ಸಂದೇಶ ಕೊಡುವುದು ಸರ್ಕಾರದ ಕರ್ತವ್ಯ. ಉತ್ತರಪ್ರದೇಶ, ಗುಜರಾತ್ ಆಡಳಿತದ ಅವಶ್ಯಕತೆ ನಮಗಿಲ್ಲ. ಕರ್ನಾಟಕದ ಆಡಳಿತ ವಿಶ್ವಕ್ಕೆ ಮಾದರಿಯಾದದ್ದು ಎಂದರು.
ಇದನ್ನೂ ಓದಿ: ಪಿಎಸ್‍ಐ ನೇಮಕಾತಿ ಅಕ್ರಮ; ದಿವ್ಯಾ ಹಾಗರಗಿ ಬಿಜೆಪಿ ನಾಯಕಿಯಲ್ಲ: ತೇಲ್ಕೂರ ಸ್ಪಷ್ಟನೆ
ಮತಕೋಸ್ಕರ ಅಶಾಂತಿ ಮೂಡಿಸುವ ಘಟನೆಗಳಿಂದ, ರಾಷ್ಟ್ರೀಯ ಪಕ್ಷದಿಂದ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಡುವ ಕೆಲಸ ಆಗುತ್ತಿದೆ. ಬಿಜೆಪಿಗೆ 150 ಸೀಟು ತೆಗೆದುಕೊಳ್ಳುವ ಚಿಂತೆ ಹೆಚ್ಚಿದರೆ, ಕಾಂಗ್ರೆಸ್ ಗೆ ಯಾರನ್ನು ಜೈಲಿಗೆ ಕಳುಹಿಸಬೇಕು ಎನ್ನುವ ಚಿಂತೆ ಹೆಚ್ಚಾಗಿದೆ ಎಂದು ವಾಗ್ದಾಳಿ ನಡೆಸಿದರು.
ಪಿಎಸ್ಐ ಅಕ್ರಮದ ಬಗ್ಗೆ ಮಾತಾನಾಡಿದ ಅವರು, ಇದರಲ್ಲಿ ಮಹಿಳೆಯ ಪಾತ್ರವಿದೆ ಎನ್ನುವುದು ಗಮನಕ್ಕೆ ಬಂದಿದೆ. ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಚೆಲ್ಲಾಟ ಆಗದ ರೀತಿ ಸರ್ಕಾರ ಈ ಕುರಿತು ತನಿಖೆ ಮಾಡಲಿ ಎಂದರು.