Advertisement

ಗಂಗಾವತಿಯಲ್ಲಿ ಮಟ್ಕಾ,ಇಸ್ಪೀಟ್, ಮೀಟರ್ ಬಡ್ಡಿ ದಂಧೆ: ಅಧಿವೇಶನದಲ್ಲಿ ಹೆಚ್ ಡಿಕೆ ಪ್ರಸ್ತಾಪ

05:52 PM Mar 09, 2022 | Team Udayavani |

ಗಂಗಾವತಿ: ಗಂಗಾವತಿ, ಕಾರಟಗಿ ಮತ್ತು ಕನಕಗಿರಿ  ಶ್ರೀರಾಮನಗರದಲ್ಲಿ 20 ಕ್ಕೂ ಹೆಚ್ಚು ಮಟ್ಕಾ(ಒಸಿ), ಇಸ್ಪೀಟ್ ಅಡ್ಡೆಗಳು ಮತ್ತು ಮೀಟರ್ ಬಡ್ಡಿ ದಂಧೆಯಿಂದ ಜನತೆ ರೋಸಿ ಹೋಗಿದ್ದು ಸರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯ ಅಧಿವೇಶನ ಗಮನ ಸೆಳೆದು ಪ್ರಶ್ನೋತ್ತರ ಸಮಯದಲ್ಲಿ ಪ್ರಸ್ತಾಪಿಸಿ ಸಮಸ್ಯೆಯ ಗಂಭೀರತೆ ಬಗ್ಗೆ ಮಾತನಾಡಿದರು.

Advertisement

ಹೆಚ್ಚಾಗಿ ಯುವಕರು ಇಂತಹ ಅಕ್ರಮ ದಂಧೆಯ ಸುಳಿಗೆ ಸಿಲುಕಿ ಇಡೀ ಜೀವನದ ಭವಿಷ್ಯವನ್ನು ಅಂಧಕಾರ ಮಾಡಿಕೊಳ್ಳುತ್‌ತಿದ್ದಾರೆ. ಪೊಲೀಸ್ ಇಲಾಖೆ ಕಣ್ಮುಚ್ಚಿಕೊಂಡು ಕುಳಿತ್ತಿದ್ದು ಚುನಾಯಿತ ಜನಪ್ರತಿನಿಧಿಗಳ ಕುಮ್ಮಕ್ಕು ಇದ್ದರೆ ಮಾತ್ರ ಇಂತಹ ಅಕ್ರಮ ದಂಧೆಗಳು ನಡೆಯಲು ಸಾಧ್ಯ. ತಾವು ಸಂಮಿಶ್ರ ಸರಕಾರ ನಡೆಸುವ ಸಂದರ್ಭದಲ್ಲಿ ಋಣಮುಕ್ತ ಕಾಯ್ದೆ ಜಾರಿ ಮಾಡಿದ್ದು ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲವಾದ್ದರಿಂದ ಪೊಲೀಸ್ ಇಲಾಖೆ ಈ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳುತ್ತಿಲ್ಲ.

ಅಕ್ರಮ ದಂಧೆಗಳ ಮೂಲಕ ಪ್ರತಿ ತಿಂಗಳು ಪೊಲೀಸ್ ಸೇರಿ ವಿವಿಧ ಇಲಾಖೆಯವರಿಗೆ ಕೋಟ್ಯಾಂತರ ರೂ. ತಲುಪುತ್ತದೆ ಸರಕಾರ ಯುವಕರ ಭವಿಷ್ಯ ಹಾಳಾಗುವ ಮುನ್ನ ಸೂಕ್ತ ಕಾನೂನು ಕ್ರಮ ಕೈಗೊಂಡು ಮಟ್ಕಾ, ಇಸ್ಪೀಟ್ ಮತ್ತು ಅಕ್ರಮ ಮೀಟರ್ ಬಡ್ಡಿ ದಂಧೆ ನಡೆಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವಂತೆ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next