Advertisement

ಕ್ಷೇತ್ರದ ಅಭಿವೃದ್ಧಿಗೆ ಅವಿರತ ಹೋರಾಟ

03:28 PM Jul 25, 2022 | Team Udayavani |

ರಾಮನಗರ: ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅವಿರತ ಹೋರಾಟ ನಡೆಸುತ್ತಿದ್ದೇನೆ. ನನಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ನೀವೆಲ್ಲರೂ ಕಂಕಣ ಬದ್ಧರಾಗಬೇಕು. ಮತ ದಾರರಿಗೆ ವಯಕ್ತಿಕವಾಗಿ ಆಸೆ, ಆಮಿಷಗಳನ್ನು ಒಡ್ಡುವ ಮೂಲಕರಾಜಕೀಯ ವಿರೋಧಿಗಳು ನಮ್ಮನ್ನು ಹಿಮ್ಮೆಟ್ಟಿಸಲುಅನೇಕ ಷಡ್ಯಂತ್ರ ಮಾಡುತ್ತಿದ್ದು, ಅದು ಫಲಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಂದು ಪರೋಕ್ಷವಾಗಿ ಕುಟುಕಿದರು.

Advertisement

ತಾಲೂಕಿನ ಹರೀಸಂದ್ರ ಗ್ರಾಪಂ ವ್ಯಾಪ್ತಿಯ ಕೆಂಪೇಗೌಡನದೊಡ್ಡಿ ಗ್ರಾಮದಲ್ಲಿ ಸ್ಮಾರ್ಟ್‌ ಅಂಗನವಾಡಿ ಕೇಂದ್ರ ಹಾಗೂ ಡಿಜಿಟಲ್‌ ಗ್ರಂಥಾಲಯಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಜಿಲ್ಲೆಯಲ್ಲಿ ಯಾವುದೇ ಗಲಭೆನಡೆದಿಲ್ಲ ಎಂಬುದು ಜನತೆಗೆ ಗೊತ್ತಿದೆ. ಅದರೆ, ಕಳೆದವಾರ ನಡೆದ ಚಾಮುಂಡೇಶ್ವರಿ ಕರಗ ಹಾಗೂ ಇನ್ನಿತರೆಹಬ್ಬ ಉತ್ಸವಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು ಎಂದು ವಿರೋಧ ಪಕ್ಷವಾದ ಕಾಂಗ್ರೆಸ್‌ ಮುಖಂಡರು ಹಲವಾರು ಸಂಘಟನೆಗಳ ಹೆಸರಲ್ಲಿ ಜಿಲ್ಲಾಡಳಿತದ ಪ್ರಮುಖ ಅಧಿಕಾರಿಗಳನ್ನು ಮೆರವಣಿಗೆ ಹಾಗೂಅಭಿನಂದನೆ ಸಲ್ಲಿಸುವ ಮೂಲಕ ರಾಜಕೀಯ ಮಾಡಲು ಹೊರಟಿರುವುದರ ಹಿಂದಿನ ರಾಜಕೀಯಏನು ಎಂಬುದು ಗೊತ್ತಿದೆ ಎಂದು ಆಪಾದಿಸಿದರು.

ಡಿಕೆಶಿ ವಿರುದ್ಧ ಪರೋಕ್ಷ ವಾಗ್ಧಾಳಿ: ಎಚ್‌.ಡಿ.ದೇವೇ ಗೌಡರು, ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಅವಕಾಶನೀಡಿದಂತೆ ಮುಂಬರುವ ದಿನಗಳಲ್ಲಿ ಒಕ್ಕಲಿಗಸಮುದಾಯದ ಬಾಂಧವರು ನನಗೂ ಆಶೀರ್ವಾದಮಾಡಬೇಕು ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಚಾಮುಂಡೇಶ್ವರಿ ಕರಗ ಸಾಂಸ್ಕೃತಿಕಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.ಆದರೆ, ಬಡವರ ಸೇವೆ ಮಾಡಲು ಯಾರುಮುಂದಾಗುತ್ತಾರೋ ಅಂತಹವರಿಗೆ ತಮ್ಮಆಶೀರ್ವಾದ ಬೆಂಬಲ ಇರಲಿ ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ವಾಗ್ಧಾಳಿ ನಡೆಸಿದರು.

ಜೆಡಿಎಸ್‌ಗೆ ಬಹುಮತ ನೀಡಿ: ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಜಿಲ್ಲೆ ಹಾಗೂ ರಾಜ್ಯದಸರ್ವತೋಮುಖ ಅಭಿವೃದ್ಧಿಗಾಗಿ ಪಂಚರತ್ನ ಯೋಜ ನೆಗಳನ್ನು ಜಾರಿಗೆ ತರುವ ದಿಕ್ಕಿನಲ್ಲಿ ದುಡಿಯುತ್ತಿರುವ ಎಚ್‌.ಡಿ.ಕುಮಾರಸ್ವಾಮಿ ಅವರ ಬಲಪಡಿಸುವ ದಿಕ್ಕಿನಲ್ಲಿಮುಂಬರುವ ದಿನಗಳಲ್ಲಿ ನಡೆಯುವ ವಿಧಾನಸಭಾಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಬಹುಮತ ಕೊಡಬೇಕು ಎಂದರು. ಗ್ರಾಮೀಣಾಭಿವೃದ್ಧಿ ದೃಷ್ಟಿಯಿಂದ ಅನೇಕ ಮೂಲ ಸವಲತ್ತುಗಳನ್ನು ಒದಗಿಸುವ ದಿಕ್ಕಿನಲ್ಲಿ ನನ್ನ ಅನುದಾನದಡಿ ಅನೇಕ ಕಾರ್ಯಕ್ರಮ ಮಾಡಲಾಗಿದೆ ಎಂದರು.

ಹರೀಸಂದ್ರ ಗ್ರಾಪಂ ಅಧ್ಯಕ್ಷೆ ಆಶಾ ಮಂಚೇಗೌಡ, ಪಿಡಿಒ ದಯಾನಂದ್‌, ಜೆಡಿಎಸ್‌ ಮುಖಂಡ ಬಿ.ಉಮೇಶ್‌, ರಾಜಶೇಖರ್‌, ಪ್ರಾಣೇಶ್‌,ರಾಜಣ್ಣ, ಮಂಚೇಗೌಡ, ಸಂತೋಷ್‌ ಕಾಳೇಗೌಡನದೊಡ್ಡಿ, ಸಿ.ಎಸ್‌.ಜಯಕುಮಾರ್‌, ಕೆ.ಜಯರಾಮು ಇದ್ದರು.

Advertisement

ಜನರ ಆಶೀರ್ವಾದ ನಮಗೆ ಶ್ರೀರಕ್ಷೆ: ಕುಮಾರಸ್ವಾಮಿ :

ಬಡವರ ಒಡವೆ, ಆಸ್ತಿ ಲಪಟಾಯಿಸಿ ಕೋಟ್ಯಂತರ ಹಣ ಲೂಟಿ ಮಾಡುತ್ತಿದ್ದಾರೆ. ಅಂತಹವರ ಬಗ್ಗೆ ನಾನು ತಲೆಕೆಡಿಸಿಕೊಳ್ಳೋದಿಲ್ಲ. ನಾನು ಬಡಪರ ಕಾರ್ಯಕ್ರಮ ನೀಡುವ ಸಲುವಾಗಿ ಕಂಕಣ ಬದ್ಧನಾಗಿದ್ದೇನೆ. ಹಳ್ಳಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವ ಸದುದ್ದೇಶ ಹೊಂದಿದ್ದೇವೆ. ಅದರ ಫಲವಾಗಿ ಈ ಯೋಜನೆಗಳನ್ನರೂಪಿಸಿದ್ದೇವೆ. ಎಲ್ಲಾ ಮಕ್ಕಳು ಸದ್ಬಳಕೆ ಮಾಡಿಕೊಂಡು ಶಿಕ್ಷಣದಲ್ಲಿ ಉನ್ನತ ಸ್ಥಾನಕ್ಕರೆರಬೇಕೆಂಬ ಮಹಾದಾಸೆಯಿದೆ. ಪಂಚರತ್ನ ಯೋಜನೆಗಳು ನಿಮಗೆ ಎಲ್ಲಾ ರೀತಿಯ ಶಕ್ತಿ ತುಂಬುವಲ್ಲಿ ಸಹಕಾರಿಯಾಗಲಿವೆ. ನಿಮ್ಮಗಳ ಆಶೀರ್ವಾದ ನಮಗೆ ಶ್ರೀರಕ್ಷೆ. ನಿಮ್ಮ ಪ್ರೀತಿ ವಿಶ್ವಾಸ ನಿರಂತರವಾಗಿರಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಹರೀಸಂದ್ರ ಪಂಚಾಯ್ತಿಗೆ ನಾಲ್ಕುವರೆ ಕೋಟಿ ಅನುದಾನ ನೀಡಿದ್ದೇನೆ. ರಂಜಾನ್‌ ಮತ್ತು ಕರಗ ಮಹೋತ್ಸವ ಶಾಂತಿಯುತವಾಗಿ ನಡೆಸಿದ್ದಕ್ಕೆ ಅಭಿನಂದಿಸಿದ್ದಾರೆ. ನಾನು ತಾಲೂಕಿಗೆಬಂದ ಬಳಿಕ ಒಂದು ಸಣ್ಣ ಗಲಭೆಗೂ ಅವಕಾಶ ಕೊಟ್ಟಿಲ್ಲ. ಮುಂದಿನ ಐವತ್ತು ವರ್ಷದಮುಂದಾಲೋಚನೆಯ ಯೋಜನೆಗಳನ್ನ ನಾನು ಜಾರಿಗೆ ತಂದಿದ್ದೇನೆ. ಕ್ಷೇತ್ರದ ಯುವಕ ಮಿತ್ರರುಆರ್ಥಿಕ ಸಂಕಷ್ಠದಲ್ಲಿದ್ದಾರೆ. ಎಲ್ಲರೂ ನನ್ನ ಬಳಿ ಅಳಲು ತೋಡಿಕೊಂಡಿದ್ದು, ನಾನು ನಿಮ್ಮಜೊತೆಗಿದ್ದೇನೆ. ಯಾರ ಆಮಿಷಕ್ಕೂ ತಲೆಕೆಡಿಸಿಕೊಳ್ಳಬೇಡಿ. ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next