Advertisement

ಮೇ 21ರಂದು ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ

07:59 PM May 19, 2018 | |

ಬೆಂಗಳೂರು: ಕರ್ನಾಟಕದಲ್ಲಿ ಇದೀಗ ಕುಮಾರ ಪರ್ವ ಆರಂಭವಾಗಿದೆ. ಮೇ 21ರ ಸೋಮವಾರ ಬೆಳಗ್ಗೆ ಎಚ್‌ ಡಿ ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ಬೆಳಗ್ಗೆ ನಡೆಲಿದೆ.

Advertisement

ಜೆಡಿಎಸ್‌ ನಾಯಕರಾಗಿರುವ ಕುಮಾರ ಸ್ವಾಮಿ ಅವರು ಈ ವಿಷಯವನ್ನು ಇಂದಿಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಕಳೆದ ಮೇ 15ರಂದೇ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಕೂಟ ಸರಕಾರ ರಚಿಸುವ ಬಗ್ಗೆ ರಾಜ್ಯಪಾಲರನ್ನು ಕಂಡು ಮನವಿ ಸಲ್ಲಿಸಿತ್ತು. ಇಂದು ರಾಜ್ಯಪಾಲರು ತಮ್ಮ ಮೈತ್ರಿಕೂಟಕ್ಕೆ ಸರಕಾರ ರಚಿಸುವ ಆಹ್ವಾನ ನೀಡಿದ್ದು ಸದನದಲ್ಲಿ ಬಹುಮತ ಸಾಬೀತುಪಡಿಸಲು 15 ದಿನಗಳ ಕಾಲಾವಕಾಶ ನೀಡಿದ್ದಾರೆ ಎಂದು ಕುಮಾರ ಸ್ವಾಮಿ ಹೇಳಿದರು. 

ತಮ್ಮ ಭಾವೀ ಸಂಪುಟದಲ್ಲಿ ಯಾವ ಪಕ್ಷದ ಯಾರೆಲ್ಲ ಯಾವ್ಯಾವ ಸಚಿವ ಪದ ಹೊಂದಲಿದ್ದಾರೆ ಎಂಬುದನ್ನು ಇಂದು ರಾತ್ರಿ ನಡೆಸಲು ಉದ್ದೇಶಿಸಲಾಗಿರುವ ಉಭಯ ಪಕ್ಷಗಳ ಹಿರಿಯ ನಾಯಕರ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಕುಮಾರ ಸ್ವಾಮಿ ಹೇಳಿದರು.

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮಮತಾ ಬ್ಯಾನರ್ಜಿ, ಮಾಯಾವತಿ, ಚಂದ್ರಶೇಖರ ರಾವ್‌, ಚಂದ್ರಬಾಬು ನಾಯ್ಡು, ಕಾಂಗ್ರೆಸ್‌ ನಾಯಕರಾದ ರಾಹುಲ್‌, ಸೋನಿಯಾ ಗಾಂಧಿ ಮೊದಲಾದವರನ್ನು ಆಹ್ವಾನಿಸಲಾಗುವುದು. ಸದನದಲ್ಲಿ ಬಹುಮತ ಸಾಬೀತು ಪಡಿಸುವ ದಿನಾಂಕವನ್ನು ಆದಷ್ಟು ಬೇಗನೆ ನಿರ್ಧರಿಸಲಾಗುವುದು ಎಂದು ಕುಮಾರ ಸ್ವಾಮಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next