Advertisement
ರೈತರು, ದಲಿತರು ಹಾಗೂ ಅಲ್ಪಸಂಖ್ಯಾಕರನ್ನು ಒಟ್ಟುಗೂಡಿಸಿ “ಭಾರತ್ ರಾಷ್ಟ್ರೀಯ ಮಂಚ್’ ಹೆಸರಿನಲ್ಲಿ ಪ್ರತೀ ವಿಧಾನಸಭೆ ಕ್ಷೇತ್ರದಲ್ಲೂ ಸಂಘಟನೆ ಮಾಡಲು ತೀರ್ಮಾನಿಸಲಾಗಿದೆ. ಇತ್ತೀ ಚೆಗೆ ಹೊಸದಿಲ್ಲಿ ಯಲ್ಲಿ ಬಿಹಾರ ಸಿಎಂ ನಿತೀಶ್‌ಕುಮಾರ್ ಹಾಗೂ ಹೈದರಾ ಬಾದ್‌ನಲ್ಲಿ ಕೆ. ಚಂದ್ರಶೇಖರ್‌ರಾವ್ ಜತೆಗಿನ ಮಾತುಕತೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ.
ಆಂಧ್ರಪ್ರದೇಶ ಸಿಎಂ ಜಗನ್, ತಮಿಳು ನಾಡು ಸಿಎಂ ಸ್ಟಾಲಿನ್, ಕೇರಳ ಸಿಎಂ ಪಿಣರಾಯಿ ವಿಜಯನ್, ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ ಸಿಂಗ್ ಮಾನ್, ಎಸ್‌ಪಿ ಅಧ್ಯಕ್ಷ ಅಖೀಲೇಶ್ ಯಾದವ್, ಝಾರ್ಖಂಡ್ ಸಿಎಂ ಹೇಮಂತ್ ಸೊರೇನ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಆರ್‌ಜೆಡಿಯ ತೇಜಸ್ವಿ ಯಾದವ್, ಒಡಿಶಾ ಸಿಎಂ ನವೀನ್ ಪಟ್ನಾಯಕ್ ಹೀಗೆ ಪ್ರಾದೇಶಿಕ ಪಕ್ಷಗಳ ನಾಯಕ ರನ್ನು ಒಂದೆಡೆ ತರುವ ಪ್ರಯತ್ನ ಇದು ಎಂದು ಹೇಳಲಾಗಿದೆ.
Related Articles
Advertisement
ಕೆಸಿಆರ್ ಸಾಥ್ಮುಂದಿನ ವಿಧಾನಸಭೆ ಚುನಾ ವಣೆಯಲ್ಲಿ ಜೆಡಿಎಸ್‌ಗೆ ಕೆ.ಸಿ. ಚಂದ್ರಶೇಖರ್ ರಾವ್ ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆ ಗಳಲ್ಲಿ ಸಾಥ್ ನೀಡಲಿದ್ದು, ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಪ್ರತಿ ಕ್ಷೇತ್ರಕ್ಕೆ ಒಬ್ಬೊಬ್ಬ ಶಾಸಕ ಹಾಗೂ ಮುಖಂಡ ರನ್ನು ವೀಕ್ಷಕರನ್ನಾಗಿ ನೇಮಿಸುವ ಭರವಸೆ ನೀಡಿದ್ದಾರೆ. ಕೆಸಿಆರ್ ಸಲಹೆ ಮೇರೆಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಬಳಿ ಸಲಹೆ ಪಡೆದು ಪ್ರತಿ ಕ್ಷೇತ್ರದ ಸಮೀಕ್ಷೆ ನಡೆಸಲು ಜೆಡಿಎಸ್ ತೀರ್ಮಾನಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಮಾಡಿರುವ ಆಂತರಿಕ ಸಮೀಕ್ಷೆಯಲ್ಲಿ 75 ರಿಂದ 80 ಸ್ಥಾನದ ಗೆಲುವಿನ ಸಾಧ್ಯತೆ ಕಂಡುಬರುತ್ತಿರುವ ಹಿನ್ನೆಲೆ ಯಲ್ಲಿ ಜೆಡಿಎಸ್ ಸಹ ಪ್ರತ್ಯೇಕವಾಗಿ ಸಮೀಕ್ಷೆಗೆ ಮುಂದಾಗಿದೆ ಎನ್ನ ಲಾಗಿದೆ. ರಾಷ್ಟ್ರ ರಾಜಕಾರಣದತ್ತ ಹೋಗುತ್ತಾರಾ ಎಚ್‌ಡಿಕೆ?
2023ರ ವಿಧಾನಸಭೆ ಚುನಾವಣೆ ಬಗ್ಗೆ ತುಂಬಾ ನಿರೀಕ್ಷೆ ಇಟ್ಟು ಕೊಂಡಿ ರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆ ಫಲಿತಾಂಶವನ್ನು ಆಧರಿಸಿ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುವ ಸಂಭವವಿದೆ. ಭವಿಷ್ಯದ ದೃಷ್ಟಿಯಿಂದ ರಾಷ್ಟ್ರ ರಾಜಕಾರಣದತ್ತ ಬರುವಂತೆ ಪ್ರಾದೇಶಿಕ ಪಕ್ಷಗಳ ನಾಯಕರು ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ ಕುಮಾರಸ್ವಾಮಿಯವರು ವಿಧಾನಸಭೆ ಚುನಾ ವಣೆ ಅನಂತರ ತೀರ್ಮಾನಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. -ಎಸ್. ಲಕ್ಷ್ಮಿನಾರಾಯಣ