Advertisement
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಎಚ್‌ಡಿಕೆಗೆ ತಾನು ತಪ್ಪು ಮಾಡಿದ್ದೇನೆ ಅಂತ ಅನಿಸುತ್ತಿರಬಹುದು. ಆದರೆ ತಪ್ಪು ಸರಿಪಡಿಸಿಕೊಳ್ಳಲು ಸದ್ಯಕ್ಕೆ ಕಷ್ಟ ಎಂದು ಸೂಚ್ಯವಾಗಿ ಚುಚ್ಚಿದ ಅವರು, ಬಿಜೆಪಿಯು ಜೆಡಿಎಸ್ ಅನ್ನು ಮುಗಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಮುಗಿಸಬೇಕು ಎಂಬುದು ಒಂದು ಕಡೆಯಾದರೆ, ಪ್ರಾದೇಶಿಕ ಪಕ್ಷಗಳೂ ಇರಬಾರದು ಎಂದು ಬಿಜೆಪಿ ಬಯಸುತ್ತದೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದರೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ವೇದಿಕೆಗೆ ಒಮ್ಮೆಯೂ ಕರೆಯಲಿಲ್ಲ. ಇವರು ಮಾತ್ರ ದಿಲ್ಲಿಗೆ ಹೋಗಬೇಕಾಗಿದೆ ಎಂದು ವ್ಯಂಗ್ಯವಾಡಿದರು.
ಚುನಾವಣ ಬಾಂಡ್‌ನಂತಹ ದೊಡ್ಡ ಮೋಸ ಇಡೀ ವಿಶ್ವದಲ್ಲೆಲ್ಲೂ ಆಗಿಲ್ಲ. ಭ್ರಷ್ಟಾಚಾರಕ್ಕೆ ಕಾನೂನಾತ್ಮಕ ಅಂಶ ಸೇರಿಸಿದರು. ಐಟಿ, ಇಡಿ ದಾಳಿಗೊಳಗಾದವರಿಂದ ಹಣ ಸಂಗ್ರಹ ಮಾಡಿದ್ದಾರೆ. ಇವರಿಂದಾಗಿ ಮಾಫಿಯಾ ರಾಜಕಾರಣ ನಡೆಯುತ್ತಿದೆ. ವ್ಯಕ್ತಿ, ಮಾಧ್ಯಮ, ಉದ್ದಿಮೆದಾರರು ಎಲ್ಲರಿಗೂ ಬೆದರಿಕೆ ಹಾಕಲಾಗಿದೆ. ಎಕ್ಸಟಾರ್ಷನ್ ಥೆಟ್ (ಸುಲಿಗೆ ಬೆದರಿಕೆ) ಇದೇ ಆಗಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಶೇ. 1ರಷ್ಟು ನೈತಿಕತೆಯೂ ಬಿಜೆಪಿಗಿಲ್ಲ ಎಂದು ದೂರಿದರು.