Advertisement

ಎಚ್‌.ಡಿ. ಕುಮಾರಸ್ವಾಮಿಗೆನಾಡಿದ್ದು ಶಸ್ತ್ರಚಿಕಿತ್ಸೆ 

07:52 AM Sep 21, 2017 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಹೃದಯಕ್ಕೆ ಸಂಬಂಧಿಸಿದ ಲ್ಯಾಪ್ರೋಸ್ಕೋಪಿಕ್‌ ಕೀ ಹೋಲ್‌ ಶಸ್ತ್ರಚಿಕಿತ್ಸೆ ಶನಿವಾರ ನಡೆಯಲಿದೆ. ಇದಕ್ಕಾಗಿ ಗುರುವಾರ ಖಾಸಗಿ ಆಸ್ಪತ್ರೆಗೆ ದಾಖಲಾಗಲಿದ್ದಾರೆ. ನಂತರ ಎರಡು ದಿನ ತಪಾಸಣೆ ನಡೆಸಲಾಗುವುದು. 30 ರಿಂದ 60 ನಿಮಿಷಗಳ ಕಾಲ ಶಸ್ತ್ರಚಿಕಿತ್ಸೆ ನಡೆಯಲಿದ್ದು, ನಂತರ ಒಂದು ತಿಂಗಳ ಕಾಲ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ. ಶಸ್ತ್ರ ಚಿಕಿತ್ಸೆ ನಂತರ ಸಿಂಗಪುರಕ್ಕೆ ವಿಶ್ರಾಂತಿಗಾಗಿ ತೆರಳಲಿದ್ದಾರೆ.

Advertisement

ಈಗಾಗಲೇ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಹಾಗೂ ಆ ನಂತರ ಕಡ್ಡಾಯ ವಿಶ್ರಾಂತಿ ಜತೆಗೆ ಜೀವನಶೈಲಿಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆ ಬಗ್ಗೆ ಕುಮಾರಸ್ವಾಮಿಯವರಿಗೆ ತಿಳಿಸಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಲು ಲಂಡನ್‌ನಿಂದ ಈಗಾಗಲೇ ಮೂವರು ವೈದ್ಯರು ಆಗಮಿಸಿದ್ದು, ಭಾರತದ ಐವರು ಹೃದ್ರೋಗ ತಜ್ಞರು ಜತೆಗೂಡಲಿದ್ದಾರೆ. ಹೃದಯದಲ್ಲಿ ಅಳವಡಿಸಿರುವ ಮೆಟಲ್‌ ವಾಲ್‌Ì ಬ್ಲಾಕ್‌ ಆಗಿದ್ದು, ಅದಕ್ಕೆ ಬದಲಾಗಿ ಟಿಶ್ಯು ವಾಲ್‌Ì ಬದಲಾವಣೆ ಮಾಡಲಾಗುವುದು. ಇದರಿಂದ ಮುಂದಿನ 15 ವರ್ಷಗಳ ಕಾಲ ಯಾವುದೇ ತೊಂದರೆಯಾಗದು. ಸಿಂಗಪುರದಿಂದ ಮರಳಿದ ನಂತರ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಇದಕ್ಕಾಗಿ ವಿಶೇಷ ವಾಹನ ಸಹ ಸಿದ್ಧಪಡಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next