Advertisement

5ನೇ ದಿನಕ್ಕೆ ರೈತರ ಹೋರಾಟ: ರೈತರ ಸಮಸ್ಯೆ ಪರಿಹರಿಸುವುದು ಸೂಕ್ತ: ಕೇಂದ್ರಕ್ಕೆ HDK ಮನವಿ

06:29 PM Nov 30, 2020 | sudhir |

ಬೆಂಗಳೂರು: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಹೊರವಲಯದಲ್ಲಿ ರೈತರು ನಡೆಸುತ್ತಿರುವ ಹೋರಾಟ 5ನೇ ದಿನ ತಲುಪಿದೆ. ರೈತರ ಹಿತಕ್ಕಾಗಿ ಕಾಯ್ದೆ ತಂದಿರುವುದಾಗಿ ಹೇಳಿರುವ ಕೇಂದ್ರ ಕೂಡಲೇ ಪ್ರತಿಭಟನಾಕಾರರೊಂದಿಗೆ ಮಾತನಾಡಿ ಅವರ ಅನುಮಾನಗಳನ್ನು ನಿವಾರಿಸುವ ಪ್ರಯತ್ನ ಮಾಡುವುದು ಸೂಕ್ತ. ಇಲ್ಲವಾದರೆ, ರೈತರು, ಜನರ ಅನುಮಾನಗಳು ಬೆಳೆಯುತ್ತಾ ಹೋಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.

Advertisement

ರೈತರ ಸಮಸ್ಯೆ ಆಲಿಸಬೇಕಿದ್ದರೆ ಬುರಾಡಿ ಉದ್ಯಾನಕ್ಕೆ ಬರಬೇಕು ಎಂದು ಕೇಂದ್ರ ರೈತರಲ್ಲಿ ಮನವಿ ಮಾಡಿದೆ. ಆದರೆ ಇದನ್ನು ರೈತರು ಒಪ್ಪಿಲ್ಲ. ಇದು ತಮಗೆ ಒಡ್ಡಿರುವ ಷರತ್ತು ಎಂದು ರೈತರು ಭಾವಿಸಿದ್ದಾರೆ. ಅದ್ದರಿಂದ ಈ ಷರತ್ತು ಹಿಂದಕ್ಕೆ ಪಡೆಯುವುದೇ ಸೂಕ್ತ. ರೈತರು ಇರುವಲ್ಲಿಯೇ, ಅವರು ಇಚ್ಛಿಸಿದಲ್ಲಿಯೇ ಸಮಸ್ಯೆಗಳನ್ನು ಆಲಿಸಿ ಎಂಬುದು ನನ್ನ ಸಲಹೆ ಎಂದಿದ್ದಾರೆ.

ಇದನ್ನೂ ಓದಿ:ಲಂಚ ಸ್ವೀಕಾರ : ಮೊಳಕಾಲ್ಮೂರು ತಹಶಿಲ್ದಾರ್ ಎಸಿಬಿ ಬಲೆಗೆ

5 ದಿನಗಳಿಂದ ರೈತರು ಸಿಂಗು ಗಡಿಯಲ್ಲೇ ಧರಣಿ ಕುಳಿತಿದ್ದಾರೆ. ಇದು ಚಳಿಗಾಲ ಸಮಯವಾಗಿದ್ದರಿಂದ. ದೆಹಲಿ ಚಳಿ ಯಾರಿಗಾದರೂ ಮೈ ನಡುಗಿಸುತ್ತದೆ. ಕೋವಿಡ್‌ ಕಾಲದಲ್ಲಿ ರೈತರನ್ನು ಹಾಗೆ ಅಲ್ಲಿ ಬಿಡುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ. ಅಲ್ಲಿರುವ ಯಾರಿಗಾದರೂ ಅಪಾಯವಾದರೆ ಅದು ಕೇಂದ್ರ ಸರ್ಕಾರದ ಬಾಧ್ಯತೆಯಾಗುತ್ತದೆ. ಹಾಗಾಗಿ ಕೂಡಲೇ ಕೇಂದ್ರ ಸರಕಾರ ರೈತರ ಮನವಿಯನ್ನು ಆಲಿಸುವುದು ಸಮಂಜಸ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next