Advertisement

HD Kote: ಅರೆ ಹೊಟ್ಟೆಯಲ್ಲಿ ಶಾಲೆಗೆ ತೆರಳುವ ವಿದ್ಯಾರ್ಥಿಗಳು

02:40 PM Sep 15, 2024 | Team Udayavani |

ಎಚ್‌.ಡಿ.ಕೋಟೆ: ಶಿಕ್ಷಣ ಇಲಾಖೆ ವತಿಯಿಂದ ತಾಲೂಕು ಕೇಂದ್ರ ಎಚ್‌.ಡಿ. ಕೋಟೆ ಪಟ್ಟಣದಲ್ಲಿ ನಡೆಯುತ್ತಿರುವ ವಸತಿ ನಿಲಯಕ್ಕೆ ಆಹಾರ ಪದಾರ್ಥ ಪೂರೈಕೆ ಮಾಡುತ್ತಿದ್ದ ಟೆಂಡರ್‌ದಾರರು ಶಿಕ್ಷಣ ಇಲಾಖೆ ಈಗ ನೀಡುತ್ತಿರುವ ದರ ಪರಿಷ್ಕರಣೆ ಮಾಡಿಲ್ಲ ಎಂದು ವಿದ್ಯಾರ್ಥಿನಿಲಯಕ್ಕೆ ಆಹಾರ ಪದಾರ್ಥ ಪೂರೈಕೆ ನಿಲ್ಲಿಸಿದ ಪರಿಣಾಮ ವಿದ್ಯಾರ್ಥಿನಿಯರಿಗೆ ವಸತಿ ನಿಲಯದ ಮೇನು ಪ್ರಕಾರ ಊಟ ಇರಲಿ, ಕಳೆದ 15 ದಿನದಿಂದ ಸರಿಯಾಗಿ ಊಟ ಸಿಗದೆ ಪರದಾ ಡುವ ಸ್ಥಿತಿಯಿಂದಾಗಿ ವಸತಿ ನಿಲಯದ ವಿದ್ಯಾರ್ಥಿನಿಯರು ತಮ್ಮ ಮನೆಗಳಿಗೆ ವಾಪಸ್‌ ಆಗಲು ನಿರ್ಧಾರ ಮಾಡಿದ್ದಾರೆ.

Advertisement

ಪಟ್ಟಣದ ಕಸ್ತೂರಿ ಬಾ ಗಾಂಧಿ ವಸತಿ ಶಾಲೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳ ನೂರಾರು ವಿದ್ಯಾರ್ಥಿನಿಯರು ಉಳಿದು ಕೊಂಡಿದ್ದು, ಪಟ್ಟಣದಲ್ಲಿ ಕಾರ್ಯನಿರ್ವಹಿ ಸುತ್ತಿರುವ ವಿವಿಧ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ, ಈ ವಸತಿ ನಿಲಯಕ್ಕೆ ಆಹಾರ ಪೂರೈಕೆ ಮಾಡುತ್ತಿದ್ದ ಕೆ.ಆರ್‌.ನಗರದ ಮಹಾಲಕ್ಷ್ಮೀ ಸಂಘ ದವರು ಆಹಾರ ಪದಾರ್ಥ ಪೂರೈಕೆ ಮಾಡಿಲ್ಲ, ಇದರಿಂದಾಗಿ ವಸತಿ ನಿಲಯದಲ್ಲಿ ನೀಡುತ್ತಿದ್ದ ಅನ್ನ ಸಾಂಬರ್‌ ಮಾತ್ರ ದಿನಲೂ ಊಟ ಮಾಡಿ ಕಳೆದ 15 ದಿನದಿಂದ ಇಲ್ಲಿನ ಬಾಲಕಿಯರು ಅರೆ ಹೊಟ್ಟೆ ಯಲ್ಲಿ ಕಾಲ ದೂಡಿದ್ದಾರೆ.

ದರ ಪರಿಷ್ಕರಣೆ ಮಾಡದ ಅಧಿಕಾರಿಗಳು: ವಸತಿ ನಿಲಯ ‌ವಿದ್ಯಾರ್ಥಿನಿಯರಿಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನ, ರಾತ್ರಿ ಊಟ ಹಾಗೂ ಸಂಜೆ ಸ್ನ್ಯಾಕ್ಸ್‌ ಟೀ ಜತೆಗೆ ವಾರದಲ್ಲಿ ಎರಡು ಬಾರಿ ಮೊಟ್ಟೆ, ಮಾಂಸ ನೀಡುವುದಕ್ಕೆ ಶಿಕ್ಷಣ ಇಲಾಖೆಯಿಂದ 39 ರೂ. ನೀಡಲಾಗುತ್ತಿದೆ, ಈಗಿನ ದರ ದರ ಪರಿಷ್ಕರಣೆ ಮಾಡುವಂತೆ ಕಳೆದ ಟೆಂಡರ್‌ದಾರರು ಸಾ ರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕಚೇರಿ, ಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ ಗಳಿಗೆ ಹಲವು ಬಾರಿ ಪತ್ರ ವ್ಯವಹಾರ ಮಾಡಿದರೂ ಕ್ಯಾರೆ ಎನ್ನದ ಕಾರಣ ವಸತಿ ನಿಲಯಕ್ಕೆ ನೀಡುತ್ತಿದ್ದ ಆಹಾರ ಪದಾರ್ಥ ಸರಬರಾಜಿನಲ್ಲಿ ಕಡಿತಗೊಳಿಸಿ ವಸತಿ ನಿಲಯದಲ್ಲಿರುವ ವಿದ್ಯಾರ್ಥಿನಿ ಯರಿಗೆ ತೊಂದರೆಯಾಗದಂತೆ ಅಕ್ಕಿ, ಬೇಳೆ ಸೇರಿದಂತೆ ಕೆಲ ಆಹಾರ ಪದಾರ್ಥಗಳನ್ನು ಮಾತ್ರ ಸರಬರಾಜು ಮಾಡಿದ್ದೇವೆ ಎಂದು ಆಹಾರ ಪೂರೈಕೆ ಟೆಂಡ ರ್‌ ಪಡೆದಿರುವ ಮಹಾಲಕ್ಷ್ಮೀ ಸಂಘದ ನಾಗರತ್ನ ಉದಯವಾಣಿಗೆ ತಿಳಿಸಿದ್ದಾರೆ.

ಟೆಂಡರ್‌ ಮುಗಿದು 15 ತಿಂಗಳಾಗಿದೆ: ವಸತಿ ನಿಲಯಕ್ಕೆ ಆಹಾರ ಪದಾರ್ಥ ಸರ ಬರಾಜು ಮಾಡುತ್ತಿರುವ ಮಹಾಲಕ್ಷ್ಮೀ ಸಂಘದವರ ಟೆಂಡರ್‌ ಅವಧಿ ಮುಕ್ತಾಯ ವಾಗಿ ಬರೋಬ್ಬರಿ 15 ತಿಂಗಳುಗಳೇ ಕಳೆದಿವೆ, ಶಿಕ್ಷಣ ಇಲಾಖೆ ಕೂಡ ಆಹಾರ ಪೂರೈಕೆಗೆ 3 ಬಾರಿ ಟೆಂಡರ್‌ ಆಹ್ವಾನ ಮಾಡಿದರೂ 3 ಬಾರಿಯೂ ಸಿಂಗಲ್‌ ಟೆಂಟರ್‌ ಆಗಿದೆ, ಹೊಸ ಟೆಂಡರ್‌ ಆಗುವವರೆಗೂ ಹಳೆ ದರ ದಲ್ಲೇ ಮಹಾಲಕ್ಷ್ಮೀ ಸಂಘದವರಿಗೆ ಆದೇಶ ಸೂಚಿಸಲಾಗಿತ್ತು ಎಂದು ಹೇಳಲಾಗುತ್ತಿದೆ.

ಟೆಂಡರ್‌ದಾರರ ಮನವಿಗೆ ಸ್ಪಂದಿಸದ ಶಿಕ್ಷಣ ಇಲಾಖೆ: ಇನ್ನೂ ಆಹಾರ ಪದಾರ್ಥಗಳ ದರ ದಿನೇ ದಿನೆ ಗಗನಕ್ಕೇರುತ್ತಿದೆ ಈಗ ನೀಡುತ್ತಿರುವ ದರ ಸಾಲದು ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗೆ ಈಗ ನೀಡುತ್ತಿರುವ ದರ ಪರಿಷ್ಕರಣೆ ಮಾಡು ವಂತೆ ಟೆಂಡರ್‌ದಾರರು ಹಲವು ಬಾರಿ ಪತ್ರ ವ್ಯವಹಾರ ನಡೆಸಿದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ಟೆಂಡರ್‌ದಾರರ ಮನವಿಗೆ ಕ್ಯಾರೇ ಎಂದಿಲ್ಲ. ಇದ ರಿಂದಾಗಿ ಕಸ್ತೂರಿ ಬಾ ಗಾಂಧಿ ವಸತಿ ನಿಲ ಯಕ್ಕೆ ನೀಡು ತ್ತಿದ್ದ ಆಹಾರ ಪದಾರ್ಥಗಳ ಪೂರೈಕೆಯಲ್ಲಿ ಕಡಿತ ಮಾಡಲಾಗಿದೆ, ಇನ್ನೂ ಆದರ್ಶ ವಿದ್ಯಾಲಯದ ವಸತಿ ನಿಲಯಕ್ಕೆ ಎಂದಿನಂತೆ ಆಹಾರ ಸರಬರಾಜು ಮಾಡಲಾಗಿದೆ. ಎಚ್‌.ಡಿ.ಕೋಟೆ ಪಟ್ಟಣದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ನಡೆಯುತ್ತಿರುವ ಆದರ್ಶ ಹಾಸ್ಟೆಲ್‌, ಕಸ್ತೂರಿ ಬಾ ಗಾಂಧಿ ವಸತಿ ನಿಲಯಕ್ಕೆ ಆಹಾರ ಪದಾರ್ಥ ಪೂರೈಕೆ ಮಾಡಲು ನಮ್ಮ ಮಹಾಲಕ್ಷ್ಮೀ ಸಂಘಕ್ಕೆ ಟೆಂಡರ್‌ ನೀಡಲಾಗಿತ್ತು.

Advertisement

ಟೆಂಡರ್‌ ಅವಧಿ ಮುಗಿದು ಟೆಂಡರ್‌ ಕರೆದರೂ ಯಾರು ಆಸಕ್ತಿ ತೋರದ ಕಾರಣ 3 ಬಾರಿಯೂ ಸಿಂಗಲ್‌ ಟೆಂಡರ್‌ ಆಗಿದೆ, ನಮಗೆ ಪ್ರತಿ ವಿದ್ಯಾರ್ಥಿಗೆ 39 ರೂ. ದರ ನೀಡುತ್ತಿದ್ದು, ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದ್ದು, ಈಗಿನ ದರದಲ್ಲಿ ಆಹಾರ ಪದಾರ್ಥ ಪೂರೈಕೆ ಅಸಾಧ್ಯ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದೇನೆ, ಇನ್ನೂ ದರ ಪರಿಷ್ಕರಣೆ ಮಾಡಿಲ್ಲ. ●ನಾಗರತ್ಮ. ಮಹಾಲಕ್ಷೀ ಸಂಘ, ಕೆ.ಆರ್‌.ನಗರ. ಆಹಾರ ಪದಾರ್ಥ ಸರಬರಾಜು ಟೆಂಡರ್‌ದಾರರು

ಆಹಾರ ಪದಾರ್ಥ ಪೂರೈಕೆ ಟೆಂಡರ್‌ ಪಡೆದಿರುವ ಗುತ್ತಿಗೆದಾರರು ಆಹಾರ ಪೂರೈಕೆಯಲ್ಲಿ ವ್ಯತ್ಯಯ ಮಾಡಿದ್ದರಿಂದ ಕಸ್ತೂರಿ ಬಾ ಗಾಂಧಿ ವಸತಿ ನಿಯದ ಬಾಲಕಿಯರ ಊಟಕ್ಕೆ ತೊಂದರೆ ಆಗಿತ್ತು, ಈಗ ಎಲ್ಲ ರೇಷನ್‌ ಪೂರೈಕೆಯಾಗಿದೆ. ಹಾಸ್ಟೆಲ್‌ ಮೇನು ಪ್ರಕಾರ ವಿದ್ಯಾರ್ಥಿನಿಯರಿಗೆ ಊಟ ನೀಡಲು ಸೂಚಿಸಿದ್ದೇನೆ. ●ಕೆ.ಕಾಂತರಾಜು. ಬಿಇಒ, ಸಾರ್ವಜನಿಕ ಶಿಕ್ಷಣ ಇಲಾಖೆ, -ಎಚ್‌.ಡಿ.ಕೋಟೆ

Advertisement

Udayavani is now on Telegram. Click here to join our channel and stay updated with the latest news.