Advertisement

Lok Sabha Election: ಕಾಂಗ್ರೆಸ್‌ ಸೋಲಿಸಿ, ಸಿದ್ದರಾಮಯ್ಯ ಗರ್ವಭಂಗ ಮಾಡಿ: ದೇವೇಗೌಡ

10:49 PM Mar 29, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಕ್ತಿ ಪ್ರದರ್ಶನ ಮಾಡುವುದಕ್ಕಾಗಿ ಆಯೋಜಿಸಿದ್ದ ಬಿಜೆಪಿ-ಜೆಡಿಎಸ್‌ ಸಮನ್ವಯ ಸಭೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ರಾಜ್ಯ ಕಾಂಗ್ರೆಸ್‌ ನಾಯಕರ ವಿರುದ್ಧ ಅಬ್ಬರಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ “ಗರ್ವಭಂಗ’ಕ್ಕೆ ಕರೆ ನೀಡಿದ್ದಾರೆ.

Advertisement

ಜತೆಗೆ ಅನ್ಯ ರಾಜ್ಯಗಳ ಚುನಾವಣೆ ನಿರ್ವಹಣೆಗೆ ಕರ್ನಾಟಕದಿಂದ ಎಐಸಿಸಿಗೆ ಕಪ್ಪ ಸಂದಾಯ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ತಮ್ಮ ಭಾಷಣದುದ್ದಕ್ಕೂ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಸಿದ್ದರಾಮಯ್ಯನವರು ಜೆಡಿಎಸ್‌ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಅವರು ಅಧಿಕಾರದ ಮದದಿಂದ ಹೀಗೆಲ್ಲ ಮಾತನಾಡುತ್ತಿದ್ದಾರೆ. ಜೆಡಿಎಸ್‌ ಇದೆ. ಅದು ಎಲ್ಲಿದೆ ಎಂದು ತೋರಿಸಿ ಅವರ ಮದ ಇಳಿಸುವ ಸಾಮರ್ಥ್ಯ ಈ 91 ವರ್ಷದ ದೇವೇಗೌಡನಿಗಿದೆ. ಯಾರಿಗೂ ನಾನು ಅಂಜುವವನಲ್ಲ. ಆ ಭಯ ಎಂಬುದೇ ನನಗಿಲ್ಲ ಎಂದು ಗುಡುಗಿದರು.

ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರವನ್ನು ಗೆಲ್ಲುವ ಶಕ್ತಿ ನಮ್ಮ ಜಿ.ಟಿ.ದೇವೇಗೌಡರಿಗೆ ಇದೆ. ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ್ನು ಸೋಲಿಸಿ ಸಿದ್ದರಾಮಯ್ಯನವರ ಗರ್ವಭಂಗ ಮಾಡಬೇಕು. ಅವರ ಗರ್ವಭಂಗ ಆಗಬೇಕಾದರೆ ನಾವೆಲ್ಲರೂ ಛಲದಿಂದ ಒಟ್ಟಾಗಿ ಹೋಗಬೇಕು ಎಂದು ಸವಾಲು ಎಸೆದರು.

ದೇವೇಗೌಡರ ಭಾಷಣದ ಝಲಕ್‌ ಹೀಗಿದೆ…..
– ನರೇಂದ್ರ ಮೋದಿ ಅತ್ಯಂತ ದುರ್ಬಲ ಪ್ರಧಾನಿಯಂತೆ, ಇವರು ಅತ್ಯಂತ ಸ್ಟ್ರಾಂಗ್‌ ಸಿಎಂ ಅಂತೆ. ಅಬ್ಟಾ ಅವರ ಭಾಷಣವೇ ! ಒಂದು ರಾಜ್ಯದ ಸಿಎಂ ಆಗಿ ಇವರು ಬಹಳ ಗಟ್ಟಿಯಂತೆ. ಮೋದಿ 140 ಕೋಟಿ ಜನಸಂಖ್ಯೆ ಇರುವ ದೇಶದ ಪ್ರಧಾನಿ ಎಂಬುದನ್ನು ಮರೆತಿದ್ದಾರೆ.

Advertisement

– ನನ್ನ ತಲೆ ಎನ್‌ಸೈಕ್ಲೋಪೀಡಿಯಾ. ಯಾವಾಗ, ಏನೆಲ್ಲ ಘಟನೆ ನಡೆದಿದೆ ಎಂಬುದನ್ನು ನಿಖರವಾಗಿ ಹೇಳಬÇÉೆ. ಯಡಿಯೂರಪ್ಪ ಅವರೇ ನನಗೆ ಎಲ್ಲ ಗೊತ್ತು. ಒಬ್ಬ ಮಾಜಿ ಪ್ರಧಾನಿಯನ್ನು ಇವರು ತುಮಕೂರಿಗೆ ಕಳಿಸಿ, ನನ್ನನ್ನೇ ಸೋಲಿಸಿದರು. ಕಾಂಗ್ರೆಸ್‌ನವರು ಏನು ಮಾಡಿದರು ಎನ್ನುವುದು ಗೊತ್ತಿದೆ. ನಾನು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಮೀಸಲಿಟ್ಟ ಕ್ಷೇತ್ರವನ್ನು ಎಷ್ಟಕ್ಕೆ ಹೆಚ್ಚಳ ಮಾಡಿದೆ ಎಂಬುದು ಗೊತ್ತಿದೆಯೇ?

– ಮೈತ್ರಿಯಲ್ಲಿ ಒಂದು ಸಣ್ಣ ಸಮಸ್ಯೆಯೂ ಕಾಣಿಸಿಕೊಳ್ಳಬಾರದು. ಒಬ್ಬ ಸಾಮಾನ್ಯ ಕಾರ್ಯಕರ್ತನನ್ನೂ ಬಿಡದೇ ಹೋರಾಟ ಮಾಡೋಣ.

– ನಾನು ಯಾವ ಕ್ಷೇತ್ರಕ್ಕೆ ಬೇಕಾದರೂ ಪ್ರಚಾರಕ್ಕೆ ಹೋಗುತ್ತೇನೆ. ಮಂಡಿ ನೋವಿದೆ. ಒಂದು ಹೆಲಿಕಾಪ್ಟರ್‌ ಮಾಡುತ್ತಿಯೇನಪ್ಪಾ ಎಂದು ನನ್ನ ಮಗನ ಬಳಿ ಕೇಳಿದ್ದೇನೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬೇಕಾದರೂ ನಾನು ಬಂದು ಪ್ರಚಾರ ಮಾಡುತ್ತೇನೆ ಎಂದು ಉಸ್ತುವಾರಿ ಆರ್‌.ಅಶೋಕ ಅವರಿಗೆ ಹೇಳಿದ್ದೇನೆ.

ಎಐಸಿಸಿಗೆ ಹಣ ಸಂದಾಯ : ಎಚ್‌ಡಿಡಿ ಗಂಭೀರ ಆರೋಪ
ಅನ್ಯ ರಾಜ್ಯಗಳ ಚುನಾವಣೆ ನಿರ್ವಹಣೆಗೆ ಕರ್ನಾಟಕದಿಂದ ಎಐಸಿಸಿಗೆ ಕಪ್ಪ ಸಂದಾಯ ಮಾಡಲಾಗುತ್ತಿದೆ ಎಂದು ರಾಜ್ಯ ಸರಕಾರದ ವಿರುದ್ಧ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಗಂಭೀರ ಆರೋಪ ಮಾಡಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಹೆಸರು ಪ್ರಸ್ತಾವಿಸದೇ ಹರಿಹಾಯ್ದ ಅವರು, ಬೆಂಗಳೂರು ನಗರ ಹಾಗೂ ಜಲಸಂಪನ್ಮೂಲ ಇಲಾಖೆ ಒಬ್ಬ ಸಚಿವರ ಹಿಡಿತದಲ್ಲಿದೆ. ಕಾಂಗ್ರೆಸ್‌ ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿದೆ. 28 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಹಣ ಬಲವನ್ನು ನಾವು ಎದುರಿಸಬೇಕಿದೆ. ಆಡಳಿತ ಯಂತ್ರದ ದುರುಪಯೋಗ ಸೇರಿ ಎಲ್ಲ ಬಗೆಯ ಕುತಂತ್ರವನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದು ಆರೋಪಿಸಿದರು.

ಅನ್ಯ ರಾಜ್ಯಗಳಿಗೂ ಕಾಂಗ್ರೆಸ್‌ ಸರಕಾರ ಹಣ ಸರಬರಾಜು ಮಾಡುತ್ತಿದೆ. ರಾಜಸ್ಥಾನ, ತೆಲಂಗಾಣ ಸಹಿತ ಹಲವಾರು ರಾಜ್ಯಗಳಲ್ಲಿ ಕಾಂಗ್ರೆಸ್‌ ಸರಕಾರ ಇದೆ. ಅಲ್ಲಿಗೆಲ್ಲ ರಾಜ್ಯದ ಹಣ ಹೋಗುತ್ತಿದೆ. ಕರ್ನಾಟಕದಿಂದ ಎಐಸಿಸಿಗೆ ಹಣ ಸಂದಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next