Advertisement

ನಮ್ಮ ಪಕ್ಷವನ್ನು ಮುಗಿಸಲು ಹೊರಟ ಬಿಜೆಪಿ, ಕಾಂಗ್ರೇಸ್ ಗೆ ತಕ್ಕ ಉತ್ತರ ಸಿಗಲಿದೆ : ದೇವೇಗೌಡ

03:32 PM Jan 05, 2022 | Team Udayavani |

ಸೇಡಂ: ರಾಷ್ಟ್ರದಲ್ಲಿ ಒಗ್ಗಟ್ಟಿದ್ದರೆ ರಷ್ಯಾ, ಚೀನಾ ಹಾಗೂ ಪಾಕಿಸ್ತಾನವನ್ನು ಎದರಿಸಬಹುದು ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರು ಹೇಳಿದರು.

Advertisement

ಪಟ್ಟಣದ ಶ್ರಿ ಕೊತ್ತಲ ಬಸವೇಶ್ವರ ದೇವಾಲಯದ ಮಂಗಲ ಮಂಟಪದಲ್ಲಿ ನಡೆದ ಉಚಿತ ಬೃಹತ್ ಆರೋಗ್ಯ ಶಿಬಿರ, ನೇತ್ರದಾನ ಶಿಬಿರ ಹಾಗೂ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜೆಡಿಎಸ್ ಪಕ್ಷವನ್ನು ಮುಗಿಸಿ ಬಿಡುವ ಮಾತುಗಳನ್ನಾಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಾಂಗ್ರೇಸ್ ಮುಖಂಡರಿಗೆ ಮುಂದಿನ ದಿನಗಳಲ್ಲಿ ಜನ ಉತ್ತರ ನೀಡಲಿದ್ದಾರೆ. ಜೆಡಿಎಸ್ ಉಳಿಸುವ ಶಕ್ತಿ ಜನ ಮಾಡ್ತಾರೆ. ಕೇವಲ ರಾಜಸ್ಥಾನ, ಛತ್ತೀಸಗಢದಲ್ಲಿ ಮಾತ್ರ ಉಳಿದಿರುವ ಕಾಂಗ್ರೇಸ್ ಪಕ್ಷ ತನ್ನ ಉಳಿವಿಗಾಗಿ ಹೋರಾಡಬೇಕಿದೆ ಎಂದು ತಿರುಗೇಟು ನೀಡಿದರು.

ಸಮಾಜದಲ್ಲಿ ತುಳಿತಕ್ಕೆ ಒಳಗಾದ ಮಹಿಳೆಯರಿಗೆ ರಾಜಕೀಯ ಶಕ್ತಿ ಕೊಟ್ಟಿದ್ದು ಜೆಡಿಎಸ್ ಪಕ್ಷ. ಡಾ. ಬಿ.ಆರ್. ಅಂಬೇಡ್ಕರ್ ಹಾಕಿಕೊಟ್ಟ ದಾರಿಯಲ್ಲಿ ನಡೆದು ಸಮಾನತೆಯನ್ನು ಸಾರಿದ್ದು ಜೆಡಿಎಸ್ ಪಕ್ಷವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್,  ಮಹಾತ್ಮಾ ಗಾಂಧೀಜಿ ರಾಷ್ಟ್ರೀಯ ಶಕ್ತಿ ಕೊಟ್ಟ ಮಹಾನ್ ನಾಯಕರಾಗಿದ್ದಾರೆ ಎಂದು ಹೇಳಿದರು.

ಬಡತನಕ್ಕೆ ಜಾತಿ ಇರುವುದಿಲ್ಲ, ಈ ವಿಷಯದಲ್ಲಿ ಬಿಜೆಪಿ ಸರಿಯಾಗಿ ನಡೆದುಕೊಂಡಿಲ್ಲ. ದೇವನೊಬ್ಬ ನಾಮ ಹಲವು ಎಂಬಂತೆ ಸಹಬಾಳ್ವೆಯಿಂದ ಬಾಳಿ ದೇಶ ಕಾಪಾಡುವ ಕೆಲಸ ಮಾಡಬೇಕಿದೆ. ರಾಷ್ಟ್ರದಲ್ಲಿ ಐಕ್ಯತೆ ಇಲ್ಲದಿದ್ದಲ್ಲಿ ಎದುರಾಳಿಯನ್ನು ಎದುರಿಸುವುದು ಅಸಾಧ್ಯ ಎಂದರಲ್ಲದೆ, ಈಶ್ವರ ಅಲ್ಲಾ ತೇರೆ ನಾಮ್ ಸಬ್ ಕೊ ಸನ್ಮತಿ ದೇ ಭಗವಾನ್ ಎನ್ನುವ ಮೂಲಕ ತಮ್ಮ ಭಾಷಣಕ್ಕೆ ಹೆಚ್.ಡಿ.ಡಿ. ತೆರೆ ಎಳೆದರು.

ಇದನ್ನೂ ಓದಿ : ಸದ್ದು ಗದ್ದಲವಿಲ್ಲದೇ ಉಡುಪಿಯಲ್ಲಿ ನಟಿ ಶುಭಾ ಪೂಂಜಾ ವಿವಾಹ, ವರ ಯಾರು ಗೊತ್ತಾ?

Advertisement

ಸ್ವಾಮೀಜಿಗೆ ಸೀಟ್ ಬಿಟ್ಟುಕೊಟ್ಟ ಹೆಚ್‌ಡಿಡಿ
ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಗೆ ವಿಶೇಷ (ರಾಜಾ ಸೀಟ್) ಆಸನದ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ಶ್ರಿ ಕೊತ್ತಲ ಬಸವೇಶ್ವರ ದೇವಾಲಯದ ಪೂಜ್ಯ ಸದಾಶಿವ ಸ್ವಾಮೀಜಿ ವೇದಿಕೆ ಬಂದ ಕೂಡಲೇ ದೇವೇಗೌಡ ಅವರು ತಮ್ಮ ಆಸನವನ್ನು ಬಿಟ್ಟುಕೊಟ್ಟು ಗಮನಸೆಳೆದರು. ಇದನ್ನು ಕಂಡ ನೂರಾರು ಜನ ಕಾರ್ಯಕರ್ತರು ಚಪ್ಪಾಳೆಯ ಮೂಲಕ ಹೆಚ್.ಡಿ.ಡಿ. ಸರಳತೆಯನ್ನು ಕೊಂಡಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next