Advertisement

ತುರ್ತು ಪರಿಸ್ಥಿತಿ ಘೋಷಣೆ: ಎಚ್‌ಡಿಡಿ

12:58 AM Apr 23, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆ ವ್ಯಾಪಕವಾಗಿದ್ದು, ಸರಕಾರಿ ಹಾಗೂ ಖಾಸಗಿ ಆಸ್ಪತೆಗಳಲ್ಲಿ ಲಭ್ಯವಿರುವ ಹಾಸಿಗೆಗಳು ಸಾಕಾಗದ ಕಾರಣ ಈ ಪರಿಸ್ಥಿತಿಯನ್ನು ರಾಜ್ಯ ಸರಕಾರ “ಆರೋಗ್ಯ ತುರ್ತು ಪರಿಸ್ಥಿತಿ’ ಎಂದು ಘೋಷಿಸಿ ಸಮಾರೋಪಾದಿಯಲ್ಲಿ  ಕೋವಿಡ್‌ ಹಾಸಿಗೆಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

Advertisement

ಕೋವಿಡ್‌ ಎರಡನೇ ಅಲೆ ತೀವ್ರ ವಾಗಿದ್ದು, ಸೋಂಕಿತರಲ್ಲಿ ಹಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಅತ್ಯಾವಶ್ಯಕವಾಗಿದೆ. ಅಲ್ಲದೆ ಸೋಂಕಿ ತರಲ್ಲಿ ಹಲವರಿಗೆ ವೈದ್ಯಕೀಯ ಆಮ್ಲಜನಕಯುಕ್ತ ಹಾಸಿಗೆಗಳು ಹಾಗೂ ವೆಂಟಿಲೇಟರ್‌ ಅಗತ್ಯವಿದೆ. ಸದ್ಯ ಅವುಗಳ ಕೊರತೆಯಿದ್ದು, ಅದನ್ನು  ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರಕಾರ ಕೋವಿಡ್‌ ಸೋಂಕಿನ ಮೊದಲ ಅಲೆ ನಿಯಂತ್ರಿಸಲು ಖರೀದಿಸಿದ ಸಾವಿ ರಾರು ವೆಂಟಿಲೇಟರ್‌ಗಳು  ಸರಕಾರಿ ಆಸ್ಪತ್ರೆ ಹಾಗೂ ಉಗ್ರಾಣಗಳಲ್ಲಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಸರಕಾರ ಕೂಡಲೇ  ಅಂಥ ವೆಂಟಿಲೇಟರ್‌ಗಳನ್ನು ತಜ್ಞರಿಂದ ಪರಿಶೀಲಿಸಿ  ಆಸ್ಪತ್ರೆಗಳಲ್ಲಿ ಬಳಸಲು ಮುಂದಾಗಬೇಕು ಎಂದಿದ್ದಾರೆ.

 ಪರಿಷತ್‌ ಸದಸ್ಯರ ಆಗ್ರಹ :  

ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸುವಂತೆ ಆಡಳಿತಾ ರೂಢ ಬಿಜೆಪಿಯ ವಿಧಾನಪರಿಷತ್‌ ಸದಸ್ಯ ವೈ.ಎ.ನಾರಾಯಣ ಸ್ವಾಮಿ  ಆಗ್ರಹಿಸಿದ್ದಾರೆ.

Advertisement

ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ಇಂದು ನಾವೆಲ್ಲರೂ ನಮ್ಮ ಜೀವಮಾನದ ಅತ್ಯಂತ ದುರದೃಷ್ಟಕರ ಹಾಗೂ ಸಂಕಷ್ಟಮಯ ಘಟ್ಟದಲ್ಲಿದ್ದೇವೆ.  ರಾಜ್ಯದಲ್ಲಿ ಎರಡನೇ ಅಲೆ ಮರಣಾಂತಿಕ ರೂಪ ಪಡೆಯುತ್ತಿದೆ.

ನನ್ನ ಹತ್ತಿರದ ಸಂಬಂಧಿಗೆ ಸೋಂಕು ತಗಲಿದ್ದು, ಬುಧವಾರ ಅವರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಒದಗಿಸಲು ಆರೋಗ್ಯ ಸಚಿವರಾದ ಡಾ| ಕೆ.ಸುಧಾಕರ್‌, ಬಿಬಿಎಂಪಿ  ಆಯು ಕ್ತರು  ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿ ಸಿದೆ. ಆದರೆ ಎಲ್ಲಿಯೂ ಒಂದೂ ಹಾಸಿಗೆ ಸಿಗಲಿಲ್ಲ. ಸೋಂಕಿತ ವ್ಯಕ್ತಿ ಮಧ್ಯಾಹ್ನ 2ರಿಂದ ತಡರಾತಿ 11 ಗಂಟೆ ವರೆಗೆ  ಆ್ಯಂಬುಲೆನ್ಸ್‌ ನಲ್ಲೇ ಇರಬೇಕಾಯಿತು. ಒಬ್ಬ ಜನಪ್ರತಿನಿಧಿಯಾಗಿ, ನನ್ನ ವಿಷಯ ದಲ್ಲೇ ಇಂತಹ ಅನುಭವವಾದರೆ ಇನ್ನು ಜನಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದ್ದಾರೆ.

ಯು.ಬಿ.ವೆಂಕಟೇಶ್‌ ಪತ್ರ  :

ಕಾಂಗ್ರೆಸ್‌ನ ವಿಧಾನಪರಿಷತ್‌ ಸದಸ್ಯ ಯು.ಬಿ.ವೆಂಕಟೇಶ್‌ ಕೂಡ  ಪತ್ರ ಬರೆದಿದ್ದು, ಬೆಂಗಳೂರಿನಲ್ಲಿ ಕೊರೊನಾ ಹೆಚ್ಚುತ್ತಿದ್ದರೂ  ಸರಕಾರ ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ನೋವುಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿರುವುದು ಅತ್ಯಂತ ಖೇದನೀಯ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next