Advertisement

ಗುರು-ಶಿಷ್ಯರು ಮತ್ತೆ ಆಸ್‌ಪಾಸ್‌

10:42 AM Apr 25, 2017 | Team Udayavani |

– ಜೆಡಿಎಸ್‌ನಲ್ಲಿರುವವರೆಲ್ಲಾ ನನಗೆ ಆಪ್ತರು: ಸಿಎಂ
– ಸಿದ್ದು ನನ್ನ ಸ್ನೇಹಿತ: ದೇವೇಗೌಡ 

Advertisement

ಹಾಸನ: ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಮತ್ತು ಮಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚಿನ ದಿನಗಳಲ್ಲಿ ಹತ್ತಿರವಾಗುತ್ತಿದ್ದಾರೆ ಎಂಬ ಸುದ್ದಿಗೆ ಶ್ರವಣಬೆಳಗೊಳದಲ್ಲಿ ಸೋಮವಾರ ನಡೆದ ಸಮಾರಂಭ ಮತ್ತೂಮ್ಮೆ ಸಾಕ್ಷಿಯಾಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದೇವೇ ಗೌಡರು ಸಿಎಂ ಸಿದ್ದರಾಮಯ್ಯ ಅವರ ಹೆಗಲ ಮೇಲೆ ಕೈ ಹಾಕಿ ವೇದಿಕೆ ಹತ್ತಿ ಆತ್ಮೀಯವಾಗಿ ಮಾತನಾಡಿದರು.

ಕಿವಿಯಲ್ಲಿ ಏನೋ ಗುಟ್ಟಾಗಿ ಮಾತನಾಡಿದ್ದು ಗಮನ ಸೆಳೆಯಿತು. ಅಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿ ಮಾತ ನಾಡುವಾಗಲೂ ಗುರು-ಶಿಷ್ಯರು ಪರಸ್ಪರ ಶ್ಲಾಘನೆ ಯಲ್ಲಿ ತೊಡಗಿದ್ದು ವಿಶೇಷ.

ದೇವೇಗೌಡರು ಮಾತನಾಡುವಾಗ, “ನನ್ನ ಸ್ನೇಹಿತ ಸಿದ್ದರಾಮಯ್ಯ ಸಿಎಂ ಆದ ನಂತರ ಹಾಸನ- ಬೆಂಗಳೂರು ರೈಲು ಮಾರ್ಗಕ್ಕೆ ರಾಜ್ಯದ ಪಾಲನ್ನು ನೀಡುವುದರ ಜೊತೆಗೆ ಭೂಸ್ವಾಧೀನ ಸಮಸ್ಯೆಯನ್ನೂ ಬಗೆಹರಿಸಿದರು. ಹಾಸನ-ಬೆಂಗಳೂರು ರೈಲು ಮಾರ್ಗದ ಉದ್ಘಾಟ ನೆಯೂ ಅವರ ಸಮ್ಮುಖದಲ್ಲಿಯೇ ನೆರವೇರಿತು. ಇದೆಲ್ಲಾ ಆಯಾಯ ಕಾಲದ
ಮಹಿಮೆ’ ಎಂದು ಹೇಳಿದರು.

ಸಿದ್ದರಾಮಯ್ಯ ಮಾತನಾಡುವಾಗ, “ಜೆಡಿಎಸ್‌ನಲ್ಲಿರುವವರೆಲ್ಲಾ ನನಗೆ ವೈಯಕ್ತಿಕ ವಾಗಿ ಆಪ್ತರು. ಆದರೆ, ರಾಜಕೀಯವಾಗಿ ವಿರೋಧಿಗಳು. ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ, ಮನುಷ್ಯ ಸಂಬಂಧಗಳು ಬಹಳ ಮುಖ್ಯ. ಮಸ್ತಕಾಭಿಷೇಕಕ್ಕೆ ಕೇಂದ್ರ ಸರ್ಕಾರದಿಂದ ವಿಶೇಷ ಅನುದಾನ ಕೇಳಿದ್ದೇವೆ, ಒತ್ತಡ ತರುವಂತೆ ದೇವೇಗೌಡರಿಗೆ ಮನವಿ
ಮಾಡಿದ್ದೇನೆ. ಇನ್ನೊಮ್ಮೆ ಪ್ರಧಾನಿ ಬಳಿ ನಮ್ಮನ್ನೆಲ್ಲಾ ಕರೆದುಕೊಂಡು ಹೋಗುವಂತೆ ಮನವಿ ಮಾಡುವೆ’ ಎಂದು ತಿಳಿಸಿದರು. ಕಳೆದ ವಿಧಾನಸಭೆ ಚುನಾವಣೆ ನಂತರ ರಾಜಕೀಯವಾಗಿ ಹಾಗೂ ವೈಯಕ್ತಿಕವಾಗಿ ಅಂತರ ಕಾಯ್ದುಕೊಂಡಿದ್ದ ದೇವೇಗೌಡ ಹಾಗೂ ಸಿದ್ದರಾಮಯ್ಯ, ಕಾವೇರಿ ವಿವಾದ, ಬಿಬಿಎಂಪಿ ಮೇಯರ್‌ ಚುನಾವಣೆ ವೇಳೆ ಮೈತ್ರಿ ವಿಚಾರದಲ್ಲಿ ಹತ್ತಿರವಾದರು.

Advertisement

ಈ ಮೈತ್ರಿ ಎರಡನೇ ವರ್ಷವೂ ಮುಂದುವರಿಯಲು ಇಬ್ಬರ ನಡುವಿನ ಆತ್ಮೀಯತೆಯೇ ಕಾರಣವಾಯಿತು. ನಂಜನಗೂಡು- ಗುಂಡ್ಲು ಪೇಟೆ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ, ದೇವೇಗೌಡರು ಕಾಂಗ್ರೆಸ್‌ಗೆ ಪರೋಕ್ಷ ಬೆಂಬಲ ನೀಡಿದ್ದರು. ಇದು ಇವರಿಬ್ಬರ ಸ್ನೇಹಕ್ಕೆ ಮತ್ತಷ್ಟು ಬಲ ನೀಡಿತ್ತು. ಇನ್ನು ಹಾಸನ ಜಿಲ್ಲೆಯ ಕಾರ್ಯಕ್ರಮಗಳಿಗೆ ಸಿದ್ದರಾಮಯ್ಯ ತಪ್ಪಿಸಿಕೊಳ್ಳುತ್ತಿಲ್ಲ. ಎರಡು ಮೂರು ಕಾರ್ಯಕ್ರಮಗಳಲ್ಲಿ ದೇವೇಗೌಡರೊಂದಿಗೆ
ವೇದಿಕೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಉಡುಪಿ ಜಿಲ್ಲೆ ಬಾರಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲೂ ಇಬ್ಬರು
ಪಾಲ್ಗೊಳ್ಳಬೇಕಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next