Advertisement
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಎರಡು ತಿಂಗಳು ಮಾತ್ರ ಇದ್ದು ತಳಮಟ್ಟದಿಂದ ಪಕ್ಷ ಸಂಘಟಿಸಿ ನಮ್ಮನ್ನು ನಾವು ಬಲಪಡಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಶಾಸಕರು ಹಾಗೂ ಪರಿಷತ್ ಸದಸ್ಯರಿಗೂ ಜವಾಬ್ದಾರಿ ನೀಡಲಾಗುವುದು ಎಂದು ಹೇಳಿದರು.
Related Articles
ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಬಗ್ಗೆ ನಾವು ಸಮಸ್ಯೆ ಮಾಡಿಕೊಳ್ಳಲು ಹೋಗುವುದಿಲ್ಲ. ಜೆಡಿಎಸ್‌ದು ಈಗ ಎರಡು ಇದೆಯೋ, ಮೂರು ಇದೆಯೋ ಮತ್ತಷ್ಟು ಸಂಖ್ಯೆ ಹೆಚ್ಚಿಸಿಕೊಳ್ಳಬೇಕಾಗಿದೆ. ಕಾಂಗ್ರೆಸ್ ಮಿತ್ರರೂ ಉದಾರತೆ ತೋರಬೇಕು ಎಂದು ಹೇಳಿದರು.
Advertisement
ಈ ತಿಂಗಳಾಂತ್ಯಕ್ಕೆ ಸೀಟು ಹಂಚಿಕೆ ಸುಸೂತ್ರವಾಗಿ ಮುಗಿಯಲಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ, ದಿನೇಶ್ ಗುಂಡೂರಾವ್, ಪರಮೇಶ್ವರ್, ವಿಶ್ವನಾಥ್ ಎಲ್ಲರೂ ಮಾತನಾಡಿ ತೀರ್ಮಾನ ಮಾಡಲಿದ್ದಾರೆ. ನಾನೂ ರಾಹುಲ್‌ಗಾಂಧಿಯವರ ಜತೆ ಚರ್ಚಿಸುತ್ತೆನೆ ಎಂದು ತಿಳಿಸಿದರು. ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತಾ, ಮುಖಂಡರಾದ ಜಫ್ರುಲ್ಲಾ ಖಾನ್, ಪ್ರಕಾಶ್, ಶಫೀವುಲ್ಲಾ ಉಪಸ್ಥಿತರಿದ್ದರು.
ಸ್ಪರ್ಧೆ ಬಗ್ಗೆ ಸ್ಪಷ್ಟತೆ ಇಲ್ಲ*ಲೋಕಸಭೆ ಚುನಾವಣೆಯಲ್ಲಿ ತಮ್ಮ ಸ್ಪರ್ಧೆ ಬಗ್ಗೆ ದೇವೇಗೌಡರು ಅಡ್ಡ ಗೋಡೆ ಮೇಲೆ ದೀಪ ವಿಟ್ಟಂತೆ ಮಾತನಾಡಿದ್ದಾರೆ. ನಮಗೆ ಲೋಕಸಭೆಯಲ್ಲಿ ಕೊಡುವುದು ಮೂರು ನಿಮಿಷ. ಅಲ್ಲಿ ಹೋಗಿ ಏನು ಮಾಡಬೇಕು. ಪಕ್ಷದ ಸಂಖ್ಯೆ ಹೆಚ್ಚಿಸಬೇಕಾಗಿದೆ. ಗೌಡರು ಮತ್ತೆ ಲೋಕಸಭೆಗೆ ಹೋಗಲು ಇಷ್ಟೆಲ್ಲಾ ಮಾತಾಡ್ತಾರೆ ಅಂತ ನೀವು ಎಂದುಕೊಳ್ಳಬಹುದು. ನನಗೆ ಅಧಿಕಾರ ಮುಖ್ಯವಲ್ಲ, ಅದಕ್ಕೆ ಅಂಟಿಕೊಂಡು ಕೂರುವುದೂ ಇಲ್ಲ ಎಂದು ಹೇಳಿದರು. ಸರ್ಕಾರದಲ್ಲಿ ಸಣ್ಣ ಪುಟ್ಟ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡಿ ಸಮಸ್ಯೆ ಸೃಷ್ಟಿಸಿಕೊಳ್ಳುವುದು ಸರಿಯಲ್ಲ. ಅದು ದಿನೇಶ್‌ಗುಂಡೂರಾವ್ ಆಗಲಿ, ರೇವಣ್ಣ ಆಗಲಿ. ಏನೇ ಸಮಸ್ಯೆ ಇದ್ದರೂ ಕುಳಿತು ಬಗೆಹರಿಸಿಕೊಳ್ಳಬೇಕು. ಸಮ್ಮಿಶ್ರ ಸರ್ಕಾರಕ್ಕೆ ಬಾಧಕವಾಗುವ ರೀತಿ ಯಾರೂ ನಡೆದುಕೊಳ್ಳಬಾರದು. ಒಂದೆರಡು ದಿನಗಳಲ್ಲಿ ಜೆಡಿಎಸ್ ಪಾಲಿನ ನಿಗಮ ಮಂಡಳಿ ಅಧ್ಯಕ್ಷರು, ಸದಸ್ಯರ ನೇಮಕ ಮಾಡಲಾಗುವುದು.
– ಎಚ್.ಡಿ.ದೇವೇಗೌಡ ಕನ್ನಡದ ಆಸ್ಮಿತೆ ಹಾಗೂ ಅಸ್ತಿತ್ವ ಉಳಿಸುವ ವಿಚಾರದಲ್ಲಿ ಕುಮಾರಸ್ವಾಮಿಯವರು ವಡ್ಡಾರಾಧನೆಯ ಸುಕುಮಾರಸ್ವಾಮಿಯೂ ಆಗುವುದಿಲ್ಲ, ಚಂಪಾ ಹೇಳಿದಂತೆ ಕುಠಾರಸ್ವಾಮಿಯೂ ಆಗುವುದಿಲ್ಲ, ಕಠೊರಸ್ವಾಮಿಯಾಗಲಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸುವ ಸಂಬಂಧ ಸರ್ಕಾರದ ತೀರ್ಮಾನ ಹೇಳಿದ್ದಾರೆ. ಜತೆಗೆ ಮತ್ತೂಮ್ಮೆ ಸಾಹಿತಿ ಚಿಂತಕರ ಜತೆ ಚರ್ಚಿಸುವುದಾಗಿಯೂ ಹೇಳಿದ್ದಾರೆ.
– ವೈ.ಎಸ್.ವಿ.ದತ್ತಾ, ಮಾಜಿ ಶಾಸಕ