ಕೊಚ್ಚಿ: ಹೆಚ್ಚುವರಿ ಹುದ್ದೆಯೊಂದನ್ನು ಸೃಷ್ಟಿಸಿ, ಶಾಸಕನ ಮಗನಿಗೆ ಆ ಹುದ್ದೆಯನ್ನು ನೀಡಿದರೆ, ಮುಂದೊಂದು ದಿನ ಪಂಚಾಯತ್ ಅಧ್ಯಕ್ಷನಿಂದ ಹಿಡಿದು ಎಲ್ಲ ದೊಡ್ಡ ದೊಡ್ಡ ಹುದ್ದೆಯಲ್ಲಿರುವವರ ಮಕ್ಕಳನ್ನು ಇದೇ ರೀತಿ ನೇಮಕ ಮಾಡಲು ಸರ್ಕಾರಕ್ಕೆ ಮುಕ್ತ ಅವಕಾಶ ಕೊಟ್ಟಂತಾಗುತ್ತದೆ. ಹಾಗಾಗಿ, ಇಂಥದ್ದಕ್ಕೆ ಅನುಮತಿ ನೀಡಲು ಸಾಧ್ಯವೇ ಇಲ್ಲ.
ಹೀಗೆಂದು ಹೇಳಿರುವುದು ಕೇರಳ ಹೈಕೋರ್ಟ್. ಒಂದು ವೇಳೆ ಇಂಥದ್ದಕ್ಕೆ ಅನುಮತಿ ನೀಡಿದರೆ, ಅದು ಸಮಾನತೆ ಮತ್ತು ಕಾನೂನಿನ ಸಮಾನ ರಕ್ಷಣೆಯ ಸ್ಪಷ್ಟ ಉಲ್ಲಂಘನೆ ಮಾಡಿದಂತೆ. ಮಾತ್ರವಲ್ಲದೇ ಅರ್ಹ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗಕ್ಕಾಗಿ ವರ್ಷಾನುಗಟ್ಟಲೆ ಕಾಯುತ್ತಲೇ ಇರಬೇಕಾಗುತ್ತದೆ ಎಂದೂ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸಿಪಿಎಂನ ಮಾಜಿ ಶಾಸಕ ದಿವಂಗತ ಕೆ.ಕೆ.ರಾಮಚಂದ್ರನ್ ನಾಯರ್ ಅವರ ಪುತ್ರ ಆರ್.ಪ್ರಶಾಂತ್‌ರನ್ನು ಸರ್ಕಾರಿ ಉದ್ಯೋಗದಿಂದ ಕೈಬಿಡುವಂತೆ ಆದೇಶಿಸುವ ವೇಳೆ ಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಇದನ್ನೂ ಓದಿ:ಮದುವೆಗೆ ಮೊದಲೇ ವಿಕ್ಕಿ-ಕತ್ರಿನಾ ವಿರುದ್ಧ ದೂರು
ಹೆಚ್ಚುವರಿ ಹುದ್ದೆ ಸೃಷ್ಟಿಸುವ ಮೂಲಕ ಲೋಕೋಪಯೋಗಿ ಇಲಾಖೆಯಲ್ಲಿ ಪ್ರಶಾಂತ್‌ರನ್ನು ಸಹಾಯಕ ಎಂಜಿನಿಯರ್ ಆಗಿ ನೇಮಕ ಮಾಡಲಾಗಿತ್ತು. ಶಾಸಕನ ಪುತ್ರ ಎಂಬ ಏಕೈಕ ಕಾರಣಕ್ಕಾಗಿ ಅವರಿಗೆ ನಿಯಮ ಉಲ್ಲಂ ಸಿ ಸರ್ಕಾರಿ ಹುದ್ದೆ ನೀಡಿರುವುದು ಅಕ್ಷಮ್ಯ ಎಂದೂ ಕೋರ್ಟ್ ಹೇಳಿದೆ.