ಹೊಸದಿಲ್ಲಿ : ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆಯ ಆಟ್ಟಾ ಉತ್ಪನ್ನವನ್ನು ಕಳಪೆ ಎಂದು ಕೀಳಂದಾಜಿಸುವ ವಿಡಿಯೋ ಬ್ಲಾಗನ್ನು ತೆಗೆದು ಹಾಕುವಂತೆ ದಿಲ್ಲಿ ಹೈಕೋರ್ಟ್, ಫೇಸ್ ಬುಕ್, ಗೂಗಲ್ ಮತ್ತು ಯೂ ಟ್ಯೂಬ್‌ಗೆ ನಿರ್ದೇಶಿಸಿದೆ.
ಜಸ್ಟಿಸ್ ರಾಜೀವ್ ಸಹಾಯ್ ಇಂದ್ಲಾ ಅವರು ಮಧ್ಯಾವಧಿ ಆದೇಶ ಹೊರಡಿಸಿ ಸಂಬಂಧಿತ ವಿಡಿಯೋ ಬ್ಲಾಗ್‌ಗಳ ಲಿಂಕ್‌ಗಳನ್ನು ಹಾಗೂ ಅವುಗಳಲ್ಲಿರುವ ಹೂರಣವನ್ನು ನಿರ್ಬಂಧಿಸುವಂತೆ ಮೂರೂ ಸಾಮಾಜಿಕ ಮಾಧ್ಯಮಗಳಿಗೆ ನಿರ್ದೇಶನ ನೀಡಿದರು.
ಮಾತ್ರವಲ್ಲದೆ ಈ ವಿವಾದಿತ ವಿಡಿಯೋ ಬ್ಲಾಗ್‌ಗಳು ಯಾರ ಹೆಸರಲ್ಲಿ ಇವೆಯೋ ಆ ವ್ಯಕ್ತಿಗಳ ಗುರುತನ್ನು ಬಹಿರಂಗಪಡಿಸಬೇಕು ಮತ್ತು ಅದರ ಯುಆರ್‌ಎಲ್‌ಗಳು ದಾಖಲಾಗಿವೆಯೇ ಎಂಬುದನ್ನು ತಿಳಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಮೇ 15ಕ್ಕೆ ನಿಗದಿಸಿತು.