Advertisement

ವಿದ್ಯಾರ್ಥಿಗಳು ತಯಾರಿಸಿದ ಇ-ಡ್ರೈವ್‌ ಆಟೋ ಈಗ ಐಟಿಬಿಪಿ ವಾಹನ!

01:35 PM Jun 01, 2022 | Team Udayavani |

ನವದೆಹಲಿ: ಐಟಿಬಿಪಿ (ಇಂಡೋ ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌) ಪಡೆಯಡಿ ಕಾರ್ಯನಿರ್ವಹಿಸುವ ಚಂಡೀಗಢದಲ್ಲಿರುವ ತಾಂತ್ರಿಕ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ತರಬೇತಿ ವಿದ್ಯಾರ್ಥಿಗಳು, ತಮ್ಮ ಕಲಿಕೆಯ ಭಾಗವಾಗಿ ತಯಾರಿಸಿದ್ದ “ಹಾಕ್‌’ ಎಂಬ ವಿದ್ಯುತ್‌ ಚಾಲಿತ ಆಟೋವೊಂದು ಐಟಿಬಿಪಿ ಪಡೆಯ ಬಳಕೆಗೆ ಸೇರ್ಪಡೆಯಾಗಿದೆ!

Advertisement

ವ್ಯರ್ಥ ಬಿಡಿಭಾಗಗಳಿಂದಲೇ ಈ ಆಟೋವನ್ನು ತಯಾರಿಸಿರುವುದು ಇದರ ಮತ್ತೂಂದು ವಿಶೇಷ. ಇದು ಮೇಕ್‌ ಇನ್‌ ಇಂಡಿಯಾದ ಒಂದು ಭಾಗ ಎಂದು “ಐಟಿಬಿಪಿ’ ವಕ್ತಾರ ವಿವೇಕ್‌ ಪಾಂಡೆ ಹೇಳಿದ್ದಾರೆ.

ಏನಿದರ ವಿಶೇಷ?
“ಹಾಕ್‌’ ಆಟೋದ ವೇಗ ಗಂಟೆಗೆ 20ರಿಂದ 25 ಕಿ.ಮೀ. ಮಾತ್ರ. ಒಂದು ಬಾರಿಗೆ ಐವರು ಕುಳಿತುಕೊಳ್ಳಬಹುದು. 48 ವೋಲ್ಟ್ ಸಾಮರ್ಥ್ಯದ ನಾಲ್ಕು ಬ್ಯಾಟರಿಗಳು ಇದರಲ್ಲಿವೆ. ಒಂದು ಬ್ಯಾಟರಿಗೆ 6 ಗಂಟೆ ಚಾರ್ಜ್‌ ಹಿಡಿದಿಟ್ಟುಕೊಳ್ಳುವ ಶಕ್ತಿ ಹೊಂದಿದೆ. ಇದು ಡ್ರಮ್‌ ಮಾದರಿಯ ಬ್ರೇಕಿಂಗ್‌ ವ್ಯವಸ್ಥೆಯನ್ನು ಹೊಂದಿದೆಯಾದರೂ ಅದರಲ್ಲಿ ಇತ್ತೀಚಿನ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದಲ್ಲದೆ, ಇದರಲ್ಲಿ ಡೈರೆಕ್ಟ್ ಡ್ರೈವ್‌ ಟ್ರಾನ್ಸ್‌ಮಿಷನ್‌, ಸ್ಪ್ರಿಂಗ್‌ ಟೈಪ್‌ ಸಸ್ಪೆನÒನ್‌ ತಂತ್ರಜ್ಞಾನಗಳೂ ಇವೆ.

Advertisement

Udayavani is now on Telegram. Click here to join our channel and stay updated with the latest news.

Next