ಹೈದರಾಬಾದ್ : ದಾಖಲೆ ಇಲ್ಲದೆ ಹೈದರಾಬಾದಿನಿಂದ ಮಹಾರಾಷ್ಟ್ರದ ಸೋಲಾಪುರಕ್ಕೆ ಸಾಗಿಸುತ್ತಿದ್ದ 3.75ಕೋಟಿ ರೂಪಾಯಿಗಳನ್ನು ಹೈದರಾಬಾದಿನ ಪೊಲೀಸರು ವಶಪಡಿಸಿಕೊಂಡಿದ್ದಾರೆ ಜೊತೆಗೆ ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಹವಾಲಾ ಹಣವನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಪಡೆದ ಹೈದರಾಬಾದ್ ಪೊಲೀಸರು ಬಂಜಾರ ಹಿಲ್ಸ್ ಬಳಿ ನಾಲ್ವರು ಆರೋಪಿಗಳ ಸಹಿತ ಎರಡು ಕಾರು ಜೊತೆಗೆ 3.75ಕೋಟಿ ರೂಪಾಯಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ತಾವು ಮುಂಬೈ ಮೂಲದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದು ಕಂಪೆನಿಯ ಮಾಲಕರು ಹೈದರಾಬಾದ್ ಮೂಲದವರಾಗಿದ್ದು ಹೈದರಾಬಾದಿನಲ್ಲೂ ಶಾಖಾ ಕಚೇರಿಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ, ಹಾಗಾಗಿ ಹಣವನ್ನು ಮಹಾರಾಷ್ಟ್ರದ ಸೋಲಾಪುರಕ್ಕೆ ಸಾಗಿಸುತ್ತಿದ್ದುದಾಗಿ ಹೇಳಿದ್ದಾರೆ.
ಇದನ್ನೂ ಓದಿ:5 ಮಂದಿ ಯುವಕರ ಬೆನ್ನಟ್ಟಿದ ಪೊಲೀಸರು: ರಕ್ಷಣೆಗಾಗಿ ನದಿಗೆ ಜಿಗಿದ ಯುವಕರು! ಮುಂದೇನಾಯ್ತು?
ಆರೋಪಿಗಳಿಂದ ಹೆಚ್ಚಿನ ವಿಚಾರಣೆ ನಡೆಸಬೇಕಿದ್ದು ಸದ್ಯ ವಶಪಡಿಸಿಕೊಂಡ ಹಣವನ್ನು ಹೈದರಾಬಾದ್ ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಿದ್ದಾರೆ.
ಹೆಚ್ಚಿನ ವಿಚಾರಣೆಯ ಬಳಿಕ ಸತ್ಯಾಂಶ ಹೊರಬೀಳಲಿದೆ ಎನ್ನುತ್ತಾರೆ ಪೊಲೀಸರು.