ಬೆಂಗಳೂರು: ಕಾಂಗ್ರೆಸ್ ಚುನಾವಣೆ ಪ್ರಚಾರದಲ್ಲಿ ಹೊರ ತಂತ್ರ ರೂಪಿಸಿಕೊಂಡಿದೆ. ಅದೇನೆಂದರೆ, ಸುಳ್ಳು, ಸುಳ್ಳಿನ ಮೇಲೆ ಸುಳ್ಳು, ಜೋರಾಗಿ ಸುಳ್ಳು ಹೇಳುವುದು, ಹಗಲು, ರಾತ್ರಿ ಸುಳ್ಳನೇ ಹೇಳುವುದು, ಪದೇಪದೇ ಸುಳ್ಳನ್ನೇ ಹೇಳುವುದಾಗಿ ಘೋಷಿಸಿಕೊಂಡಿದ್ದಾರೆ.
ಐದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ ಸಾಧನೆ ಹೇಳುವ ಬದಲಿಗೆ ಕೇಂದ್ರದಲ್ಲಿ ಮೋದಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಇದು ವಿಧಾನಸಭೆ ಚುನಾವಣೆ ರಾಜ್ಯಕ್ಕೆ ಕಾಂಗ್ರೆಸ್ ಏನು ಮಾಡಿದೆ ಎಂಬುದನ್ನು ಹೇಳಬೇಕೇ ವಿನಃ ಮೋದಿ ಏನು ಮಾಡಿದ್ದಾರೆ ಎಂಬುದಲ್ಲ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.
ಪ್ರಣಾಳಿಕೆಯ ಪಾವಿತ್ರ್ಯ ಹಾಳು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಒಂದು ಸಾಸಿವೆ ಕಾಳನ್ನು ಪವರ್ತವಾಗಿ ಪರಿವರ್ತಿಸುವ ಕಲೆ ಸಿದ್ಧಿಸಿಕೊಂಡಿದೆ. ಕರ್ನಾಟಕದ ಐಟಿ ಕ್ಷೇತ್ರದಲ್ಲಿ 300 ಬಿಲಿಯನ್ ಡಾಲರ್ ಅಭಿವೃದ್ಧಿ ಮಾಡುತ್ತೇವೆ ಎಂದಿದ್ದಾರೆ. ಇದು ಸಾಧ್ಯವೇ ಇಲ್ಲ.
ಜನ ಸಾಮಾನ್ಯರು ಒಪ್ಪುವ ಸುಳ್ಳನ್ನಾದರು ಹೇಳಿ, ಅದನ್ನು ಬಿಟ್ಟು ಜಾರಿಗೆ ಬಾರದ, ಜನಸಾಮಾನ್ಯರಿಗೆ ಅರ್ಥವಾಗದ ಅಸತ್ಯ ಬೇಡವೇ ಬೇಡ. ಬಯೊಟೆಕ್ ಕ್ಷೇತ್ರದಲ್ಲಿ 50 ಬಿಲಿಯನ್ ಡಾಲರ್ ಪ್ರಗತಿ ಸಾಧಿಸಲಿದ್ದೇವೆ ಎಂದಿದ್ದಾರೆ. ಆದರೆ, ಈಗಿನ ಐಟಿ ಅಭಿವೃದ್ಧಿ ಇದಕ್ಕೆ ತದ್ವಿರುದ್ಧವಾಗಿದೆ. ಇಡೀ ದೇಶದ ಅಂಕಿ ಸಂಖ್ಯೆ ಸೇರಿದರು ಬಯೊಟೆಕ್ ಕ್ಷೇತ್ರದಲ್ಲಿ ಇಷ್ಟೊಂದು ಅಭಿವೃದ್ಧಿ ಅಸಾಧ್ಯ.
ಜಿಲ್ಲೆಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುವುದಾಗಿ ಹೇಳಿದ್ದವರು ನಂತರ ಮೂರು ಜಿಲ್ಲೆಗೆ ಒಂದು ಆಸ್ಪತ್ರೆ ಮಾಡುತ್ತೇವೆ ಎಂದಿದ್ದರು. ಯಾವುದೇ ಕೆಲಸ ಮಾಡದೆ, ಕಣ್ಣಿಗೆ ಮಣ್ಣೆರೆಚುವ ಮೂಲಕ ಕಾಂಗ್ರೆಸ್ ಪ್ರಣಾಳಿಕೆಯ ಪಾವಿತ್ರ್ಯತೆ ಹಾಳು ಮಾಡುತ್ತಿದ್ದಾರೆ. ಗಾಳಿಯಲ್ಲಿ ಮಾತನಾಡುವುದರಿಂದ ಓಟು ಸಿಗುವುದಿಲ್ಲ. “ಹವಾ ಹವಾಯಿ’ ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದರು.
ವಿಡಿಯೋ ಸಂವಾದ: ಶುಕ್ರವಾರ ಬೆಳಗ್ಗೆ 9 ಗಂಟೆಗೆ ಮೋದಿ ಆ್ಯಪ್ ಮೂಲಕ ಮಹಿಳಾ ಮೋರ್ಚಾದ ಕಾರ್ಯಕರ್ತರೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದೇನೆ. ಸ್ವತ್ಛ, ಸುಂದರ, ಸುರಕ್ಷಿತ ಕರ್ನಾಟಕ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ಕಾಂಗ್ರೆಸ್ ಸರ್ಕಾರವನ್ನು ಬದಲಿಸಿ, ಬಿಜೆಪಿ ಗೆಲ್ಲಿಸಿ ಎಂದರು.