Advertisement

ಹವ್ಯಕ ವೆಲ್ಫೇರ್‌ ಸಂಸ್ಥೆ: ಅಖಿಲ ಭಾರತ ಕನ್ನಡ ಕವನ ಸ್ಪರ್ಧೆಗೆ ಆಹ್ವಾನ

04:33 PM Jun 13, 2018 | |

ಮುಂಬಯಿ: ಹವ್ಯಕ ವೆಲ್ಫೇರ್‌ ಸಂಸ್ಥೆ ಮುಂಬಯಿ ವತಿಯಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ, ಕನ್ನಡದ ಉದ್ದಾಮ ಕವಿ ದಿ| ವಿ. ಜಿ. ಭಟ್ಟರ ಸ್ಮರಣಾರ್ಥಕವಾಗಿ ಅಖೀಲ ಭಾರತ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

Advertisement

ಆಸಕ್ತರು ಯಾವುದೇ ವಿಷಯದ ಕುರಿತಂತೆ ಕನ್ನಡ ಕವಿತೆಗಳನ್ನು ರಚಿಸಿ ಕಳುಹಿಸಬಹುದು. ಸ್ಪರ್ಧೆಗೆ ಯಾವುದೇ ರೀತಿಯ ಪ್ರವೇಶ ಶುಲ್ಕವಿಲ್ಲ. ವಿಜೇತ ಸ್ಪರ್ಧಿಗಳಿಗೆ ಪ್ರಥಮ 10 ಸಾವಿರ ರೂ., ದ್ವಿತೀಯ 5 ಸಾವಿರ ರೂ., ತೃತೀಯ 3 ಸಾವಿರ ರೂ. ಹಾಗೂ ಪ್ರೋತ್ಸಾಹಕ 1 ಸಾವಿರ ರೂ. ನಗದು ಬಹುಮಾನವನ್ನು ನೀಡಲಾಗುವುದು. ಕವನಗಳ ಸ್ವರಚಿತವಾಗಿದ್ದು, ಅನುವಾದ, ಅನುಕರಣೆ ಆಗಿರಕೂಡದು ಹಾಗೂ ಕವನಗಳು ಸುಮಾರು ಮೂವತ್ತು ಸಾಲಿನ ಮಿತಿಯಲ್ಲಿದ್ದು, ಕಾಗದದ ಒಂದೇ ಮಗ್ಗುಲಲ್ಲಿ ಚಿತ್ತಿಲ್ಲದಂತೆ ಸ್ಪುಟವಾಗಿ ಬರೆದಿರಬೇಕು. ಹಸ್ತ ಲಿಖೀತ ಅಥವಾ ಕಂಪ್ಯೂಟರ್‌ ಮುದ್ರಿತವಾಗಿದ್ದರೂ ಸ್ಪರ್ಧೆಗೆ ಪರಿಗಣಿಸಲಾಗುವುದು.

ಕವನದ ಕವಿಗಳ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ ಹಾಗೂ ಇಮೇಲ್‌ನ್ನು ಪ್ರತ್ಯೇಕ ಕಾಗದದಲ್ಲಿ ಬರೆದಿರಬೇಕು. ಸ್ಪರ್ಧೆಗೆ ಕಳುಹಿಸಿದ ಕವನಗಳು ಫಲಿತಾಂಶ ಬರುವ ತನಕ ಬೇರೆ ಎಲ್ಲಿಯೂ ಪ್ರಕಟವಾಗಬಾರದು. ಒಬ್ಬರು ಒಂದೇ ಕವನವನ್ನು ಬರೆದು ಕಳುಹಿಸತಕ್ಕದ್ದು. ಸ್ಪರ್ಧೆಗೆ ಬಂದ ಕವನಗಳನ್ನು ಹಿಂತಿರುಗಿಸಲಾಗುವುದಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು, ಕವನಗಳನ್ನು ಜುಲೈ 30 ರೊಳಗೆ ಕಳುಹಿಸಬಹುದು.

Havyaka Welfare Trust, B-207, Valmiki Apts, Near Pharmacy College, Sundar Nagar, Kalina, Vidyanagari P.O, Mumbai-400098ಅಥವಾ havyakamumbai@hotmail.com ಇಲ್ಲಿಗೆ ಕಳುಹಿಸಿಕೊಡುವಂತೆ ಸಂಸ್ಥೆಯ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next