Advertisement

ಕಷ್ಟ-ಕಾರ್ಪಣ್ಯಗಳನ್ನು ಮೆಟ್ಟಿನಿಂತರೆ ಗೌರವ

08:45 AM Mar 29, 2018 | Team Udayavani |

ಕುಂದಾಪುರ: ಕಲ್ಲೊಂದು ಹಲವು ಪೆಟ್ಟುಗಳನ್ನು ತಿಂದು ಹೇಗೆ ಶಿಲೆಯಾಗಿ ಪೂಜಿಸಲ್ಪಡುತ್ತದೋ ಹಾಗೆಯೇ ನಾವು ಕೂಡ ಜೀವನದಲ್ಲಿ ಎದುರಾಗುವ ಕಷ್ಟ- ಕಾರ್ಪಣ್ಯಗಳನ್ನು ಮೆಟ್ಟಿ ನಿಂತಾಗ ಗೌರವ ಸಿಗುತ್ತದೆ ಎಂದು ಶ್ರೀ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದರು. 

Advertisement

ಅವರು ಮಂಗಳವಾರ ಚಿಕ್ಕಮ್ಮನ ಸಾಲು ರಸ್ತೆಯಲ್ಲಿರುವ ನೂತನ ಶಿಲಾಮಯಗೊಂಡ ಶ್ರೀ ಚಿಕ್ಕಮ್ಮ ದೇವಿ, ಸಪರಿವಾರ ದೇವಸ್ಥಾನದ ಲೋಕಾರ್ಪಣೆ, ಸಹಸ್ರ ಕಲಶ ಸಹಿತ ಬ್ರಹ್ಮಕಲಶ, ಚಂಡಿಕಾ ಯಾಗದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚಿಸಿದರು. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಉತ್ತರ ಭಾರತದ ಅಯೋಧ್ಯೆಯ ಯೋಗಿರಾಜ್‌ ಮಹಂತ್‌ ಕೇಶವ್‌ ದಾಸಜಿ ಮಹಾರಾಜ್‌, ಪಂಚ್‌ ತೇರಾಭಾಯಿ ಅಖಾಡ ಅಯೋಧ್ಯಾ, ಹನುಮಾನ್‌ ದಾಸ್‌ಜಿ ಸಹಿತ ಅನೇಕ ಸಾಧುಗಳು, ಶೃಂಗೇರಿ ಶ್ರೀ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಎಚ್‌.ವಿ. ನರಸಿಂಹಮೂರ್ತಿ, ಬ್ರಹ್ಮಕಲಶೋತ್ಸವ ವಿಧಿ-ವಿಧಾನಗಳ ನೇತೃತ್ವ ವಹಿಸಿದ್ದ ಬ್ರಹ್ಮಶ್ರೀ ಕುತ್ಯಾರು ಕೇಂಜ ಶ್ರೀಧರ ತಂತ್ರಿ, ದೇವಸ್ಥಾನದ ಆಡಳಿಯ ಮಂಡಳಿಯ ಅಧ್ಯಕ್ಷ ಭಾಸ್ಕರ ಎಸ್‌. ಪುತ್ರನ್‌ ಮತ್ತಿತರರು ಉಪಸ್ಥಿತರಿದ್ದರು. 

ಧಾರ್ಮಿಕ ಸಭೆಗೂ ಮುನ್ನ ಬೆಳಗ್ಗೆ ಚಂಡಿಕಾಯಾಗ, ಬ್ರಹ್ಮಕಲಶಾಭಿಷೇಕ ಸಹಿತ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ಮಧ್ಯಾಹ್ನ ಮಹಾಪೂಜೆ, ಮಹಾ ಮಂತ್ರಾಕ್ಷತೆ ನೀಡಲಾಯಿತು. ಸಂಜೆ ಮಾಗದೇವರ ಸನ್ನಿಧಾನದಲ್ಲಿ ಹಾಲಿಟ್ಟು ಸೇವೆ, ನಾಗಸಂದರ್ಶನ, ಪ್ರಸಾದ ವಿತರಣೆ, ವಾರ್ಷಿಕ ಗೆಂಡಸೇವೆ ನಡೆಯಿತು. ಸುರೇಂದ್ರ ಸಂಗಮ್‌ ಸ್ವಾಗತಿಸಿ, ಪತ್ರಕರ್ತ ಕೆ.ಸಿ. ರಾಜೇಶ್‌ ನಿರೂಪಿಸಿದರು.

ಸೇವಾಕರ್ತರಿಗೆ ಸಮ್ಮಾನ
ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರಮಿಸಿದ ಚಂದು ಪೂಜಾರಿ¤ ಹಾಗೂ ಸುಭಾಷ್‌ ಪೂಜಾರಿ ಸಂಗಮ್‌ ಕುಟುಂಬಸ್ಥರು, ಶಿವರಾಮ ಪುತ್ರನ್‌, ರೋಹನ್‌ ಕೋತ್ರಾ, ಗರ್ಭ ಗುಡಿಯ ವಾಸ್ತು ವಿನ್ಯಾಸಗೊಳಿಸಿದ ಸುಬ್ರಹ್ಮಣ್ಯ ಭಟ್‌, ನಾಗಸಾಧುಗಳನ್ನು ಕರೆತರುವಲ್ಲಿ ಶ್ರಮಿಸಿದ ಹರೀಶ್‌ ತೋಳಾರ್‌ ಅವರನ್ನು ಸಮ್ಮಾನಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next