Advertisement

Haveri; ರಾಜ್ಯ ಸರ್ಕಾರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ: ಎಸ್.ವಿ. ಸಂಕನೂರು

12:52 PM Mar 15, 2024 | Team Udayavani |

ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆ ಮೂಲಕ ಅಧಿಕಾರಕ್ಕೆ ಬಂದಿದೆ. ಜನರ ನಿರೀಕ್ಷೆಗೆ ತಕ್ಕಂತೆ ರಾಜ್ಯ ಸರ್ಕಾರ ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ ಬರ ನಿರ್ವಹಣೆ ಕೈ ಸರ್ಕಾರ ಸರಿಯಾಗಿ ಮಾಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಹೇಳಿದರು.

Advertisement

ಹಾವೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಕಾಪಾಡುತ್ತಿಲ್ಲ. ಕೈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದ್ರೋಹದ ಪ್ರಕರಣ ಹೆಚ್ಚಾಗಿದೆ. ಮತ್ತೊಂದೆಡೆ ದೇಶ ಭಕ್ತರ ಮೇಲೆ ಎಫ್ಐಆರ್ ಮಾಡುತ್ತಿದ್ದಾರೆ. ಬರ ಕುರಿತು ರೈತರು ಸಿದ್ದರಾಮಯ್ಯ ಸರ್ಕಾರದ ಮೇಲೆ ಭರವಸೆ ಇಟ್ಟಿದ್ದರು. ಜನ ಗುಳೆ ಹೋಗುವುದನ್ನು ಸರ್ಕಾರ ತಡೆಯುವ ಪ್ರಯತ್ನ ಮಾಡಿಲ್ಲ ಎಂದರು.

ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ವಿವಿಧ ಯೋಜನೆ ನೀಡಿದರು. ರೈತರ ಮಕ್ಕಳಿಗೆ ವಿಧ್ಯಾಬ್ಯಾಸಕ್ಕೆಂದು ಪ್ರೋತ್ಸಾಹ ಧನ ನೀಡಿದರು. ಆದರೆ ಈಗ ರಾಜ್ಯದಲ್ಲಿ ಮಹಿಳೆಯರಿಗೆ ಭದ್ರತೆಯನ್ನು ಸರ್ಕಾರ ನೀಡುತ್ತಿಲ್ಲ. ಶಿರಸಿ ಮೂಲದ ಮಹಿಳೆಯ ಮೇಲೆ ಹಾನಗಲ್ ನಲ್ಲಿ ಗ್ಯಾಂಗ್ ರೇಪ್ ಆಯ್ತು, ಬೆಳಗಾವಿಯಲ್ಲಿ ಎಸ್ಪಿ ಮಹಿಳೆಯ ಮೇಲೆ ಹಲ್ಲೆ ಮಾಡಿ ವಿವಸ್ತ್ರ ಗೊಳಿಸಿದರು. ರಾಜ್ಯಸಭೆ ಸದಸ್ಯರಾಗಿ ನಾಸೀರ್ ಹುಸೇನ್ ಗೆದ್ದಾಗ ಪಾಕ್ ಜಿಂದಾಬಾದ್ ಘೋಷಣೆ ಕೂಗಿದರು. ತೆರಿಗೆ ಹಣ ರಾಜ್ಯಕ್ಕೆ ಬರ್ತಿಲ್ಲ ಅಂತ ‘ಕೈ’ ನಾಯಕರು ಹೇಳುತ್ತಾರೆ, ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಕೇಂದ್ರದಿಂದ ಎಷ್ಟು ತೆರಿಗೆ ಹಣ ಬಂತು..? ಪ್ರಧಾನಿ ಮೋದಿ ಅವಧಿಯಲ್ಲಿ ಎಷ್ಟು ಹಣ ಬಂತು ಎಂಬುದು ತಿಳಿಸಲಿ. ಮಮೋಹನ ಸಿಂಗ್ ಅವರ ಕಾಲದಲ್ಲಿ 81 ಸಾವಿರ ಕೋಟಿ ನೀಡಿದರು ಆದರೆ ಪ್ರಧಾನಿ ಮೋದಿ ಕಾಲದಲ್ಲಿ 2 ಲಕ್ಷ 82 ಕೋಟಿ ಹಣ ರಾಜ್ಯಕ್ಕೆ ನೀಡಿದರು ಎಂದು ಎಸ್.ವಿ. ಸಂಕನೂರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next