Advertisement

207 ಗ್ರಾಪಂಗಳ ಚುನಾವಣೆಗೆ ಸಿದ್ಧತೆ

03:33 PM Mar 19, 2020 | Naveen |

ಹಾವೇರಿ: ಜಿಲ್ಲೆಯ 223ಗ್ರಾಮ ಪಂಚಾಯಿತಿಗಳಲ್ಲಿ ಅವಧಿ ಪೂರ್ಣಗೊಳಿಸಿದ 207 ಗ್ರಾಪಂಗಳಿಗೆ ಮೇ ತಿಂಗಳಲ್ಲಿ ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದರು.

Advertisement

ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ 207 ಗ್ರಾಮ ಪಂಚಾಯಿತಿಗಳ 1045 ಕ್ಷೇತ್ರಗಳ 2932 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

2020ರ ಜೂನ್‌ ತಿಂಗಳಲ್ಲಿ ಅವಧಿ ಪೂರ್ಣಗೊಳ್ಳಲಿರುವ ಜಿಲ್ಲೆಯ 16 ಗ್ರಾಮ ಪಂಚಾಯತಿಗಳಾದ ಆಲದಕಟ್ಟಿ, ತಡಸ, ಕಾಗಿನೆಲೆ, ಕೆರವಡಿ, ಅಂತರವಳ್ಳಿ, ಕುಪ್ಪೇಲೂರು, ಬಿಲ್ಲದಹಳ್ಳಿ, ಮಾಳನಾಯಕನಹಳ್ಳಿ, ಸುಣಕಲ್ಲಬಿದರಿ, ತುಮ್ಮಿನಕಟ್ಟೆ, ಜೋಯಿಸರಹರಳಹಳ್ಳಿ, ಕುಡುಪಲಿ, ಹುಲ್ಲತ್ತಿ, ಹಾವಣಗಿ, ಕೂಡಲ, ಹನುಮರಹಳ್ಳಿ ಪಂಚಾಯಿತಿಗಳ ಅವಧಿ  ವಿಳಂಬವಾಗಿ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಈ ಗ್ರಾಮ ಪಂಚಾಯತಿಗಳಿಗೆ ಸದ್ಯಕ್ಕೆ ಚುನಾವಣೆ ನಡೆಯುತ್ತಿಲ್ಲ ಎಂದು ತಿಳಿಸಿದರು.

ತಾಲೂಕುವಾರು ವಿವರ: ಹಾವೇರಿ ತಾಲೂಕಿನ 33 ಗ್ರಾಪಂಗಳಲ್ಲಿ 32 ಗ್ರಾಪಂಗಳ 166 ಕ್ಷೇತ್ರಗಳಿಗೆ (ಆಲದಕಟ್ಟಿ ಗ್ರಾಪಂ ಹೊರತುಪಡಿಸಿ), ಬ್ಯಾಡಗಿ ತಾಲೂಕಿನ 21 ಗ್ರಾಮ ಪಂಚಾಯತಿಗಳಲ್ಲಿ 18 ಗ್ರಾಮ ಪಂಚಾಯತಿಗಳ 83 ಕ್ಷೇತ್ರಗಳಿಗೆ(ತಡಸ, ಕಾಗಿನೆಲೆ, ಕೆರವಡಿ ಗ್ರಾಪಂ ಹೊರತುಪಡಿಸಿ), ರಾಣಿಬೆನ್ನೂರು ತಾಲೂಕಿನ 40 ಗ್ರಾಮ ಪಂಚಾಯತಿಗಳ ಪೈಕಿ 33 ಗ್ರಾಮ ಪಂಚಾಯಿತಿಗಳ 182 ಕ್ಷೇತ್ರಗಳಿಗೆ(ಅಂತರವಳ್ಳಿ, ಕುಪ್ಪೇಲೂರ, ಬಿಲ್ಲಹಳ್ಳಿ, ಮಾಳನಾಯಕನಹಳ್ಳಿ, ಸುಣಕಲ್ಲಬಿದರಿ, ತುಮ್ಮಿನಕಟ್ಟಿ, ಯೋಯಿಸರಹರಳಹಳ್ಳಿ ಗ್ರಾಪಂ ಹೊರತುಪಡಿಸಿ), ರಟ್ಟಿàಹಳ್ಳಿ ತಾಲೂಕಿನ 19
ಗ್ರಾಪಂಗಳ ಪೈಕಿ 18 ಗ್ರಾಮ ಪಂಚಾಯತಿಗಳ 86 ಕ್ಷೇತ್ರಗಳಿಗೆ(ಕುಡುಪಲಿ ಗ್ರಾಪಂ ಹೊರತುಪಡಿಸಿ), ಹಾನಗಲ್ಲ ತಾಲೂಕಿನ 42 ಗ್ರಾಮ ಪಂಚಾಯಿತಿಗಳ ಪೈಕಿ 39 ಗ್ರಾಪಂಗಳ 202 ಕ್ಷೇತ್ರಗಳಿಗೆ(ಹುಲ್ಲತ್ತಿ, ಹಾವಣಗಿ, ಕೂಡಲ ಗ್ರಾಪಂ ಹೊರತುಪಡಿಸಿ), ಶಿಗ್ಗಾವಿ ತಾಲೂಕಿನ 28 ಗ್ರಾಪಂಗಳ ಪೈಕಿ 27 ಗ್ರಾಮ ಪಂಚಾಯತಿಗಳ 120 ಕ್ಷೇತ್ರಗಳಿಗೆ(ಹನುಮರಹಳ್ಳಿ ಗ್ರಾಪಂ ಹೊರತುಪಡಿಸಿ) ಚುನಾವಣೆ ನಡೆಯಲಿದೆ.

ಚುನಾವಣೆ ನಡೆಯದ ತಾಲೂಕು: ಹಿರೇಕೆರೂರು ತಾಲೂಕಿನ 19 ಗ್ರಾಮ ಪಂಚಾಯತಿಗಳ 94 ಕ್ಷೇತ್ರಗಳಿಗೆ ಹಾಗೂ ಸವಣೂರು ತಾಲೂಕಿನ 21 ಗ್ರಾಮ ಪಂಚಾಯತಿಗಳ 112 ಕ್ಷೇತ್ರಗಳಿಗೆ ಚುನಾವಣೆ ಸದ್ಯ ನಡೆಯುವುದಿಲ್ಲ ಎಂದು ತಿಳಿಸಿದರು.

Advertisement

ಚುನಾವಣೆ ಸಿದ್ಧತೆ: ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಚುನಾವಣಾಧಿಕಾರಿ ಹಾಗೂ ಒಬ್ಬ ಸಹಾಯಕ ಚುನಾವಣಾಧಿ ಕಾರಿಗಳನ್ನು ನೇಮಿಸಲಾಗುವುದು. ದಿನಾಂಕ 07-02-2020 ರಂದು ಪ್ರಕಟವಾದ ವಿಧಾನಸಭಾ ಅಂತಿಮ ಮತದಾರರಪಟ್ಟಿಗಳನ್ನು ಆಧರಿಸಿ ಕ್ಷೇತ್ರವಾರು ಮತದಾರರ ಪಟ್ಟಿಯನ್ನು ತಯಾರಿಸಲಾಗುವುದು. ಹೊಸದಾಗಿ ಮತದಾರರನ್ನು ಸೇರ್ಪಡೆ ಮಾಡುವ ಸಂದರ್ಭದಲ್ಲಿ ನಗರ ಪ್ರದೇಶದ ಮತದಾರರು ಗ್ರಾಮೀಣ ಪ್ರದೇಶಗಳಿಗೆ ವಲಸೆ ಹೋಗದಂತೆ ಹಾಗೂ ವಿನಾಕಾರಣ ವಾರ್ಡಿನಿಂದ ವಾರ್ಡಿಗೆ ಸ್ಥಳಾಂತರ ಹೊಂದದಂತೆ ಎಚ್ಚರಿಕೆ ಹಿಸುವಂತೆ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಪ್ರತಿಯೊಂದು ಕ್ಷೇತ್ರಕ್ಕೆ ಪ್ರತ್ಯೇಕವಾಗಿ ಮತಗಟ್ಟೆ ಸ್ಥಾಪಿಸಲಾಗುವುದು ಹಾಗೂ ಮತದಾರರ ಸಂಖ್ಯೆ 1400ಕ್ಕೂ ಅ ಕಧಿವಿದ್ದಲ್ಲಿ ಹೆಚ್ಚುವರಿ ಮತಗಟ್ಟೆ ಸ್ಥಾಪಿಸಲಾಗುವುದು. ಕಳೆದ ಚುನಾವಣೆಯಲ್ಲಿ 1111 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಳಕೆ ಇರುವುದಿಲ್ಲ ಎಂದು ತಿಳಿಸಿದರು.

2015ರಲ್ಲಿ ಸಾರ್ವತ್ರಿಕ ಚುನಾವಣೆಗಳ ನಂತರ ರಚಿಸಲಾದ ರಾಣಿಬೆನ್ನೂರು ತಾಲೂಕಿನ ವೈ.ಟಿ. ಹೊನ್ನತ್ತಿ ಹಾಗೂ ಹಿರೇಕೆರೂರು ತಾಲೂಕಿನ ಚಿಕ್ಕಯಡಚಿ ಗ್ರಾಮ ಪಂಚಾಯತಿಗಳು ಹಾಗೂ ಇದರಿಂದ ಬಾಧಿತವಾದ ಪಂಚಾಯತಿಗಳಿಗೆ ಮರು ಮೀಸಲಾತಿ ನಿಗದಿಪಡಿಸಲಾಗುವುದು. ಉಳಿದ ಪಂಚಾಯತಿಗಳಿಗೆ ಕಳೆದ ಬಾರಿಯ ಮೀಸಲಾತಿಯೇ ಇನ್ನೊಂದು ಅವಧಿಗೆ ಮುಂದುವರಿಯಲಿದ್ದು ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದರು.

ಘೋಷಣೆ ಬಾಕಿ: ಆಯೋಗ ಗ್ರಾಪಂ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ದಿನದಿಂದಲೇ ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಅದೇ ದಿನದಿಂದ ಮದ್ಯ ಮಾರಾಟ ನಿಷೇಧವೂ ಜಾರಿಗೆ ಬರಲಿದೆ. ಚುನಾವಣೆ ಮುಗಿದ ನಂತರ ಅವಧಿ  ಮುಗಿಯದ ಗ್ರಾಮ ಪಂಚಾಯಿತಿಗಳನ್ನೂ ಒಳಗೊಂಡಂತೆ ಎಲ್ಲ ಪಂಚಾಯತಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಯನ್ನು ಸರ್ಕಾರದ ಅಧಿಸೂಚನೆಯನ್ವಯ ಪಾಲನೆ ಮಾಡಲಾಗುವುದು ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಚುನಾವಣಾ ತಹಸೀಲ್ದಾರ್‌ ಪ್ರಶಾಂತ ನಾಲವಾರ ಮಾಧ್ಯಮ ಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next