Advertisement
ಇದಕ್ಕೆ ಕುಂಬಾರರ ಈ ಗೋಳಿಗೆ ಕಾರಣ ಚೀನಿ ಮಣ್ಣಿನ(ಯಂತ್ರದಿಂದ ತಯಾರಿಸಿದ) ಹಣತೆಗಳು. ಹೊಳಪಿನ ಮೈಮಾಟವುಳ್ಳ, ವೈವಿಧ್ಯಮಯ ಕಲಾ ಚಿತ್ತಾರ ಹೊಂದಿರುವ ಈ ಹಣತೆಗಳಿಗೆ ಬಹುತೇಕ ಜನರು ಮಾರುಹೋಗಿರುವುದಿದೇ ಕಾರಣ. ಕೇವಲ ಒಂದು ದಶಕದ ಲಕ್ಷ ಲಕ್ಷ ಹಣತೆಗಳನ್ನು ತಮ್ಮ ಮನೆ ಮುಂದೆ ಮಾರಾಟ ಮಾಡುತ್ತಿದ್ದ ಕುಂಬಾರ ಕುಟುಂಬಗಳು ಐದಾರು ವರ್ಷಗಳಿಂದ ಸಾವಿರ ಲೆಕ್ಕದಲ್ಲಿ ಹಣತಿಗಳನ್ನು ಮಾರಾಟ ಮಾಡಿ ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಹಣತೆ ತಯಾರಿಸಿಯಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರು ಈಗ ಬೇರೆ ವೃತ್ತಿಯತ್ತ ಮುಖ ಮಾಡಿದ್ದಾರೆ. ಒಟ್ಟಾರೆ ಕುಂಬಾರರ ಹಣತೆ ಈಗ ಎಲ್ಲರಿಂದ ಕಡೆಗಣನೆಗೊಳಾಗುತ್ತಿರುವುದು ಖೇದಕರ ಸಂಗತಿ.
ಹಲವಾರು ವರ್ಷಗಳಿಂದ ಕಂಬಾರಿಕೆ ವೃತ್ತಿ ಮಾಡುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಪಿಂಗಾಣಿ ಹಾವಳಿಯಿಂದಾಗಿ ಮಣ್ಣಿನ ಹಣತೆ ಬೆಲೆ ಇಲ್ಲದಾಗಿದೆ. ಸರ್ಕಾರ ತಮಗೆ ಪ್ರೋತ್ಸಾಹ ನೀಡುವ ಯಾವುದೇ ಯೋಜನೆಯನ್ನೂ ರೂಪಿಸಿಲ್ಲ. ಇದರಿಂದಾಗಿ ಕುಂಬಾರರ ಜೀವನ ಬೂದಿ ತಿಂದು ಬೂದಿ ಕಕ್ಕುವಂತಾಗಿದೆ ಎನ್ನುತ್ತಾರೆ ಪ್ರೇಮವ್ವ ಕುಂಬಾರ. ಎಚ್.ಕೆ. ನಟರಾಜ