Advertisement

ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಹಾವೇರಿ ಪೊಲೀಸರು ಮಂಗಳೂರಿಗೆ

08:27 PM Dec 29, 2022 | Team Udayavani |

ಮಂಗಳೂರು: ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಕಮಲಾಪುರದ ತನ್ನ ಗ್ರಾಮದಲ್ಲಿ ಸೆ. 30ರಂದು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ಗೆದಿಗೆಪ್ಪ (ತಂದೆ ಹನುಮಂತಪ್ಪ ಸಣ್ಣತಾಯಿ ಯಾನೇ ಹಂಡಿ) ಎಂಬುವನ ಪತ್ತೆಗಾಗಿ ರಟ್ಟಿಹಳ್ಳಿ ಠಾಣಾ ಪೊಲೀಸರು ಗುರುವಾರ ಮಂಗಳೂರಿಗೆ ಆಗಮಿಸಿದ್ದಾರೆ.

Advertisement

ಗೆದಿಗೆಪ್ಪ ಈ ಮೊದಲು ಕೆಲವು ವರ್ಷಗಳ ಕಾಲ ಸುರತ್ಕಲ್‌, ಪಣಂಬೂರು ವ್ಯಾಪ್ತಿಯಲ್ಲಿ ಕೂಲಿಕೆಲಸ ಮಾಡಿಕೊಂಡಿದ್ದ. ಬಳಿಕ ಊರಿಗೆ ತೆರಳಿದ್ದ. ಆ ಹಿನ್ನೆಲೆಯಲ್ಲಿ ಮತ್ತೆ ಇಲ್ಲಿಗೆ ಬಂದು ತಲೆಮರೆಸಿಕೊಂಡಿರುವ ಸಾಧ್ಯತೆಯಿರುವುದರಿಂದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಆತ ತಪ್ಪಿಸಿಕೊಂಡಿರುವ ಕುರಿತಂತೆ ಪೊಲೀಸ್‌ ಪ್ರಕಟನೆ ನೋಡಿದ ಕೆಲವರು ಆತನನ್ನು ಸುತರRಲ್‌ ಭಾಗದಲ್ಲಿ ನೋಡಿರುವುದಾಗಿ ತಿಳಿಸಿದ್ದರಿಂದ ಪೊಲೀಸರು ಈ ಬಗ್ಗೆ ಪರಿಶೀಲಿಸಲು ಆಗಮಿಸಿದ್ದಾರೆ. ಈ ಮೊದಲು ಆತನೊಂದಿಗೆ ಇದ್ದ ಕೆಲವರನ್ನು ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next