Advertisement

Haveri: ಬಾಂಬ್ ದಾಳಿಯಲ್ಲಿ ಗಾಯಗೊಂಡಿದ್ದ ಯೋಧ ಹುತಾತ್ಮ

08:46 PM Apr 25, 2023 | Team Udayavani |

ಹಾವೇರಿ(ಹಾನಗಲ್ಲ): ಛತ್ತೀಸಗಡದಲ್ಲಿ ನಡೆದ ಬಾಂಬ್ ದಾಳಿ ವೇಳೆ ಗಾಯಗೊಂಡಿದ್ದ ತಾಲೂಕಿನ ಬ್ಯಾತನಾಳ ಗ್ರಾಮದ ವೀರ ಯೋಧ ರವಿಕುಮಾರ ಕೆಳಗಿನಮನಿ (35) ಚಿಕಿತ್ಸೆ ಫಲಿಸದೇ ವೀರ ಮರಣ ಹೊಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

Advertisement

ಏ.26 ರಂದು ಸ್ವಗ್ರಾಮ ಮೃತ ಯೋಧನ ಪಾರ್ಥಿವ ಶರೀರ ಆಗಮಿಸಲಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಗ್ರಾಮದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮೃತ ರವಿಕುಮಾರ ಕೆಳಗಿನಮನಿ ಸಿಆರ್‌ಪಿಎಫ್ ಯೋಧನಾಗಿದ್ದು, ಛತ್ತೀಸಗಡದ ನೆಲ್ಸನರ್ ಸಮೀಪದ ಪಾಂಡೆ ಮುರ್ಗಾ ಪ್ರದೇಶದಲ್ಲಿ ಕಳೆದ ಮಾರ್ಚ್ 30 ರಂದು ನಡೆದ ಬಾಂಬ್ ದಾಳಿಯಲ್ಲಿ ನಡೆದು ರವಿಕುಮಾರ್‌ಗೆ ಗಂಭೀರ ಗಾಯವಾಗಿತ್ತು. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಅವರು ಮಂಗಳವಾರ ಮೃತಪಟ್ಟಿದ್ದಾರೆ. ದೆಹಲಿಯಿಂದ ಬೆಂಗಳೂರು ಮಾರ್ಗವಾಗಿ ಅವರ ಪಾರ್ಥಿವ ಶರೀರವನ್ನು ತರಲಾಗುತ್ತಿದೆ. ಬೆಂಗಳೂರಿನ ಸಿಆರ್‌ಪಿಎಫ್ ಬೆಟಾಲಿಯನ್‌ನಲ್ಲಿ ಗೌರವ ಸಲ್ಲಿಸಿ ಸ್ವಗ್ರಾಮಕ್ಕೆ ತರಲಾಗುತ್ತಿದೆ. ಬುಧವಾರ ಬೆಳಗ್ಗೆ ಬ್ಯಾತನಾಳ ಗ್ರಾಮದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕಣ್ಣೀರಿನಲ್ಲಿ ಕುಟುಂಬಸ್ಥರು..
ರವಿಕುಮಾರ ಅವರು ಕಳೆದ ಫೆ. 21ರಿಂದ 27 ದಿನಗಳ ಕಾಲ ರಜೆ ಹಾಕಿ ಊರಿಗೆ ಬಂದಿದ್ದರು. ಅವರ ಪತ್ನಿ ಅಶ್ವಿನಿ 2 ತಿಂಗಳ ಗರ್ಭಿಣಿಯಾಗಿದ್ದು, ವಯೋವೃದ್ಧ ಪೋಷಕರು ಇದ್ದಾರೆ. ಪತ್ನಿ ಮತ್ತು ಪೋಷಕರಿಗೆ ಆಘಾತವಾಗಬಾರದು ಎಂಬ ಕಾರಣಕ್ಕೆ ರವಿ ಸಾವಿನ ಸುದ್ದಿಯನ್ನು ಆರಂಭದಲ್ಲಿ ತಿಳಿಸಿರಲಿಲ್ಲ. ಬಳಿಕ ಅಕ್ಕಪಕ್ಕದವರು, ಕುಟುಂಬದವರು ಮನೆಗೆ ಆಗಮಿಸಿ ವಿಷಯ ತಿಳಿಸಿದಾಗ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಗ್ರಾಮದಲ್ಲಿ ಮೌನ ಆವರಿಸಿತ್ತು. ಕಳೆದ ತಿಂಗಳಷ್ಟೇ ಊರಿಗೆ ಬಂದು ಹೋಗಿದ್ದವ ಶವವಾಗಿ ಮರಳಿ ಬರುತ್ತಾನೆಂದು ಯಾರೂ ಎಣಿಸಿರಲಿಲ್ಲ ಎಂದು ಕಣ್ಣೀರಿಡುತ್ತಿದ್ದ ದೃಶ್ಯ ಕಂಡುಬಂತು.

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಗ್ರಾಮದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬುಧವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತಿದೆ.

Advertisement

ಬಾಂಬ್ ದಾಳಿಯಿಂದ ಗಾಯಗೊಂಡಿದ್ದ ಹಾನಗಲ್ಲ ತಾಲೂಕಿನ ಬ್ಯಾತನಾಳ ಗ್ರಾಮದ ಸಿಆರ್‌ಪಿಎಫ್ ಯೋಧ ರವಿಕುಮಾರ್ ಕೆಳಗಿನಮನಿ ಅವರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದು, ದೆಹಲಿಯಿಂದ ಪಾರ್ಥಿವ ಶರೀರ ತರಲಾಗುತ್ತಿದೆ. ಬುಧವಾರ ಬೆಳಗ್ಗೆ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
-ಡಾ.ಶಿವಕುಮಾರ ಗುಣಾರೆ, ಎಸ್‌ಪಿ ಹಾವೇರಿ

ಇದನ್ನೂ ಓದಿ: ಎರಗಿದ ಸಿಡಿಲು-ಕೂದಳೆಯ ಅಂತರದಲ್ಲಿ‌ ಪಾರಾದ ರೈತ

Advertisement

Udayavani is now on Telegram. Click here to join our channel and stay updated with the latest news.

Next