Advertisement

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊನೆಗೂ ಚಾಲನೆ : ಸಿದ್ಧತಾ ಸಭೆ ನಡೆಸಿದ ಸರ್ಕಾರ

11:35 AM Oct 29, 2022 | Team Udayavani |

ಬೆಂಗಳೂರು: ಹಾವೇರಿ ಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ ನಡೆಯಲಿರುವ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಈಗ ಅಧಿಕೃತ ಚಾಲನೆ ಲಭಿಸಿದ್ದು ಹಾವೇರಿ ಜಿಲ್ಲೆ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್, ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ.ಸುನಿಲ್ ಕುಮಾರ್ ಶನಿವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

Advertisement

ಸಮ್ಮೇಳನ ನಡೆಯುವ ಸ್ಥಳ ಪರಿಶೀಲನರ ಹಾಗೂ ಪೂರ್ವಭಾವಿ ಸಭೆ ನಡೆಸಿದ ಉಭಯ ಸಚಿವರು, ಹಿಂದಿನ ಎಲ್ಲ ಸಮ್ಮೇಳನಕ್ಕಿಂತಲೂ ಯಶಸ್ವಿಯಾಗಿ ಈ ಸಮ್ಮೇಳನ ನಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೊರೊನಾ ಬಳಿಕ ನಡೆಯುವ ಸರ್ಕಾರದ ಮಹತ್ವದ ಸಮ್ಮೇಳನ ಇದಾಗಿದೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ಕಾರ್ಯಕ್ರಮ ರೂಪಿಸಬೇಕು. ಮುಖ್ಯಮಂತ್ರಿಗಳ ತವರು ಜಿಲ್ಲೆಯೂ ಇದಾಗಿರುವುದರಿಂದ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ಸಚಿವ ಸುನಿಲ್ ಕುಮಾರ್ ಸೂಚನೆ ನೀಡಿದರು.

ಜನವರಿ 6, 7, 8 ರಂದು ಸಮ್ಮೇಳನ ನಡೆಯಲಿದ್ದು, ಇದಕ್ಕಾಗಿ 17 ಸಮಿತಿಗಳನ್ನು ರಚನೆ ಮಾಡಲಾಗಿದೆ. ಆಹಾರ, ವಸತಿ, ಮೆರವಣಿಗೆ ಕಾರ್ಯಕ್ರಮಗಳು ಸುಸಜ್ಜಿತವಾಗಿ, ವ್ಯವಸ್ಥಿತವಾಗಿ ನಡೆದರೆ ಸಮ್ಮೇಳನ ಅರ್ಧ ಯಶಸ್ವಿಯಾಗುತ್ತದೆ.  ಇನ್ನಷ್ಟು ಸಮಿತಿ ರಚನದ ಮಾಡಬೇಕು ಎಂದು ಸೂಚನೆ ನೀಡಿದರು.

25 ಸಾವಿರ ಜನಕ್ಕೆ ವಸತಿ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು‌ ಜಿಲ್ಲಾಡಳಿತ ಅಂದಾಜಿಸಿದ್ದು, ಎ, ಬಿ, ಸಿ ಎಂದು ವರ್ಗೀಕರಣ ಮಾಡಲಾಗಿದೆ. ಒಟ್ಟು 3160 ಕೊಠಡಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಸರಕಾರದಿಂದ ಈ ಸಮ್ಮೇಳನಕ್ಕೆ 20 ಕೋಟಿ ರೂ. ಮಂಜೂರು ಮಾಡಲಾಗಿದೆ.

Advertisement

3 ಲಕ್ಷ ಜನ ನಿರೀಕ್ಷೆ : ಈ ಸಮ್ಮೇಳನಕ್ಕೆ 3 ಲಕ್ಷ ಜನರು ಸೇರುವ ನಿರೀಕ್ಷೆ ಇದ್ದು, ಯಾವುದೇ ಅನನಕೂಲವಾಗದಂತೆ ಸರ್ಕಾರ ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next