ಹಾವೇರಿ: ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆಯಲ್ಲಿ ಮೂವರು ಸುಟ್ಟು ಕರಕಲಾದ ಸ್ಥಿತಿ ಪತ್ತೆಯಾಗಿದ್ದಾರೆ.
ಘಟನೆ ಹಿನ್ನೆಲೆ: ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಭೂಮಿಕ ಟ್ರೇಡರ್ಸ್ ಎಂಬ ಪಟಾಕಿ ಗೋದಾಮು ಅಗ್ನಿ ಅವಘಡದಿಂದ ಸುಟ್ಟು ಕರಕಲಾಗಿದೆ. ಅಂಗಡಿಯಲ್ಲಿದ್ದ ಬೈಕ್ ಹಾಗು ಟಾಟಾ ಏಸ್ ವಾಹನ ಸುಟ್ಟು ಭಸ್ಮವಾಗಿತ್ತು.
ಮೊದಲು ಗೋದಾಮಿನಲ್ಲಿ ಯಾರು ಇರಲಿಲ್ಲ ಎನ್ನಲಾಗಿತ್ತು, ಆ ಬಳಿಕ ಗೋದಾಮಿನಲ್ಲಿ 4 ಮಂದಿ ಇದ್ದರು ಎನ್ನಲಾಗಿದೆ. ಬೆಂಕಿ ನಂದಿಸಿದ ಬಳಿಕ ನಾಲ್ವರಲ್ಲಿ ಮೂವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ದ್ಯಾಮಪ್ಪ ಓಲೇಕಾರ,ರಮೇಶ್ ಬಾರ್ಕಿ & ಶಿವಲಿಂಗ ಅಕ್ಕಿ ಎಂಬುವವರ ಮೃತದೇಹ ಪತ್ತೆಯಾಗಿದೆ. ಮೃತರು ತಾಲೂಕಿನ ಕಾಟೇನಹಳ್ಳಿ ಗ್ರಾಮದ ನಿವಾಸಿಗಳು ಎನ್ನಲಾಗಿದೆ. ಇವರು ಪಟಾಕಿ ಗೋದಾಮಿನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಗಣೇಶ ಹಬ್ಬದ ನಿಮಿತ್ತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಟಾಕಿ ಸಾಮಾಗ್ರಿಗಳು ಬಂದಿತ್ತು. ಮಾಲೀಕರು ಈ ಸಂಬಂಧ ಕೆಲಸಕ್ಕೆಂದು ಆಳುಗಳನ್ನು ಕರೆತಂದಿದ್ದರು.