ಹಾವೇರಿ: ಬರ ಪರಿಹಾರ ವಾಗಿ ಸರಕಾರ ಎರಡು ಸಾವಿರ ರೂಪಾಯಿಗಳನ್ನಷ್ಟೇ ನೀಡಿದ್ದಕ್ಕೆ ಆಕ್ರೋಶಗೊಂಡ ಹಾವೇರಿ ಜಿಲ್ಲೆಯ 72 ರೈತರು, ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರು ಹೆಸರಿಗೆ ತಲಾ ರೂ. 2,100 ಮೊತ್ತದ ಚೆಕ್‌ಗಳನ್ನು ಕಳುಹಿಸಿದ್ದಾರೆ.
ನಗರದ ಜಿಲ್ಲಾಡಳಿತ ಭವನದ ಎದುರು ಇತ್ತೀಚೆಗೆ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದ ಈ ರೈತರು, ಜ.25ರಂದು ಈ ಚೆಕ್ ಬರೆದು ಬರ ಪರಿಹಾರ ಹಣ ಹಿಂದಿರುಗಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆ ಕೈಕೊಟ್ಟಿದ್ದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಎರಡೂ¾ರು ಬಾರಿ ಬಿತ್ತನೆ ಮಾಡಿ ಎಕ್ರೆಗೆ 20-25 ಸಾವಿರ ರೂ. ಖರ್ಚು ಮಾಡಿದ್ದೇವೆ. ರಾಜ್ಯ ಸರಕಾರ ನೀಡು ತ್ತಿರುವ 2 ಸಾವಿರ ರೂ. ಬರ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಬೆಳೆ ಕಳೆದುಕೊಂಡಿರುವ ರೈತರು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ಬೆಳೆ ಹಾನಿಗೆ ಎಕ್ರೆಗೆ 25 ಸಾವಿರ ರೂ. ಬರ ಪರಿಹಾರ ನೀಡಿ ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ರೈತ ಸಂಘದ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದ್ದಾರೆ.
ರಾಜ್ಯ ಸರಕಾರ ಬರ ಪರಿಹಾರವಾಗಿ ರೈತರಿಗೆ ಎರಡು ಸಾವಿರ ರೂ. ನೀಡುತ್ತಿದ್ದು, ಇದು ರೈತರ ಮೂಗಿಗೆ ತುಪ್ಪ ಒರೆಸುವ ತಂತ್ರ. ಈ ಹಣ ಬೀಜ-ಗೊಬ್ಬರ ಖರೀದಿಗೂ ಸಾಲುತ್ತಿಲ್ಲ.
– ಮಲ್ಲಿಕಾರ್ಜುನ ಬಳ್ಳಾರಿ, ರೈತ ಮುಖಂಡ ಹಾವೇರಿ