Advertisement

ಹಾವೇರಿ ಜಿಲ್ಲೆ 50 ಜನರಲ್ಲಿ ಕೋವಿಡ್ ಪಾಸಿಟಿವ್! ಸೋಂಕಿಗೆ ನಾಲ್ಕು ಮಂದಿ ಸಾವು

09:23 PM Jul 22, 2020 | sudhir |

ಹಾವೇರಿ: ಜಿಲ್ಲೆಯಲ್ಲಿ ಕೋವಿಡ್ ಆರ್ಭಟ ಹೆಚ್ಚಾಗುತ್ತಿದ್ದು ಬುಧವಾರ 50 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಸೋಂಕಿನಿಂದ ಬಳಲುತ್ತಿದ್ದವರಲ್ಲಿ ನಾಲ್ಕು ಜನರು ಬುಧವಾರ ಮೃತಪಟ್ಟಿದ್ದಾರೆ.

Advertisement

ಬುಧವಾರ ಹಾವೇರಿ ತಾಲೂಕಿನಲ್ಲಿ 17, ಹಾನಗಲ್ ತಾಲೂಕಿನಲ್ಲಿ 10, ರಾಣಿಬೆನ್ನೂರು ತಾಲೂಕಿನಲ್ಲಿ 9, ಶಿಗ್ಗಾವಿ ತಾಲೂಕಿನಲ್ಲಿ ಏಳು, ಹಿರೇಕೆರೂರು ತಾಲೂಕಿನಲ್ಲಿ ನಾಲ್ಕು, ಸವಣೂರು ತಾಲೂಕಿನಲ್ಲಿ ಎರಡು ಹಾಗೂ ಬ್ಯಾಡಗಿ ತಾಲೂಕಿನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.

ಹಾವೇರಿ ತಾಲೂಕಿನ ಆಲದಕಟ್ಟಿಯ 75ವರ್ಷದ ವ್ಯಕ್ತಿ ಪಿ-63491, ಹಾವೇರಿ ನಗರದ 20ವರ್ಷದ ಮಹಿಳೆ ಪಿ-76262, ರಾಣಿಬೆನ್ನೂರಿನ 48ವರ್ಷದ ಮಹಿಳೆ ಪಿ-73170, ಸವಣೂರು ತಾಲೂಕು ಹಿರೆಮಗದೂರಿನ 74ವರ್ಷದ ಪಿ-75229 ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ದೃಢಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next