Advertisement

ಬುದ್ಧ ಪೌರ್ಣಿಮೆ ಸರಳ ಆಚರಣೆ

05:22 PM May 08, 2020 | Naveen |

ಹಾವೇರಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬುದ್ಧ ಪೌರ್ಣಿಮೆಯನ್ನು ಗುರುವಾರ ಹೊಸಮಠದಲ್ಲಿ ಸರಳವಾಗಿ ಆಚರಿಸಲಾಯಿತು.

Advertisement

ಬುದ್ಧ-ಬಸವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಬಸವಶಾಂತಲಿಂಗ ಸ್ವಾಮೀಜಿ, ಬುದ್ಧನು ದೇವರಲ್ಲ; ದೇವದೂತನೂ ಅಲ್ಲ. ದೈವಾಂಶಸಂಭೂತನೂ ಅಲ್ಲ. ಆದರೆ, ತನ್ನ ಸ್ವಸಾಮರ್ಥಯದಿಂದ ಅತ್ಯುನ್ನತ ಜ್ಞಾನ ಪಡೆದು ಜಗತ್ತಿನ ಪರಮ ಸತ್ಯ ಬೋಧಿಸಿದ ಮಹಾಗುರು. ಮಧ್ಯಮ ಮಾರ್ಗದ ಮೂಲಕ ಮೈತ್ರಿ, ಕರುಣೆ, ಸಮತೆ, ಪ್ರೀತಿ, ಅನುಕಂಪ ಮತ್ತು ಜ್ಞಾನದೊಂದಿಗೆ ಅಷ್ಟಾಂಗ ಮಾರ್ಗಗಳನ್ನು ಸಮಾಜಕ್ಕೆ ತೋರಿಸಿಕೊಟ್ಟರು. ಧರ್ಮವೆಂದರೆ ಇತರ ಧರ್ಮಗಳಲ್ಲಿ ಇರುವಂತೆ ಅದು ತತ್ವಶಾಸ್ತ್ರವಲ್ಲ ಸರ್ವರಿಗೂ ರೀತಿಯಲ್ಲಿ ಸತ್ಯದ ಬೆಳಕು ಚೆಲ್ಲುತ್ತದೆ. ಇದರಿಂದ ಜೀವನವನ್ನು ಪಡೆಯಬಹುದು ಎಂದರು. ಜಯದೇವ ಕೆ. ವಕೀಲರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next