Advertisement

ವಿಜಯಪುರ ನೋಡಿದ್ದೀರಾ? ಒಮ್ಮೆಯಾದರೂ ನೋಡಿಬನ್ನಿ

12:32 AM Jan 30, 2020 | Sriram |

ಇಂಥದೊಂದು ಪ್ರಶ್ನೆಯನ್ನು ನಿಮ್ಮ ಗೆಳೆಯರು/ಗೆಳತಿಯರು ಆಗಾಗ್ಗೆ ಕೇಳಿರಬಹುದು. ಯಾಕೆಂದರೆ ವಿಜಯಪುರವೆಂದರೆ ಒಂದು ಅರ್ಥದಲ್ಲಿ ಪ್ರತಿಧ್ವನಿಯ ಊರು. ಅಲ್ಲಿಗೆ ಹೋಗಿರಲೇಬೇಕು.

Advertisement

ಕೋಟೆಗಳ ನಗರಿಯೂ ಆಗಿರುವ ವಿಜಯಪುರ ಅಂದ ತತ್‌ಕ್ಷಣ ನೆನಪಿಗೆ ಬರುವುದು ಗೋಲ್‌ ಗುಂಬಜ್‌, ಇಬ್ರಾಹಿಂ ರೋಜಾ ಮುಂತಾದವು. ಅದರಲ್ಲೂ ಗುಮ್ಮಟ ನಗರಿ ಎಂದೇ ಖ್ಯಾತಿ ಹೊಂದಿರುವ ಈ ಊರಿನ ಇತಿಹಾಸದ ಪುಟಗಳನ್ನು ತೆರೆದರೆ ಅಲ್ಲಿ 200 ವರ್ಷಗಳ ಕಾಲ ಆಳಿದ ಆದಿಲ್‌ ಶಾಹಿ ವಂಶದ ಸಂದರ್ಭದ ಆಡಳಿತ ನೆನಪಿಗೆ ಬರುತ್ತದೆ. ಶತ್ರುಗಳ ಉಪಟಳವನ್ನು ನಿಯಂತ್ರಿಸುವುದಕ್ಕಾಗಿ ಕಟ್ಟಿದ ಬಲಿಷ್ಠ ಕೋಟೆಯೇ ಹೆಸರುವಾಸಿ. ಅವು ಇಂದಿಗೂ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ವಿಜಯಪುರ ನಗರದ ವಿವಿಧ ಭಾಗಗಳಲ್ಲಿ ಸಂರಕ್ಷಿಸಿದ ತೋಪುಗಳು ಇತಿಹಾಸದ ಕಥೆ ಹೇಳುತ್ತವೆ.ಯುದ್ಧಭೂಮಿಯಲ್ಲಿ ಭೋರ್ಗರೆದು, ಬೆಂಕಿ ಉಗುಳಿದ್ದ ತೋಪುಗಳನ್ನು ಇಂದು ಕಾಣ ಬಹುದು. ಇವುಗಳ ಹಿಂದಿನ ಕಥೆ ತಿಳಿಯಲು ಒಮ್ಮೆ ವಿಜಯಪುರಕ್ಕೆ ಭೇಟಿ ನೀಡಬೇಕು.

 -ರಾಧಿಕಾ

Advertisement

Udayavani is now on Telegram. Click here to join our channel and stay updated with the latest news.

Next