ನವದೆಹಲಿ: ಯಾವತ್ತಾದರು ಕ್ರಿಮಿನಲ್ ಗಳು ತಮ್ಮನ್ನು ತಾವು ಕ್ರಿಮಿನಲ್ ಎಂದು ಹೇಳಿಕೊಂಡಿದ್ದನ್ನು ನೋಡಿದ್ದೀರಾ? ಇದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬುಧವಾರ (ಜೂನ್ 01) ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿರುವುದಕ್ಕೆ ನೀಡಿದ ಪ್ರತಿಕ್ರಿಯೆಯಾಗಿದೆ.
ಇದನ್ನೂ ಓದಿ:ಬಂಟ್ವಾಳ : ಭೀಕರ ರಸ್ತೆ ಅಪಘಾತ ; ಮಡಂತ್ಯಾರಿನ ಕಾಟರಿಂಗ್ ಉದ್ಯಮಿಯ ಸ್ಥಿತಿ ಗಂಭೀರ
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದ ನಂತರ, ಇಂತಹ ತಂತ್ರಗಾರಿಕೆಗೆ ಬಗ್ಗುವುದಿಲ್ಲ ಎಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ನೀಡಿರುವ ಪ್ರತಿಕ್ರಿಯೆಗೆ ಬಿಜೆಪಿಯ ಜೆಪಿ ನಡ್ಡಾ ಈ ರೀತಿ ತಿರುಗೇಟು ನೀಡಿದ್ದಾರೆ.
“ಯಾವತ್ತಾದರೂ ಕ್ರಿಮಿನಲ್ ಗಳು ನಾನು ಕ್ರಿಮಿನಲ್ ಎಂದು ಹೇಳಿಕೊಂಡಿರುವುದನ್ನು ನೋಡಿದ್ದೀರಾ? ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸಾಕ್ಷ್ಯಿ ದೊರಕಿದೆ. ಆರೋಪ ಪಟ್ಟಿ ಕೂಡಾ ಸಲ್ಲಿಸಲಾಗಿತ್ತು. ಆದರೆ ನೀವು ಕೋರ್ಟ್ ಮೊರೆ ಹೋಗಿ ಪ್ರಕರಣ ವಜಾಗೊಳಿಸುವಂತೆ ಮನವಿ ಮಾಡಿಕೊಂಡಿದ್ದೀರಿ, ಆದರೆ ನೀವು ಬೇಲ್ ಮೇಲೆ ಹೊರಗಿದ್ದೀರಿ (ಸೋನಿಯಾ, ರಾಹುಲ್). ಅಂದರೆ ಇದರರ್ಥ ನೀವು ದೋಷಿ ಎಂಬುದಾಗಿದೆ ಎಂದು ಜೆಪಿ ನಡ್ಡಾ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಮತ್ತು ಕಾಂಗ್ರೆಸ್ ಪಕ್ಷದ ಖಜಾಂಚಿ ಪವನ್ ಬನ್ಸಾಲ್ ಅವರನ್ನು ಕಳೆದ ವರ್ಷ ಏಪ್ರಿಲ್ ನಲ್ಲಿ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿತ್ತು.
ಈ ಇಬ್ಬರು ಮುಖಂಡರ ಹೇಳಿಕೆಯನ್ನು ಜಾರಿ ನಿರ್ದೇಶನಾಲಯ ಪಿಎಂಎಲ್ ಎ ಕಾಯ್ದೆಯಡಿ ದಾಖಲು ಮಾಡಿಕೊಂಡಿತ್ತು. ನ್ಯಾಷನಲ್ ಹೆರಾಲ್ಡ್ ಅನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಪ್ರಕಟಿಸಿತ್ತು. ಎಜೆಎಲ್ ಯಂಗ್ ಇಂಡಿಯನ್ ಪ್ರೈ ಲಿಮಿಟೆಡ್ (ವೈಐಎಲ್) ಒಡೆತನದಲ್ಲಿತ್ತು. ಮಲ್ಲಿಕಾರ್ಜುನ್ ಖರ್ಗೆ ಯಂಗ್ ಇಂಡಿಯನ್ ಲಿಮಿಟೆಡ್ ಗೆ ಸಿಇಒ ಆಗಿದ್ದು, ಬನ್ಸಾಲ್ ಅಸೋಸಿಯೇಟ್ ಜರ್ನಲ್ಸ್ ನ ಆಡಳಿತ ನಿರ್ದೇಶಕರಾಗಿದ್ದರು.