ಮುಂಬಯಿ:ರಾಜ್ಯದಲ್ಲಿ ಅಧಿಕಾರ ರಚನೆಯ ಬಗ್ಗೆ ರಾಜಕೀಯ ಬೆಳವಣಿಗೆ ತಿರುವುಗೊಳ್ಳುತ್ತಿದೆ. ಹಾಗೆಯೇ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಶಿವಸೇನೆಗೆ ಸೇರಿದ್ದು, ಅವರ ಪ್ರಮಾಣವಚನವು ಶಿವತೀರ್ಥದಲ್ಲಿ ನಡೆಯಲಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವುತ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಶಿವಸೇನೆಗೆ 170 ಶಾಸಕರ ಬೆಂಬಲವಿದೆ ಮತ್ತು ಈ ಸಂಖ್ಯೆ 175ರವರೆಗೆ ತಲುಪಬಹುದು ಎಂದು ರಾವುತ್ ಹೇಳಿ¨ªಾರೆ.
ಇದರಲ್ಲಿ ಎನ್‌ಸಿಪಿಯ 54 ಸೀಟುಗಳು, ಕಾಂಗ್ರೆಸ್‌ನ 44 ಸೀಟುಗಳು ಮತ್ತು ಪಕ್ಷೇತರರ ಸಹಾಯದಿಂದ ಬಹುಮತವು 170ಕ್ಕೆ ತಲುಪುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಅಂಕಿಅಂಶಗಳು ಮತ್ತು ಅಧಿಕಾರಕ್ಕೆ ಸಂಭವನೀಯ ಪರ್ಯಾಯಗಳ ಬಗ್ಗೆ ಸಂಸದ ಸಂಜಯ್ ರಾವುತ್ ಪ್ರಕಾರ, ಶಿವಸೇನೆ ಹೊರತುಪಡಿಸಿ, ಬಿಜೆಪಿ ದೊಡ್ಡ ಪಕ್ಷವಾಗಿ ಅಧಿಕಾರವನ್ನು ಪಡೆಯಬಹುದು.
ಬಿಜೆಪಿಯಲ್ಲಿ 105 ಶಾಸಕರು ಇ¨ªಾರೆ. ಇದರಲ್ಲಿ 40 ಸೀಟು ಹೆಚ್ಚಾಗದಿದ್ದರೆ, ಬಹುಮತ ಸರಕಾರ ರಚನೆ ಸಾಧ್ಯವಾಗದಿದ್ದರೆ, ವಿಶ್ವಾಸಾರ್ಹ ನಿರ್ಣಯದ ವೇಳೆ ಬಿಜೆಪಿ ಸರಕಾರ ಉರುಳುತ್ತದೆ. ಹಾಗೆಯೇ ಬಿಜೆಪಿಗೆ ಬೆಂಬಲ ದೊರೆಯುವುದು ಅಸಾಧ್ಯವೆಂದು ತೋರುತ್ತದೆ.
ಒಂದುವೇಳೆ ಎನ್‌ಸಿಪಿಯು ಬಿಜೆಪಿಗೆ ಬೆಂಬಲಿಸಿದರೆ, ಇದಕ್ಕೆ ಪ್ರತಿಯಾಗಿ ಸುಪ್ರಿಯಾ ಸುಳೆ ಅವರಿಗೆ ಕೇಂದ್ರದಲ್ಲಿ ಮತ್ತು ರಾಜ್ಯದ ಅಜಿತ್ ಪವಾರ್ ಅವರಿಗೆ ರಾಜ್ಯದಲ್ಲಿ ಹು¨ªೆಯನ್ನು ನೀಡಬೇಕಾಗುತ್ತದೆ ಇದು ಅಸಾಧ್ಯ ಎನ್ನಲಾಗಿದೆ.
ಬಿಜೆಪಿ ವಿಶ್ವಾಸಾರ್ಹ ನಿರ್ಣಯವನ್ನು ತಲುಪಲು ವಿಫಲವಾದರೆ ಶಿವಸೇನೆ ಸರಕಾರ ರಚನೆಯಲ್ಲಿ ಎರಡನೇ ದೊಡ್ಡ ಪಕ್ಷವೆಂದು ಹೇಳಿಕೊಳ್ಳಬಹುದು. ಎನ್‌ಸಿಪಿ (54), ಕಾಂಗ್ರೆಸ್ (44) ಮತ್ತು ಇತರರ ಸಹಾಯದಿಂದ ಬಹುಮತ 174 ಕ್ಕೆ ಏರುತ್ತದೆ. ಶಿವಸೇನೆ ತನ್ನದೇ ಆದ ಸಿಎಂ ಮಾಡಬಹುದು ಮತ್ತು ಅವರು ಸರಕಾರವನ್ನು ನಡೆಸುವ ಧೈರ್ಯವನ್ನು ಹೊಂದಿರುತ್ತದೆ ಎಂದು ಸಂಜಯ್ ರಾವುತ್ ಹೇಳಿದ್ದಾರೆ.