Advertisement
ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಸಾಮಾಜಿಕ ನ್ಯಾಯ ಸಮ್ಮೇಳನದಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಜಾತಿಗಣತಿಯ ಎಕ್ಸ್-ರೇಗೆ (ಸಂಪತ್ತು ಮರುಹಂಚಿಕೆ) ತಮ್ಮನ್ನು ತಾವು ದೇಶಭಕ್ತರು ಎಂದು ಹೇಳಿಕೊಳ್ಳುವವರು ಹೆದರಿದ್ದಾರೆ. ಆದರೆ, ಜಾತಿಗಣತಿ ನನ್ನ ಜೀವನದ ಗುರಿಯಾಗಿದ್ದು, ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದರು.
Related Articles
Advertisement
ಜಾತಿಗಣತಿ ನನಗೆ ರಾಜಕೀಯವಲ್ಲ: ಜಾತಿ ಗಣತಿಯು ತಮಗೆ ರಾಜಕೀಯವಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಿ ವಯನಾಡ್ ಸಂಸದ ಹೇಳಿಕೊಂಡಿದ್ದಾರೆ. “ಅದು ನನ್ನ ನನ್ನ ಜೀವನದ ಗುರಿ. ನಾನು ನಿಮಗೆ ಗ್ಯಾರಂಟಿ ನೀಡುತ್ತೇನೆ… ಜಾತಿಗಣತಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಜಾತಿ ಗಣತಿ ವಿಳಂಬವಾದಷ್ಟೂ ದೊಡ್ಡ ಶಕ್ತಿಯಾಗಿ ವಾಪಸ್ ಬರಲಿದೆ. ಹಾಗಾಗಿ, ಜೀವನದ ಗುರಿ ಮತ್ತು ರಾಜಕೀಯ ಮಧ್ಯೆ ವ್ಯತ್ಯಾಸವಿದೆ. ರಾಜಕೀಯದಲ್ಲಿ ನೀವು ಹೊಂದಾಣಿಕೆ ಮಾಡಿಕೊಳ್ಳಬಹುದು’ ಎಂದರು.
ಆತಂಕಕ್ಕೀಡಾಗಿರುವ ಪ್ರಧಾನಿ : ಕಾಂಗ್ರೆಸ್‌ನ ಕ್ರಾಂತಿಕಾರಕ ಚುನಾವಣಾ ಪ್ರಣಾಳಿಕೆಯನ್ನು ನೋಡಿದ ಬಳಿಕ ನರೇಂದ್ರ ಮೋದಿ ಅವರು ಆತಂಕಕ್ಕೀಡಾಗಿದ್ದಾರೆ. ನಮ್ಮ ಪ್ರಣಾಳಿಕೆಯು ಎಕ್ಸ್-ರೇ(ಜಾತಿ ಗಣತಿ) ಮತ್ತು ಮೋದಿ ಸೃಷ್ಟಿಸಿರುವ ಆದಾಯ ಅಸಮಾನತೆಯ ಬಗ್ಗೆ ಮಾತನಾಡುತ್ತಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದರು.