Advertisement
ಆಗ ನಾವ್ ಸಣ್ಣೋರಿದ್ವಿ. ನಮಗೂ ಅವಾಗ್ ಅಷ್ಟೊಂದ್ ತಿಳೀತಿರಲಿಲ್ಲ, ನೋಡಿದ್ದೆಲ್ಲ ಬೇಡತಿದ್ವಿ. ನಮ್ಮಮ್ಮ ಭಾಳ್ ಕಂಜೂಸ್. ರೊಕ್ಕಾ ಕೇಳಿದ್ರ ಕೊಡ್ತೇ ಇರ್ಲಿಲ್ಲ. ಹಾಗಂತ ನಾವೇನು ಶ್ರೀಮಂತರಲ್ರೀ. ಬಡತನ ಜಾಸ್ತಿನೇ ಇತ್ತು. ಅದಕ್ಕೇ ನಮ್ಮಮ್ಮ ಕಂಜೂಸ್ ಮಾಡೋಳು. ಒಂದಿನ ಹಿಂಗೇ ಬ್ಯಾಸಗಿ ಟೈಮ್. ಹೊರಾಗ್ ಭಾಳ್ ಬಿಸಿಲು, ಮನ್ಯಾಗೆ ಇದ್ದೆ. ನಮ್ಮವ್ವನು ಮನ್ಯಾಗೆ ಇದ್ಲು, ಆವತ್ತ ಮನಿಗಿ ನಮ್ಮವ್ವುನ ಚಿಕ್ಕವ್ವ ಮತ್ತ ಕಾಕಾ ಬಂದಿದ್ರು. ಅವ್ರು ಬಂದಾರಂತ ಹೇಳಿ ನಮ್ಮವ್ವ ಅವಲಕ್ಕಿ ಮತ್ತ ಚಹಾ ಮಾಡಿದ್ಲು, ಅವ್ರು ತಿಂದ್ರು, ನಾನೂ ತಿಂದೆ. ಹಂಗಾ ಮಾತು ಕತೆ ಆಡ್ಕೊಂತ ಕೂತ್ರು. ಅಲ್ಲಿಮಟ್ಟ ಸಂಜಿ ಆಗಿತ್ತು, ಸಂಜಿಮುಂದ ಅಲ್ಲೇ ಮನಿಮುಂದ್ ಬಾರಿಹಣ್ಣ ಮಾರಕ್ಕಿ ಬಂದ್ಲು, ನಾ ನೋಡಿದ ಕುಡ್ಲೆ ಜಿದ್ದ ಮಾಡಿದೆ. ನಂಗು ಬೇಕು ಅಂತ. ನಮ್ಮವ್ವ “ಬ್ಯಾಡ ಈಗಷ್ಟ ಅವಲಕ್ಕಿ ತಿಂದಿ ಅಲ್ಲ ಅಂದ್ಲು. ಆದರೂ ನಾ ಬಿಡ್ಲಿಲ್ಲ. ನನಗ್ ಬೇಕೇ ಬೇಕು ಅಂತ ಮತ್ತಿಷ್ಟು ಜಿದ್ದ ಮಾಡ್ದೆ, ಮನಿಗ್ ಬಂದೋರು ಪಾಪ ಹುಡುಗ ಜಿದ್ದ ಮಾಡ್ಲಿಕತ್ತಾನಂತ ಹೇಳಿ 2ರುಪಾಯಿ ಕೊಟ್ಟು, ಬಾರಿಹಣ್ಣು ತಗೋ ಅಂದ್ರು. ನಾನು ಅದಾ ಖುಷ್ಯಾಗ್ ಮೊದ್ಲು ಒಲ್ಲೇ ಅಂತ ಅಂದೆ. ಆದರೂ ಅವ್ರು ಒತ್ತಾಯ ಮಾಡಿ, ತಗೋ ಅಪ್ಪೀ ಅಂತ ಅವ್ರೇ ಹೊರಾಗ ಬಂದು ಬಾರಿಹಣ್ಣು ಇಸ್ಕೊಟ್ರಾ.
Related Articles
Advertisement