Advertisement

ಟ್ರಂಪ್‌ ವಿರುದ್ಧ ಸಾಕ್ಷ್ಯ ಕೊಟ್ಟು 64 ಕೋಟಿ ಗೆಲ್ಲಿ

07:25 AM Oct 16, 2017 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಹುದ್ದೆಯಿಂದ ಕೆಳಗಿಳಿಸುವ ಸಲುವಾಗಿ ಅಗತ್ಯ ಸಾಕ್ಷ್ಯಗಳನ್ನು ಕೊಟ್ಟರೆ 64 ಕೋಟಿ ರೂ.ಗಳ ಇನಾಮು ನೀಡುತ್ತೇನೆ…!

Advertisement

ಹೀಗಂತ ಪೋರ್ನ್ ಮ್ಯಾಗಜಿನ್‌ ಹೋಸ್ಟ್‌ಲರ್‌ ಪತ್ರಿಕೆಯ ಪ್ರಕಾಶಕ ಲ್ಯಾರಿ ಫ್ಲೈಂಟ್‌ ಘೋಷಿಸಿದ್ದಾರೆ. ಈ ಬಗ್ಗೆ ಅಲ್ಲಿನ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯಲ್ಲಿ ಒಂದು ಪೂರ್ಣ ಪುಟ ಜಾಹೀರಾತು ನೀಡಿರುವ ಲ್ಯಾರಿ, ಟ್ರಂಪ್‌ರನ್ನು ಮಹಾಭಿಯೋಗಕ್ಕೆ ಒಳಪಡಿಸುವ ಸಲುವಾಗಿ ಗಟ್ಟಿ ಸಾಕ್ಷ್ಯ ಬೇಕು. ಕೊಡಿ, 64 ಕೋಟಿ ರೂ. ತೆಗೆದು ಕೊಂಡು ಹೋಗಿ ಎಂಬ ಆಫ‌ರ್‌ ನೀಡಿದ್ದಾರೆ. 

ಡೊನಾಲ್ಡ್‌ ಟ್ರಂಪ್‌ ಕೋಟ್ಯಾಧೀಶ ಆಗಿದ್ದು, ಈ ಪ್ರಮಾಣದ ಹಣ ಗಳಿಕೆಯ ವೇಳೆ ತಪ್ಪು ಮಾಡದೇ ಇರಲು ಸಾಧ್ಯವೇ ಇಲ್ಲ. ಹುಡುಕಿದರೆ ತಪ್ಪುಗಳು ಸಿಕ್ಕೇ ಸಿಗುತ್ತವೆ ಎಂಬ ವಿಶ್ವಾಸ ನನಗಿದೆ. ಯಾರಿಗಾ ದರೂ ಅಂಥ ತಪ್ಪುಗಳು ಸಿಕ್ಕಿದಲ್ಲಿ ಮಾಹಿತಿ ನೀಡಬಹುದು‡. ಎಂದಿದ್ದಾರೆ. ಅಲ್ಲದೆ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ ಗೆದ್ದ ಬಗೆ ಮತ್ತು ರಷ್ಯಾದ ಸಹಕಾರದ ಬಗ್ಗೆಯೂ ಲ್ಯಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next