Advertisement
ಆಂತರಿಕ ಅಭಿವ್ಯಕ್ತಿಆಂತರಿಕ ಅಭಿವ್ಯಕ್ತಿ ನಮ್ಮ ಆಂತರ್ಯದಲ್ಲಿ ಅಡಗಿರುವ ನೋವು, ನಲಿವು, ಬೇಸರ ಮುಂತಾದವುಗಳ ಹೊರಹಾಕುವ ಪರಿಯಾಗಿದೆ. ಇದು ಏಷ್ಟೋ ಬಾರಿ ನಮಗರಿವಿಲ್ಲದಂತೆ ನಮ್ಮ ಏಕಾಂತ ಕಾಲದಲ್ಲಿ ಹೋರಹೊಮ್ಮುತ್ತದೆ. ನಮ್ಮನ್ನು ನಾವೇ ಸಮಾಧಾನ ಪಡಿಸಿಕೊಳ್ಳುವುವುದು, ಒಬ್ಬರೇ ಏನೆನೋ ನೆನೆದು ನಗುವುದು, ಯಾವತ್ತೋ ಆದ ಘಟನೆ ನೆನೆಸಿ ಅಳವುದು, ನಮ್ಮಷ್ಟಕ್ಕೆ ನಾವೇ ಮಾತಾಡುವುದು ಎಲ್ಲವೂ ಇದರ ಸಾಲಿಗೆ ಸೇರಿದೆ. ಈ ಅಭಿವ್ಯಕ್ತಿ ಮಿತಿ ಮೀರಿದರೆ ಒಂದು ಕಾಯಿಲೆ ಆಗಿಯೂ ಬದಲಾಗುತ್ತದೆ. ಹಾಗೆಂದು ಇದು ತಪ್ಪಲ್ಲ ಇದರಲ್ಲೂ ಹಲವಾರು ಉಪಯುಕ್ತತೆಗಳಿರುವುದನ್ನು ಸಹ ನೀವು ಗಮನಿಸಬೇಕಾಗಿದೆ. ನಿಮಗೆ ಯಾರೊಂದಿಗಾದರೂ ಬೇಸರ ಬಂದಾಗ ಎಲುಬಿಲ್ಲದ ನಾಲಿಗೆ ಬುದ್ದಿಯ ಸ್ಥಿಮಿತವಿಲ್ಲದೆ ಬಡಬಡಾಯಿಸುತ್ತದೆ. ಅಂತಹ ಸಂದರ್ಭದಲ್ಲಿ ನೀವು ಕನ್ನಡಿ ನೋಡಿ ಕೋಪವನ್ನು ಅಭಿವ್ಯಕ್ತಿಸಿದಾಗ ನಿಮಗೂ ಸಮಾಧಾನವಾಗುತ್ತದೆ ಜತೆಗೆ ಇತರರಿಗೂ ಬೇಸರ ಆಗಲಾರದು.
ಎಷ್ಟೋ ಸಲ ನಮ್ಮ ಪುಟ್ಟ ಪುಟ್ಟ ಕನಸುಗಳು ಈಡೇರದಿದ್ದಾಗ ಹತಾಶರಾಗುತ್ತೇವೆ. ಇಂತಹ ಹತಾಶೆ ಮಾನಸಿಕ ಖನ್ನತೆಗೂ ಕಾರಣವಾಗಬಹುದು. ಆದರೆ ಈಡೇರದ ಆಸೆಯನ್ನೇ ಮನದಲ್ಲಿಟ್ಟುಕೊಂಡು ಇತರರ ಮೇಲೆ ಕೆಂಡಕಾರಿ ಅವರ ಭಾವನೆಗಳಿಗೆ ಘಾಸಿಗೊಳಿಸುವ ಮನೋಭಾವನೆ ನಿಮ್ಮದಾಗದಿರಲಿ. ಬದಲಾಗಿ ಎಂದಾದರೂ ಅಂತಹ ಆಸೆ ಈಡೇರುತ್ತದೆ ಎಂಬ ಭರವಸೆ ನಿಮ್ಮಲ್ಲಿದ್ದರೆ ನಿಮ್ಮ ಬೇಸರವೂ ದೂರ ಸರಿಯುತ್ತದೆ.
Related Articles
Advertisement