ದೇವನಹಳ್ಳಿ: ಗ್ರಾಮೀಣ ಪ್ರದೇಶದಲ್ಲಿನ ಬಡ ರೋಗಿಗಳಿಗೆ ದೂರದ ನಗರ ಹಾಗೂ ಪಟ್ಟಣಗಳಿಗೆ ತೆರಳಿ ತಮ್ಮ ಕಾಯಿಲೆಗೆ ತೆರಳಿ ಚಿಕಿತ್ಸೆ ಪಡೆಯುವುದು ಅಸಾಧ್ಯವೆಂಬುದನ್ನು ಮನದಂಡು ರಾಮಯ್ಯ ಲೀನಾ ಆಸ್ಪತ್ರೆ ವತಿಯಿಂದ ಸಾಮಾನ್ಯ ಶಸ್ತ್ರ ಚಿಕಿತ್ಸಾ ಆರೋಗ್ಯ ಶಿಬಿರ ಹಮ್ಮಿಕೊಂಡಿದೆ ಎಂದು ಎಂಎಸ್ ರಾಮಯ್ಯ ಮೆಡಿಕಲ್ ಕಾಲೇಜಿನ ಪ್ರೊ.ಡಾ.ನಾರಾಯಣಸ್ವಾಮಿ ತಿಳಿಸಿದರು.
ನಗರದ ಪ್ರಶಾಂತ ನಗರದ ನರಸಿಂಹಯ್ಯ ಲೇಔಟ್‌ನ ರಾಮಯ್ಯ ಲೀನಾ ಆಸ್ಪತ್ರೆ ಆವರಣದಲ್ಲಿ ಆಸ್ಪತ್ರೆ ವತಿಯಿಂದ
ನಡೆದ ಉಚಿತ ಮೂತ್ರರೋಗ (ಯೂರೋಲಜಿ) ಮತ್ತು ಸಾಮಾನ್ಯ ಶಸ್ತ್ರ ಚಿಕಿತ್ಸಾ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು
ಮಾತನಾಡಿದರು.
ಸಾಮಾಜಿಕ ಕಳಕಳಿ ಮತ್ತು ಸೇವಾ ಮನೋಭಾವದಿಂದ ಆಸ್ಪತ್ರೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮಾಡುತ್ತಿದೆ. ಯಾವುದೇ ಕಾಯಿಲೆ ಬಂದಾಗ ತಕ್ಷಣ ವೈದ್ಯರ ಬಳಿ ಬಂದು ಸೂಕ್ತ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದರು.
ರಾಮಯ್ಯ ಲೀನಾ ಆಸ್ಪತ್ರೆ ವತಿಯಿಂದ ಸಾಮಾನ್ಯ ಶಸ್ತ್ರ ಚಿಕಿತ್ಸಾ ಆರೋಗ್ಯ ಶಿಬಿರದಲ್ಲಿ ಕಿಡ್ನಿ ಕಲ್ಲಿನ ಸಮಸ್ಯೆ, ಮೂತ್ರ ಮಾಡುವಾಗ ಉರಿ ಅಥವಾ ಕಷ್ಟವಾಗುತ್ತಿರುವುದು, ಮೂತ್ರನಾಳದಲ್ಲಿ ಕಲ್ಲು, ಪ್ರೊಸ್ಟೇಟ್ ಕ್ಯಾನ್ಸರ್, ಮೂತ್ರದಲ್ಲಿ ರಕ್ತ, ಹೆಚ್ಚು ಮೂತ್ರ ಹೋಗುವುದು/ಕಡಿಮೆ ಮೂತ್ರ, ಕೆಮ್ಮುವಾಗ ಅಥವಾ ಸೀನುವಾಗ ಮೂತ್ರ ಹೋಗುವುದು. ಯೂರೇತ್ರಲ್ ಸ್ಟ್ರಕ್ಚರ್ ಇತರೆ ಯಾವುದೇ ಕಿಡ್ನಿ ಸಂಬಂಧಿತ ತೊಂದರೆಗಳು, ಬಿಪಿ, ಸಕ್ಕರೆ ಕಾಯಿಲೆ, ಇತರೆ ಕಾಯಿಲೆಗಳಿಗೆ ಪರೀಕ್ಷೆ ಮಾಡಿ ಔಷಧಿ ಉಪಚಾರ ನೀಡಲಾಗುತ್ತಿದೆ.
ಪಿಎಸ್‌ಎ (ಪ್ರೋಸ್ಟೇಟ್ ಕ್ಯಾನ್ಸರ್ ತಪಾಸಣಾ ಪರೀಕ್ಷೆಗಳು), ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಸಾಮಾನ್ಯ ಶಸ್ತ್ರ ಚಿಕಿತ್ಸೆ ವೈದ್ಯರಿಂದ ತಪಾಸಣೆ, ವೈಧ್ಯರು ಶಿಫಾರಸ್ಸು ಮಾಡಿದ ಇತರೇ ಪರೀಕ್ಷೆಗಳನ್ನು ಮಾಡಲಾಗುತ್ತಿದ್ದು ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಪ್ರತಿ ಶನಿವಾರ ಆರೋಗ್ಯ ತಪಾಸಣಾ ಶಿಬಿರ ಮಾಡಲಾಗುತ್ತಿದೆ ಎಂದರು.
ಆಡಳಿತಾಧಿಕಾರಿ ಭಾರ್ಗವಿ, ಈಗಾಗಲೇ ಹಲವರು ಸದುಪಯೋಗಪಡಿಸಿಕೊಂಡಿದ್ದಾರೆಂದರು. ವೈದ್ಯರಾದ ನ್ಯೂರಾಲಜಿ ವಿಭಾಗದ ಡಾ.ದೊರೆಸ್ವಾಮಿ, ಡಾ.ಅಭಿಷೇಕ್, .ಡಾ.ನರೇಶ್ ಶೆಟ್ಟಿ, ಆಡಳಿತಾಧಿಕಾರಿ ಡಾ.ಅರುಣ್ ಮತ್ತಿತರರಿದ್ದರು.