Advertisement

ಪೊಲೀಸರೊಂದಿಗೆ ಉತ್ತಮ ಬಾಂಧವ್ಯವಿರಲಿ

11:17 AM Dec 18, 2021 | Team Udayavani |

ಅಫಜಲಪುರ: ಪೊಲೀಸ್‌ ಇಲಾಖೆ ಇರುವುದೇ ಸಾರ್ವಜನಿಕರ ಸೇವೆಗಾಗಿ. ಹೀಗಾಗಿ ಸಾರ್ವಜನಿಕರು ಭಯಪಟ್ಟುಕೊಳ್ಳದೇ ಪೊಲೀಸ್‌ ಇಲಾಖೆ ಜೊತೆಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು ಎಂದು ಪಿಎಸ್‌ಐ ವಿಶ್ವನಾಥ ಮುದರೆಡ್ಡಿ ಹೇಳಿದರು.

Advertisement

ತಾಲೂಕಿನ ಸೊನ್ನ ಗ್ರಾಮದಲ್ಲಿ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಪಹರಣ, ಕಳ್ಳತನ, ದರೋಡೆ, ಕೊಲೆ ಮುಂತಾದ ಅಪರಾಧ ಕೃತ್ಯಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿವೆ. ನಿರ್ಜನ ಪ್ರದೇಶಗಳಲ್ಲಿ ಮಹಿಳೆಯರು ಹೋಗಬೇಕಾದ ಅನಿವಾರ್ಯತೆ ಇದ್ದಾಗ ಜಾಗೃತಿ ವಹಿಸಬೇಕು. ಒಬ್ಬಂಟಿಯಾಗಿ ಓಡಾಡುವಾಗ, ದ್ವಿಚಕ್ರ ವಾಹನಗಳಲ್ಲಿ ಬರುವ ಸರಗಳ್ಳರ ಕುರಿತು ಜಾಗೃತಿ ವಹಿಸಬೇಕು ಎಂದರು.

ನಿಮ್ಮ ಮನೆಗಳಿಗೆ ಚಿನ್ನ ಪಾಲಿಶ್‌ ಮಾಡುವ ನೆಪದಲ್ಲಿ ಬಂದು ಕಳ್ಳತನ ಮಾಡಬಹುದು, ಶಾಲೆ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿನಿಯರಿಗೆ ಚುಡಾಯಿಸುವುದು, ಕಿರುಕುಳ ನೀಡುವುದು ಮುಂತಾದವು ನಡೆದಾಗ ಭಯ ಪಡದೆ ಪೊಲೀಸ್‌ರಿಗೆ ಮಾಹಿತಿ ನೀಡಿ. ನಾವಿರುವುದು ನಿಮ್ಮ ಸೇವೆಗಾಗಿ, ನಿಮ್ಮ ರಕ್ಷಣೆಗಾಗಿ ಎಂದು ತಿಳಿಸಿದರು.

ಸಿಪಿಐ ಜಗದೇವಪ್ಪ ಪಾಳಾ ಮಾತನಾಡಿ, ದಿನೇ ದಿನೇ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಾರ್ವಜನಿಕರು ಜಾಗೃತಿಯಿಂದ ಇರಬೇಕು. ಯಾವುದೇ ಸಮಸ್ಯೆಗಳಾದರೆ ತಕ್ಷಣ ಪೊಲೀಸ್‌ ಇಲಾಖೆಗೆ ತಕ್ಷಣ 112 ಸಂಖ್ಯೆಗೆ ಕರೆ ಮಾಡಿ ತಿಳಿಸಿ ಎಂದರು. ಸೊನ್ನ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಪೊಲೀಸ್‌ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next