Advertisement

ಹಾವಂಜೆ ಬಿಲ್ಲವರ ಸೇವಾ ಸಂಘ: ನಾರಾಯಣಗುರು ಸಮುದಾಯ ಭವನ ಉದ್ಘಾಟನೆ

09:14 AM Sep 07, 2017 | Team Udayavani |

ಬ್ರಹ್ಮಾವರ: ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ತಣ್ತೀವನ್ನು ಸಾರಿದ ಶ್ರೀ ನಾರಾಯಣಗುರುಗಳ ಆದರ್ಶವನ್ನು ಪಾಲಿಸಿದರೆ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಅವರು ಬುಧವಾರ ಹಾವಂಜೆ, ಕೊಳಲಗಿರಿ, ಬೆಳ್ಳಂಪಳ್ಳಿ, ಕುಕ್ಕೆಹಳ್ಳಿ ವ್ಯಾಪ್ತಿಯ ಬಿಲ್ಲವರ ಸೇವಾ ಸಂಘದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಗುರುಜಯಂತಿ ಮಹೋತ್ಸವ ಮತ್ತು ನೂತನ ನಾರಾಯಣಗುರು ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು.
ಸಮುದಾಯ ಭವನ ಸ್ವಾಭಿಮಾನದ ಸಂಕೇತ. ಪರಸ್ಪರ ಒಗ್ಗಟ್ಟು, ಸಂಘಟನೆಗೆ ಇದು ಪೂರಕ ಎಂದರು.

ಶಕ್ತಿ ತುಂಬುವ ಕಾರ್ಯ
ಹಿಂದುಳಿದ ವರ್ಗದವರ ನೂರಾರು ಸಮುದಾಯ ಭವನಗಳಿಗೆ ರಾಜ್ಯ ಸರಕಾರ ಕೋಟ್ಯಂತರ ರೂ. ಅನುದಾನ ನೀಡಿದೆ. ತನ್ಮೂಲಕ ಹಿಂದುಳಿದ ವರ್ಗಕ್ಕೆ ಶಕ್ತಿ ತುಂಬಿದೆ ಎಂದು ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಸಂಘದ ಅಧ್ಯಕ್ಷ ದೋಗು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ. ರಘುಪತಿ ಭಟ್‌, ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಹಾವಂಜೆ ಗ್ರಾ.ಪಂ. ಅಧ್ಯಕ್ಷೆ ವಸಂತಿ ಎಸ್‌. ಶೆಟ್ಟಿ, ಮುಗ್ಗೇರಿ ಗರೋಡಿ ಆಡಳಿತ ಮೊಕ್ತೇಸರ ಕಂಪು ಶೆಟ್ಟಿ, ಪ್ರ. ಅರ್ಚಕ ಭೋಜು ಪೂಜಾರಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಮಲ್ಪೆ ರಾಘವೇಂದ್ರ, ಉದ್ಯಮಿ ಸದಾಶಿವ ಹೆಗ್ಡೆ ಬಾಣಬೆಟ್ಟು, ಜಿ.ಪಂ. ಮಾಜಿ ಅಧ್ಯಕ್ಷ ಬಿ.ಎನ್‌. ಶಂಕರ ಪೂಜಾರಿ, ಉಪ್ಪೂರು ವ್ಯ.ಸೇ.ಸ. ಸಂಘದ ಅಧ್ಯಕ್ಷ ಎನ್‌. ರಮೇಶ್‌ ಶೆಟ್ಟಿ, ಕುಂಜಾಲು ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಬಾಬು ಕೋಟ್ಯಾನ್‌, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಉದಯ ಕುಮಾರ್‌ ಶೆಟ್ಟಿ, ಗ್ರಾ. ಯೋಜನೆ ಕೃಷಿ ಅಧಿಕಾರಿ ಶಿವಾನಂದ್‌, ಪಿಡಬ್ಲೂ ಡಿ ಗುತ್ತಿಗೆದಾರ ಉದಯ ಕುಮಾರ್‌ ಶೆಟ್ಟಿ ಮುನಿಯಾಲು, ಉಪ್ಪೂರು ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಸಂತೋಷ್‌ ಕೋಟ್ಯಾನ್‌, ಹಾವಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುರೇಶ್‌ ಬಿ. ಶೆಟ್ಟಿ,
ಬಿಲ್ಲವ ಪರಿಷತ್‌ ಸಂಚಾಲಕ ನವೀನ್‌ ಅಮೀನ್‌ ಶಂಕರಪುರ, ಹಾವಂಜೆ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಯು. ಸನಿಲ್‌ ಉಪಸ್ಥಿತರಿದ್ದರು.

ಕಟ್ಟಡದ ಆರ್ಕಿಟೆಕ್ಟ್ ಶಶಿಧರ್‌ ಪಿ. ಅವರನ್ನು ಸಮ್ಮಾನಿಸಲಾಯಿತು. ಕಟ್ಟಡ ಸಮಿತಿ ಅಧ್ಯಕ್ಷ ಹರೀಶ್‌ ಎಸ್‌. ಪೂಜಾರಿ ಅವರು ಅತಿಥಿಗಳನ್ನು ಗೌರವಿಸಿದರು. ಉದಯ ಕೋಟ್ಯಾನ್‌ ಸ್ವಾಗತಿಸಿ, ಸುಂದರ ಕೋಟ್ಯಾನ್‌ ಪ್ರಸ್ತಾವನೆಗೈದರು. ಪ್ರಶಾಂತ್‌ ಶೆಟ್ಟಿ ಹಾವಂಜೆ, ದಯಾನಂದ್‌ ಉಗ್ಗೇಲ್‌ಬೆಟ್ಟು ನಿರೂಪಿಸಿ, ಪ್ರಸಾದ್‌ ಸುವರ್ಣ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next