ಭೋಪಾಲ್: ಇಡೀ ದೇಶದ ಗಮನ ಸೆಳೆದಿರುವ ಭೋಪಾಲ್ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಪ್ರಚಾರದ ಕಾವು ಹೆಚ್ಚುತ್ತಿದ್ದು, ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರ ಗೆಲುವಿಗಾಗಿ ಪ್ರಾರ್ಥಿಸಿ ಸಾವಿರಾರು ಸಾಧುಗಳು ಹಠಯೋಗ ಆರಂಭಿಸಿದ್ದಾರೆ.
ಕಂಪ್ಯೂಟರ್ ಬಾಬಾ ನೇತೃತ್ವದಲ್ಲಿ ಸೈಫಿಯಾ ಮೈದಾನದಲ್ಲಿ ಸಾಧುಗಳು ಹಠ ಯೋಗ, ಹೋಮ ವೃತ ಆರಂಭಿಸಿದ್ದಾರೆ.
ಕಂಪ್ಯೂಟರ್ ಬಾಬಾ (ನಾಮ್‌ದಿಯೋ ದಾಸ್ ತ್ಯಾಗಿ) ಗೆ ಬಿಜೆಪಿ ಅಧಿಕಾರದಲ್ಲಿದ್ದಾಗ ಶಿವರಾಜ್ ಸಿಂಗ್ ಚೌಹಾಣ್ ಅವರು ಸಚಿವ ಮಟ್ಟದ ಸ್ಥಾನಮಾನವನ್ನು ನೀಡಿದ್ದರು.
ಇದೀಗ ಬಿಜೆಪಿ ಪಾಳಯ ತೊರೆದು ಕಾಂಗ್ರೆಸ್‌ಗೆ ಜಿಗಿದಿರುವ ಬಾಬಾ ಬಿಜೆಪಿ ಅಧಿಕಾರಕ್ಕೆ ಬಂದು 5 ವರ್ಷದೊಳಗೆ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಹೇಳಿತ್ತು. ರಾಮ ಮಂದಿರ ಆಗಿಲ್ಲ, ಹಾಗಾಗಿ ನಾವು ಮೋದಿ ಪರ ಇಲ್ಲ ಎಂದಿದ್ದಾರೆ.
ಸಾಧುಗಳು ವಿಶೇಷ ಪೂಜೆಯಲ್ಲಿ ದಿಗ್ವಿಜಯ್ ಸಿಂಗ್ ಅವರೂ ಭಾಗಿಯಾಗಿದ್ದರು.
ವರದಿಯಾದಂತೆ ಸಮಾರು 5 ರಿಂದ 7 ಸಾವಿರ ಮಂದಿ ಸಾಧುಗಳು ಮುಂದಿನ ಮೂರು ದಿನಗಳ ಕಾಲ ಪೂಜಾ ವಿಧಿಗಳನ್ನು ನಡೆಸಲಿದ್ದಾರೆ. ಭಜನೆ ಕೀರ್ತನೆಗಳನ್ನು ಹಾಡುತ್ತಾ ದಿಗ್ವಿಜಯ್ ಪರ ಮತಗಳನ್ನು ಕೇಳುವವರಿದ್ದಾರೆ.