Advertisement
ಖಾಸಗಿ ನೀರುಈ ಪಂಚಾಯತ್‌ಗೆ ಕೆಂಚನೂರು, ಕನ್ಯಾನ, ಹಟ್ಟಿಯಂಗಡಿ ಮೂರು ಗ್ರಾಮಗಳಿದ್ದು 114 ಕೆರೆಗಳು, 559 ಬಾವಿಗಳು ಇವೆ. ಹಟ್ಟಿಯಂಗಡಿಯಲ್ಲಿ 338 ಕುಟುಂಬಗಳು, 1897 ಜನಸಂಖ್ಯೆಯಿದೆ. 120ರಷ್ಟು ನಳ್ಳಿನೀರಿನ ಸಂಪರ್ಕಗಳಿದ್ದು ತೀರಾ ಈಚಿನವರೆಗೆ ನೀರಿನ ಸಮಸ್ಯೆ ಇರಲಿಲ್ಲ. ಪಂಚಾಯತ್ ನೀರಿಗಿಂತ ಖಾಸಗಿ ನೀರು ನಂಬಿದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಹಾಗಿದ್ದರೂ ಬೇಸಗೆಯಲ್ಲಿ ಅಂತರ್ಜಲ ಮಟ್ಟ ಕುಸಿದು ಕೆರೆ, ಬಾವಿಗಳಲ್ಲಿ ನೀರು ಆಳಕ್ಕಿಳಿದು ಕುಡಿಯಲು ಕೂಡ ತತ್ವಾರ ಉಂಟಾಗುತ್ತಿದೆ.
ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಸೌಕೂರು ಸಿದ್ದಾಪುರ ಏತನೀರಾವರಿಗೆ , ವಾರಾಹಿ ನೀರಿಗಾಗಿ 60 ಕೋ.ರೂ. ನೀಡುವಂತೆ ಮನವಿ ಮಾಡಿದ್ದರು. ಅದರಂತೆ ಈಗಿನ ಸಮ್ಮಿಶ್ರ ಸರಕಾರ ಮಂಡಿಸಿದ ಬಜೆಟ್‌ನಲ್ಲಿ 50 ಕೋ.ರೂ. ಈ ಯೋಜನೆಗಾಗಿ ಅನುದಾನ ಮೀಸಲಿಟ್ಟಿದೆ. ಈ ಕಾಮಗಾರಿ ನಡೆದರೆ ಹಟ್ಟಿಯಂಗಡಿ ಪರಿಸರದ ಅಂತರ್ಜಲಮಟ್ಟ ಹೆಚ್ಚಾಗಲಿದ್ದು ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಆಶಿಸಲಾಗಿದೆ. ಎಲ್ಲೆಲ್ಲಿ?
ಕೆಂಚನೂರು, ಕದರಿಗುಡ್ಡ, ನೆಂಪು, ಗುಡ್ರಿ, ಎಲ್ಕೋಡು, ಬಟ್ರಾಡಿ, ಜಾಡುಕಟ್ಟು, ಮಾವಿನಕಟ್ಟೆ, ಕಾಂಜೂರುೆ, ಜನತಾ ಕಾಲನಿಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗುತ್ತದೆ. 850 ಅಡಿ ಕೊರೆದು ಎರಡು ಕೊಳವೆ ಬಾವಿ ತೆಗೆದರೂ ನೀರು ಸಿಕ್ಕಿಲ್ಲ. ಒಟ್ಟು 6 ಕೊಳವೆ ಬಾವಿಗಳಿದ್ದರೂ ಉಪಯೋಗಕ್ಕೆ ಸಿಕ್ಕಿರುವುದು 2 ಮಾತ್ರ. ಪಂಚಾಯತ್‌ನದ್ದು 4 ತೆರೆದ ಬಾವಿಗಳಿದ್ದು ಕುಡಿಯುವ ನೀರಿಗೆ ಆಶ್ರಯವಾಗಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾರ್ವಜನಿಕರ ಕುಡಿಯುವ ನೀರಿನ ಉಪಯೋಗಕ್ಕಾಗಿ ಸರಕಾರಿ ಬಾವಿ ತೆಗೆಯಬಹುದು. ಆದರೆ ಕಾರ್ಮಿಕರು ದೊರೆಯುತ್ತಿಲ್ಲ ಎಂಬ ಅಳಲು ಇದೆ. ಅದೇ ಯೋಜನೆಯಲ್ಲಿ ಖಾಸಗಿ ಬಾವಿ ಕೂಡ ತೆಗೆಸಬಹುದು. ಅದಕ್ಕಾದರೂ ಒಂದಷ್ಟು ಮಂದಿ ಉತ್ಸಾಹ ತೋರಿದ್ದರು ಎನ್ನುತ್ತಾರೆ ಪಂಚಾಯತ್‌ನವರು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಾಗ ತೀವ್ರತರ ಸಮಸ್ಯೆ ಇರುವ ಪ್ರದೇಶಗಳ ಜತೆಗೆ ಬೇಸಗೆಯ ಬಿಸಿ ಏರುತ್ತಿದ್ದಂತೆ ಖಾಸಗಿಯಾಗಿ ನೀರಿನಾಶ್ರಯ ಇರುವವರಿಗೂ ಕೊಡಬೇಕಾಗುತ್ತದೆ. ಏಕೆಂದರೆ ಅಲ್ಲಿ ಕೂಡ ಜಲಮೂಲದ ಸೆಲೆ ಕಡಿಮೆಯಾಗಿರುತ್ತದೆ.
Related Articles
ಕಡೆRರೆಗುಡ್ಡ, ಕಡಿರೆ ಮೊದಲಾದ ಕಾಲನಿಗಳಲ್ಲಿ ತೀವ್ರವಾದ ನೀರಿನ ಸಮಸ್ಯೆ ಉಂಟಾಗುತ್ತದೆ. ಈ ಬಾರಿ ಬೇಗನೇ ನೀರು ಕಡಿಮೆಯಾಗಿದ್ದು , ಪಂಚಾಯತ್ ವತಿಯಿಂದ ಕೊಳವೆಬಾವಿ ಕೊರೆಸಿದಾಗ ನೀರು ದೊರೆಯಲಿಲ್ಲ. ಆದ್ದರಿಂದ ತೆರೆದ ಬಾವಿ ತೆಗೆಯಲು ಅನುದಾನ ನೀಡುವಂತೆ ಶಾಸಕರಿಗೆ ಮನವಿ ನೀಡಲಾಗಿದೆ. ಬಜೆಟ್‌ನಲ್ಲಿ ಘೋಷಣೆಯಾದ ಸೌಕೂರು ಸಿದ್ದಾಪುರ ಏತ ನೀರಾವರಿ ಯೋಜನೆಯಿಂದ ಈ ಭಾಗಕ್ಕೂ ಪ್ರಯೋಜನ ದೊರೆಯಲಿದೆ.
– ಕೆ. ರಾಜೀವ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷರು
Advertisement
ಕಾಲನಿಗಳಿಗೆ ಸಮಸ್ಯೆಬೇಸಗೆಯಲ್ಲಿ ಜನತಾಕಾಲನಿಗಳಿಗೆ ನೀರಿನ ಸಮಸ್ಯೆ ಉಂಟಾಗುತ್ತದೆ. ಟ್ಯಾಂಕರ್ ಮೂಲಕ ನೀರಿನ ಸರಬರಾಜು ಮಾಡಲಾಗುತ್ತದೆ. ಸಮಸ್ಯೆ ಬಂದಲ್ಲಿ ತತ್‌ಕ್ಷಣ ಸ್ಪಂದನೆ ನೀಡಲಾಗುತ್ತದೆ.
– ರಿಯಾಜ್ ಅಹ್ಮದ್, ಪಂ. ಅಭಿವೃದ್ಧಿ ಅಧಿಕಾರಿ – ಲಕ್ಷ್ಮೀ ಮಚ್ಚಿನ