Advertisement

ಹಟ್ಟಿಯಂಗಡಿ ದೇವಸ್ಥಾನ:ಅಷ್ಟೋತ್ತರ ಸಹಸ್ರ ನಾಳಿಕೇರ ಯಾಗ

12:16 PM Feb 04, 2018 | |

ಕುಂದಾಪುರ: ಹಟ್ಟಿಯಂಗ ಡಿಯ ಶ್ರೀ ಸಿದ್ಧಿವಿನಾಯಕ ದೇವ ಸ್ಥಾನದ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾಗಣಪತಿ ಯಾಗ (1,008 ತೆಂಗಿನ ಕಾಯಿ), ನವಚಂಡಿ ಹವನ ಮತ್ತು ಸಂಕಷ್ಟಹರ ಚತುರ್ಥಿ ಮಹಾಪೂಜೆ ಶನಿವಾರ ನೆರವೇರಿತು.

Advertisement

ಸಾವಿರಾರು ಭಕ್ತರು ಶ್ರೀ ದೇವರದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಧಾರ್ಮಿಕ ಮಹೋತ್ಸ ವದ ಅಂಗವಾಗಿ ನವಗ್ರಹ ಹವನ, ಬ್ರಹ್ಮಣಸ್ಪತಿಸೂಕ್ತ ಹವನ, ಶ್ರೀಸೂಕ್ತ ಹವನ, ಪುರುಷ ಸೂಕ್ತ ಹವನ, ಲಕ್ಷ್ಮೀನಾರಾಯಣ ಹೃದಯ ಪಾರಾ ಯಣ ಮತ್ತು ಹವನ, ಧನ್ವಂತರಿ ಹವನ, ನವಾಕ್ಷರೀ ಮಂತ್ರಜಪ ಹಾಗೂ ಹವನ, ರುದ್ರಪಾರಾಯಣ ಹಾಗೂ ರುದ್ರ ಹವನ, ದುರ್ಗಾ ಹೋಮ, ಅಥರ್ವಶೀರ್ಷ ಹವನ, ಲಲಿತಾ ಸಹಸ್ರನಾಮ ಹವನ, ಚಂಡಿಕಾಪಾರಾಯಣ, ಅಧಿವಾಸ ಹವನ,ಕಲಾತಣ್ತೀ ಹವನ, ಶ್ರೀ ಸ್ವಾಮಿಗೆ 108 ಕಲಶಾಭಿಷೇಕ, ಕನಕಾಭಿಷೇಕ ನೆರವೇರಿತು. ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿತ್ತು.

ಆಡಳಿತ ಧರ್ಮ ದರ್ಶಿ ಎಚ್‌. ರಾಮಚಂದ್ರ ಭಟ್‌, ಪ್ರಧಾನ ಅರ್ಚಕ ಬಾಲಚಂದ್ರ ಭಟ್‌, ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲ ಶರಣ್‌ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next